Mysore : ಕಸದ ರಾಶಿಯಲ್ಲಿ ಮಾಜಿ ಸಿಎಂ ಹಾಗೂ ಮಾಜಿ ಸಂಸದರ ಫೋಟೊಗಳು …

ಮೈಸೂರು : ಮಾಜಿ ಸಿಎಂ ಧರಂಸಿಂಗ್ ಹಾಗೂ ಮಾಜಿ ಸಂಸದ ವಿಶ್ವನಾಥ್ ಅವರ ಭಾವಚಿತ್ರಗಳನ್ನ ಮೈಸೂರಿನ ಜಿಲ್ಲಾ ಪಂಚಾಯತ್ ಆವರಣದ ಹಿಂಭಾಗದಲ್ಲಿ ಕಸದ ರಾಶಿಯಲ್ಲಿ ಬಿಸಾಡಲಾಗಿದ್ದು,ಇದು ಇದೀಗ ಚರ್ಚೆಗೆ ಗ್ರಾಸವಾಗಿದೆ.


ಜಿಲ್ಲಾ ಪಂಚಾಯತ್ ನ ಹೊರ ಆವರಣದಲ್ಲಿರುವ ಕಸದ ರಾಶಿಯಲ್ಲಿ ಮಾಜಿ ಸಿಎಂ ಧರಂ ಸಿಂಗ್, ಮಾಜಿ ಸಂಸದ ವಿಶ್ವನಾಥ್, ಮಾಜಿ ಜಿ.ಪಂ ಅಧ್ಯಕ್ಷರ ಫೋಟೋ ಸಹ ಕಸದ ರಾಸಿಯಲ್ಲಿ ಬಿದ್ದಿದ್ದು, ಇದು ಜಿಲ್ಲಾಡಳಿತದ ಬೇಜವಾಬ್ದಾರಿತನವನ್ನ ಎತ್ತು ತೋರಿದೆ ಎನ್ನಲಾಗುತ್ತಿದೆ. ಗಣ್ಯರ ಭಾವಚಿತ್ರಗಳನ್ನು ಚರಂಡಿಗೆ ಬಿಸಾಡಬಾರದು. ಅದರಲ್ಲೂ ಎಲ್ಲೆಂದರಲ್ಲಿ ಬಿಸಾಡಬಾರದು ಎಂಬ ನೀತಿ ಇದೆ. ಆದರೆ ಹೀಗೆ ನಾಡಿನ ಪ್ರಮುಖ ವ್ಯಕ್ತಿಗಳ ಭಾವಚಿತ್ರಗಳನ್ನು ಎಲ್ಲೆಂದರಲ್ಲಿ ಬಿಸಾಡುವುದು ಗಣ್ಯರಿಗೆ ಮಾಡಿದ ಅಪಮಾನವಾಗಿದೆ. ಈ ಬಗ್ಗೆ ಜಿಲ್ಲಾಡಳಿತ ಅಗತ್ಯ ಕ್ರಮ ಕೈಗೊಳ್ಳಬೇಕಾಗಿದೆ.

Comments are closed.

Social Media Auto Publish Powered By : XYZScripts.com