ಸಿದ್ದರಾಮಯ್ಯ ಮಗನನ್ನು ಬೆಳೆಸಲು ಅಧಿಕಾರ ದುರುಪಯೋಗ ಮಾಡಿಕೊಳ್ಳುತ್ತಿದ್ದಾರೆ : ಬಿಎಸ್‌ವೈ..

ಮೈಸೂರು:   ಸಿದ್ದರಾಮಯ್ಯ ತಮ್ಮ ಮಗನನ್ನು ಬೆಳೆಸಲು ಅಧಿಕಾರ ದುರುಪಯೋಗ ಮಾಡಿಕೊಳ್ಳುತ್ತಿದ್ದಾರೆ, ಯಾವ ಮುಖ್ಯಮಂತ್ರಿಗಳೂ ಮಾಡದ ಅಧಿಕಾರ ದುರುಪಯೋಗವನ್ನು ಸಿದ್ದರಾಮಯ್ಯ ಮಾಡುತ್ತಿದ್ದಾರೆ ಎಂದು ಬಿಎಸ್‌ ಯಡಿಯೂರಪ್ಪ ಆರೋಪಿಸಿದ್ದಾರೆ.
ಸಿಎಂ ಸಿದ್ದರಾಮಯ್ಯ ಪುತ್ರ ಡಾ.ಯತೀಂದ್ರಗೆ ಸಾಂವಿಧಾನಿಕ ಹುದ್ದೆ ನೀಡುವ ವಿಚಾರದ ಕುರಿತು ಮೈಸೂರಿನಲ್ಲಿ ಮಂಗಳವಾರ ಮಾತನಾಡಿದ ಬಿಎಸ್‌ವೈ,  ಯತೀಂದ್ರ ಗೆ ಸಾಂವಿಧಾನಿಕ ಹುದ್ದೆ ನೀಡುವುದು ಬರಿ ನೆಪ ಮಾತ್ರಕ್ಕೆ, ಈಗಾಗಲೇ ಅಧಿಕಾರ ದುರುಪಯೋಗ ಮಾಡಿಕೊಂಡು ಮಾಡಬಾರದ್ದನ್ನು ಮಾಡಿದ್ದಾರೆ, ಮಾಧ್ಯಮಗಳಲ್ಲಿ ಯತೀಂದ್ರ ವಿರುದ್ದ ಬರುತ್ತಿರುವ ಸುದ್ದಿ ಮುಚ್ಚಿಹಾಕಲು ಇದು ಕಾರ್ಯತಂತ್ರ ಅಷ್ಟೇ. ಎಲ್ಲ ಕಡೆ ಛೀಮಾರಿ ಹಾಕಿಸಿಕೊಂಡು ಈಗ ರಾಜಕೀಯ ತಂತ್ರಗಾರಿಕೆ ನಡೆಸುತ್ತಿದ್ದಾರೆ ಎಂದು ಬಿಎಸ್‌ವೈ ವಾಗ್ದಾಳಿ ನಡೆಸಿದ್ದಾರೆ. ಮಗನಿಗಾಗಿ ಅಧಿಕಾರ ದುರುಪಯೋಗ ಮಾಡಿಕೊಳ್ಳೊದು ಎಷ್ಟು ಸರಿ ಅಂತ ಸಿಎಂ ಚಿಂತನೆ ಮಾಡಲಿ ಎಂದು ಯಡಿಯೂರಪ್ಪ ಸಿದ್ದರಾಮಯ್ಯರಿಗೆ ಸಲಹೆ ನೀಡಿದ್ದಾರೆ.

Comments are closed.