ಕಿರುತೆರೆಗೆ ಕಮಲ್ : ಬಿಗ್ ಬಾಸ್ ತಮಿಳು ಆವೃತ್ತಿ ಸಾರಥ್ಯ ಕಮಲ್ ಹಾಸನ್ …

ಚೆನ್ನೈ   :  ಭಾರತೀಯ ಚಿತ್ರರಂಗದ ಅದ್ಬುತ  ನಟ ಕಮಲ್‌ ಹಾಸನ್‌  ಬಿಗ್ ಸ್ಕ್ರೀನ್ ನಿಂದ ಸ್ಮಾಲ್ ಸ್ಕ್ರೀನ್ ಗೆ ಲಗ್ಗೆ ಇಡುತ್ತದ್ದಾರೆ.  ಅವರು ಬಿಗ್‌ಬಾಸ್‌ ರಿಯಾಲಿಟಿ ಷೋನ ತಮಿಳು ಆವೃತ್ತಿಯನ್ನು ನಡೆಸಿಕೊಡಲಿದ್ದಾರೆ. ಈ ವಿಷಯವನ್ನು ಸ್ವತಃ ಅವರೇ ‘ದಿ ಕ್ವಿಂಟ್‌’ ಸುದ್ದಿತಾಣಕ್ಕೆ ನೀಡಿರುವ ಸಂದರ್ಶನದಲ್ಲಿ ಬಹಿರಂಗಪಡಿಸಿದ್ದಾರೆ. ಈವರೆಗೆ ನಾನು ಕಲಾವಿದನಾಗಿ ಜನರನ್ನು ರಂಜಿಸಲು ಬೇರೆ ಬೇರೆ ರೀತಿಯಲ್ಲಿ ಪ್ರಯತ್ನಿಸಿದ್ದೇನೆ. ಆದರೆ, ಟಿ.ವಿ. ರಿಯಾಲಿಟಿ ಷೋ ನಡೆಸಿಕೊಟ್ಟಿಲ್ಲ. ರಿಯಾಲಿಟಿ ಷೋದ ಅನುಭವ ಹೇಗಿರುತ್ತದೆ ಎಂದು ತಿಳಿಯಲು ಷೋ ಒಪ್ಪಿಕೊಂಡಿದ್ದೇನೆ’ ಎಂದು ಕಮಲ್‌ ಹೇಳಿದ್ದಾರೆ.

‘ಸಲ್ಮಾನ್‌ ಖಾನ್‌ ಬಿಗ್‌ಬಾಸ್‌ ಷೋ ಅನ್ನು ಚೆನ್ನಾಗಿ ನಡೆಸಿಕೊಡುತ್ತಿದ್ದಾರೆ. ಷೋನಲ್ಲಿ ಸ್ಪರ್ಧಾಳುಗಳನ್ನು ಅವರು ಬೆಸೆಯುವ ರೀತಿ ಅದ್ಭುತ’ ಎಂದು ಹೇಳಿದ್ದಾರೆ ಕಮಲ್ ಹಾಸನ್. ಕನ್ನಡದ ಬಿಗ್‌ಬಾಸ್‌ ಷೋ ಅನ್ನು ಸುದೀಪ್ ನಡೆಮಿಕೊಡುತ್ತಿದ್ದಾರೆ..

Comments are closed.

Social Media Auto Publish Powered By : XYZScripts.com