ರಜನಿಯ ಸಿನಿಮಾ ಮುಂದಕ್ಕೆ ಹೋಯ್ತಂತೆ: ಕಾರಣ ಯಾರು ಗೊತ್ತಾ ?

ಸೂಪರ್ ಸ್ಟಾರ್ ರಜಿನಿಕಾಂತ್, ಬಾಲಿವುಡ್ ಕಿಲಾಡಿ ಅಕ್ಷಯ್ ಕುಮಾರ್ ಅಭಿನಯದ ಬಹುನಿರೀಕ್ಷಿತ ಸಿನಿಮಾ ಎಂದಿರನ್ ಸೀಕ್ವೆಲ್ ರಿಲೀಸ್ ಡೇಟ್ ಪೋಸ್ಟ್‍ಪೋನ್ ಆಗಿದೆ. ಕಳೆದ ವರ್ಷ ಫಸ್ಟ್ ಲುಕ್ ರಿಲೀಸ್ ವೇಳೆ 2017ರ ದೀಪಾವಳಿ ಹಬ್ಬಕ್ಕೆ ಚಿತ್ರವನ್ನ ಬಿಡುಗಡೆ ಮಾಡೋದಾಗಿ ಚಿತ್ರತಂಡ ಅನೌನ್ಸ್ ಮಾಡಿತ್ತು. ಅಂದಿನಿಂದ ಅಭಿಮಾನಿಗಳು ದೀಪಾವಳಿ ಹಬ್ಬ ಯಾವಾಗ ಬರುತ್ತೋ, ಈ ಸೈನ್ಸ್ ಫಿಕ್ಷನ್ ಚಿತ್ರವನ್ನ ಯಾವಾಗ ನೋಡ್ತೀವೋ ಅಂತ ಚಾತಕಪಕ್ಷಿಗಳಂತೆ ಕಾಯ್ತಿದ್ದಾರೆ. ಇದೀಗ 2.0 ಚಿತ್ರ ನಿರ್ಮಾಪಕರು ದೀಪಾವಳಿಗೆ ಬದಲಾಗಿ 2018ರ ಜನವರಿ 25ಕ್ಕೆ ಚಿತ್ರ ರಿಲೀಸ್ ಮಾಡೋದಾಗಿ ಹೇಳಿ ಸಿನಿರಸಿಕರಿಗೆ ಬೇಸರ ಉಂಟುಮಾಡಿದ್ದಾರೆ.


ಸುಮಾರು 400ಕೋಟಿ ಬಡ್ಜೆಟ್‍ನಲ್ಲಿ ನಿರ್ಮಾಣವಾಗ್ತಿರೋ 2010ರ ಸೂಪರ್ ಹಿಟ್ ಎಂದಿರನ್ ಸಿನಿಮಾ ಸೀಕ್ವೆಲ್ ಇದು. 7 ವರ್ಷದ ಹಿಂದೆ ಬಂದ ಎಂದಿರನ್ ಚಿತ್ರದ ಗ್ರಾಫಿಕ್ಸ್ ಪ್ರೇಕ್ಷಕರಿಗೆ ಮೋಡಿ ಮಾಡಿತ್ತು. ಅದ್ರಲ್ಲೂ ಕ್ಲೈಮ್ಯಾಕ್ಸ್‍ನ ಆ ವಿಷ್ಯುವಲ್ ಎಫೆಕ್ಟ್ ನೋಡುಗರಿಗೆ ಥ್ರಿಲ್ ಕೊಟ್ಟಿದ್ದು ಸುಳ್ಳಲ್ಲ. ಪ್ರೀಕ್ವೆಲ್‍ನ್ನ ಮೀರಿಸುವಂತೆ ಸೀಕ್ವೆಲ್ ಚಿತ್ರವನ್ನ ಕಟ್ಟಿಕೊಡೋ ಪ್ರಯತ್ನ ಮಾಡ್ತಿದೆ ಚಿತ್ರತಂಡ. ಪ್ರಪಂಚದ ಅದ್ಭುತ ಟೆಕ್ನೀಷಿಯನ್ಸ್ ಈ ಚಿತ್ರದಲ್ಲಿ ಕೆಲಸ ಮಾಡ್ತಿದ್ದು, ಹಾಲಿವುಡ್ ರೇಂಜ್‍ನಲ್ಲಿ 2.0  ಸಿನಿಮಾ ನಿರ್ಮಾಣ ಆಗ್ತಿದೆ. ಚಿತ್ರದಲ್ಲಿ ಗ್ರಾಫಿಕ್ಸ್ ವಕ್ರ್ಸ್ ಜಾಸ್ತಿಯಿದ್ದು, ವಲ್ರ್ಡ್ ಕ್ಲಾಸ್ ಸ್ಟ್ಯಾಂಡರ್ಡ್ ವಿಎಫ್‍ಎಕ್ಸ್‍ನಲ್ಲಿ ಚಿತ್ರವನ್ನ ಸಿದ್ಧಪಡಿಸಲಾಗ್ತಿದ್ದು, ಅದೇ ಕಾರಣಕ್ಕೆ ರಿಲೀಸ್ ಡೇಟ್ ತಡವಾಗ್ತಿದೆ ಅಂತ  ಲೈಕಾ ಪ್ರೊಡಕ್ಷನ್ಸ್ ಸಂಸ್ಥೆಯ ರಾಜು ಮಹಾಲಿಂಗಂ ಹೇಳಿದ್ದಾರೆ.


2018ರ ಜನವರಿ 25ಕ್ಕೆ ಅಂದ್ರೆ ಈ ಹಿಂದೆ ಹೇಳಿದ್ದಕ್ಕಿಂತ ಅಂದಾಜು ಮೂರು ತಿಂಗಳು ತಡವಾಗಿ 2.0 ಸಿನಿಮಾ ರಿಲೀಸ್ ಆಗಲಿದೆ. ಸದ್ಯ ಬಾಹುಬಲಿ ದಿ ಕನ್‍ಕ್ಲೂಷನ್ ಸಿನಿಮಾ 1000 ಕೋಟಿ ಬಿಸಿನೆಸ್ ಮಾಡಲಿದೆ ಅಂತ ಸಿನಿಪಂಡಿತರು ಲೆಕ್ಕಾಚಾರ ಹಾಕ್ತಿದ್ದು, 2.0 ಸಿನಿಮಾದಿಂದ ಬಾಹುಬಲಿ ದಾಖಲೆ ಮುರಿಯೋ ಪ್ರಯತ್ನದಲ್ಲಿದೆ ಶಂಕರ್ ಅಂಡ್ ಟೀಮ್. ಅದೇ ಕಾರಣಕ್ಕೆ ನಿರ್ಮಾಪಕರು ಯಾವುದೇ ವಿಚಾರದಲ್ಲೂ ರಾಜಿಯಾಗದೇ, ಬಿಡುಗಡೆ ತಡವಾದ್ರೂ ಚಿಂತೆಯಿಲ್ಲ ಸಿನಿಮಾ ಅಂದುಕೊಂಡ ರೀತಿಯಲ್ಲೇ ಬರ್ಬೇಕು ಅನ್ನೋ ನಿರ್ಧಾರಕ್ಕೆ ಬಂದಿದ್ದಾರೆ. ಕೇವಲ ಪಬ್ಲಿಸಿಟಿಗಂತ್ಲೇ 60ಕೋಟಿ ಖರ್ಚು ಮಾಡಿ ಅಂತರಾಷ್ಟ್ರೀಯ ಮಟ್ಟದಲ್ಲಿ 2.0 ಚಿತ್ರಕ್ಕೆ ಪ್ರಚಾರ ಗಿಟ್ಟಿಸೋ ಪ್ರಯತ್ನ ನಡೀತಿದೆ. 2018ರ ಜನವರಿ 25ಕ್ಕೆ ಗಣರಾಜ್ಯೋತ್ಸವದ ಪ್ರಯುಕ್ತ ಈ ಸೈನ್ಸ್ ಫಿಕ್ಷನ್ ಸಿನಿಮಾ ತೆರೆಗೆ ಬರಲಿದೆ.

Comments are closed.