ಬಸವ ಜಯಂತಿಗೆ ಸರ್ಕಾರಿ ರಜೆ ಬೇಡ : ಮುರುಘಾಮಠದ ಶ್ರೀ ಮಲ್ಲಿಕಾರ್ಜುನ ಸ್ವಾಮೀಜಿ…

ಧಾರವಾಡ: ಬಸವ ಜಯಂತಿಗೆ ಸರ್ಕಾರ ನೀಡಿರುವ ಸರ್ಕಾರಿ ರಜಾದಿನವನ್ನ ಹಿಂಪಡೆದುಕೊಳ್ಳಬೇಕು,  ಕಾಯಕಯೋಗಿ ಬಸವೇಶ್ವರರು ಪ್ರತಿಪಾದನೆಗೆ ಇದು ವಿರುದ್ಧವಾಗಿದೆ ಎಂದು ಧಾರವಾಡ ಮುರುಘಾಮಠದ ಶ್ರೀ ಮಲ್ಲಿಕಾರ್ಜುನ ಸ್ವಾಮೀಜಿ ಅಭಿಪ್ರಾಯಪಟ್ಟಿದ್ದಾರೆ.
ಧಾರವಾಡದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಬಸವೇಶ್ವರರು ಕಾಯಕ ತತ್ವ ಪ್ರತಿಪಾದನೆ ಮಾಡಿದವರು, ಅಂಥವರ ಜಯಂತಿಗೆ ರಜೆ ಕೊಡೋದು ಸರಿಯಲ್ಲ ಎಂದರು. ಮುಂದುವರೆದು ಮಾತನಾಡಿದ ಅವರು, ಮಹಾರಾಷ್ಟ್ರದ ಎಲ್ಲ ಸರ್ಕಾರಿ ಕಚೇರಿಗಳಲ್ಲಿಯೂ ಬಸವೇಶ್ವರರ ಭಾವಚಿತ್ರ ಖಡ್ಡಾಯವಾಗಿ ಹಾಕಲಾಗಿದೆ, ಆದರೆ ಬಸವೇಶ್ವರರ ನಾಡಾದ ನಮ್ಮ ನೆಲದಲ್ಲೇ ಬಸವೇಶ್ವರರ ಭಾವಚಿತ್ರ ಸರ್ಕಾರಿ ಕಚೇರಿಗಳಲ್ಲಿ ಇಲ್ಲ, ಮಹಾರಾಷ್ಟ್ರ ಮಾದರಿಯಲ್ಲಿ ರಾಜ್ಯದ ಸರ್ಕಾರಿ ಕಚೇರಿಗಳಲ್ಲಿಯೂ ಬಸವೇಶ್ವವರರ ಭಾವಚಿತ್ರ ಖಡ್ಡಾಯಗೊಳಿಸಬೇಕು ಎಂದು ಸ್ವಾಮೀಜಿ ಆಗ್ರಹಿಸಿದ್ದಾರೆ.

Comments are closed.

Social Media Auto Publish Powered By : XYZScripts.com