ಹೆಚ್‌.ವಿಶ್ವನಾಥ್‌ ಗಾಳಿಸುದ್ದಿ : ರಾಜಕೀಯ ವ್ಯಾಪಾರವಲ್ಲ, ಜನ ನಿಮ್ಮ ಆಳುಗಳಲ್ಲ : ಕಾಗೋಡು ತಿಮ್ಮಪ್ಪ..

ಚಿತ್ರದುರ್ಗ: ರಾಜಕೀಯ ಎಂಬುದು ವ್ಯಾಪಾರದ ಸರಕಲ್ಲ, ಜನರು ನಿಮ್ಮನ್ನ ನಂಬಿರುತ್ತಾರೆ, ಒಂದು ಪಕ್ಷದಲ್ಲಿ ಎಲ್ಲವನ್ನೂ ಪಡೆದು ಬೇರೆ ಪಕ್ಚಕ್ಕೆ ಜಿಗಿಯುವದರಲ್ಲಿ ಅರ್ಥವಿಲ್ಲ, ಜನರು ನಿಮ್ಮ ಆಳುಗಳಲ್ಲ ಎಂದು ಸಚಿವ ಕಾಗೋಡು ತಿಮ್ಮಪ್ಪ ಹೆಚ್.ವಿಶ್ವನಾಥ್‌ಗೆ ಟಾಂಗ್‌ ನೀಡಿದ್ದಾರೆ.  ವಿಶ್ವನಾಥ್‌ ಕಾಂಗ್ರೆಸ್‌ ಪಕ್ಷ ತೊರೆಯುತ್ತಾರೆ ಎಂಬ ಗಾಳಿಸುದ್ದಿ ಹಬ್ಬಿರುವ ಹಿನ್ನೆಲೆಯಲ್ಲಿ ಮಂಗಳವಾರ ಚಿತ್ರದುರ್ಗದ ಹಿರಿಯೂರಿನ ಮೇಟಿಕುರ್ಕೆ ಗ್ರಾಮದಲ್ಲಿ ಮಾತನಾಡಿದ ಇವರು, ವಿಶ್ವನಾಥ್‌ ನಡೆಯನ್ನ ಖಂಡಿಸಿದ್ದಾರೆ.  ಮೇಟಿಕುರ್ಕೆ ಗ್ರಾಮದ ಕೆರೆಯಲ್ಲಿ ಮೇವು ಬಿತ್ತನೆ ಕಾರ್ಯಕ್ಕೆ ಚಾಲನೆ ನೀಡಿ ಮಾತನಾಡಿದ ಕಾಗೋಡು ತಿಮ್ಮಪ್ಪ,  16 ಲಕ್ಷ ರೈತರಿಗೆ ಬೆಳೆ ನಷ್ಟ ಪರಿಹಾರ ಈಗಾಗಲೇ ವಿತರಿಸಲಾಗಿದ್ದು, ಆಧಾರ್‌ ಕಾರ್ಡ್‌ ಲಿಂಕ್‌ ಮಾಡಿದ ಬಳಿಕ ಇನ್ನು 9 ಲಕ್ಷ ರೈತರಿಗೆ ಪರಿಹಾರ ವಿತರಿಸುವುದು ಬಾಕಿ ಇದೆ ಎಂದು ಸಚಿವ ಕಾಗೋಡು ತಿಮ್ಮಪ್ಪ ತಿಳಿಸಿದ್ದಾರೆ.
ಮೇಟಿಕುರ್ಕೆ ಗ್ರಾಮದಲ್ಲಿ ಹಿರಿಯೂರು ಶಾಸಕ ಡಿ.ಸುಧಾಕರ್ ನೇತೃತ್ವದಲ್ಲಿ  ಕೆರೆಯಲ್ಲಿ ಮೇವು ಬಿತ್ತನೆ ಕಾರ್ಯಕ್ರಮ ನಡೆಯಿತು. ಇಲ್ಲಿಯ ರೈತರ ಜಾನುವಾರುಗಳಿಗೆ ಉಚಿತ ಮೇವು ವಿತರಣೆ ಮಾಡಲಾಯಿತು. ಈ ಕಾರ್ಯಕ್ರಮಕ್ಕೆ ಸಾಕ್ಷಿಯಾದ ಕಾಗೋಡು ತಿಮ್ಮಪ್ಪ,  ಶಾಸಕ ಡಿ.ಸುಧಾಕರ್  ರೈತಪರ ಕಾಳಜಿಗೆ ಪ್ರಶಂಸೆ ವ್ಯಕ್ತಪಡಿಸಿ,  ರಾಜ್ಯದ್ಯಂತ ಈ ಮಾದರಿ ಅಳವಡಿಸುವುದು ಉತ್ತಮ  ಎಂದರು.

One thought on “ಹೆಚ್‌.ವಿಶ್ವನಾಥ್‌ ಗಾಳಿಸುದ್ದಿ : ರಾಜಕೀಯ ವ್ಯಾಪಾರವಲ್ಲ, ಜನ ನಿಮ್ಮ ಆಳುಗಳಲ್ಲ : ಕಾಗೋಡು ತಿಮ್ಮಪ್ಪ..

  • October 20, 2017 at 6:26 PM
    Permalink

    Thanks for the tips you are sharing on this blog. Another thing I would like to say is the fact that getting hold of some copies of your credit score in order to scrutinize accuracy of each and every detail could be the first measures you have to execute in fixing credit. You are looking to clear your credit file from harmful details problems that ruin your credit score.

Comments are closed.

Social Media Auto Publish Powered By : XYZScripts.com