ಸಿ.ಎಂ ಪರವಾಗಿ ಸಭೆ ನಡೆಸಿದ ಸಿ.ಎಂ ಪುತ್ರ : ಡಾ.ಯತೀಂದ್ರ ಕರೆದ ಸಭೆಗೆ ಹಾಜರಾದ ಅಧಿಕಾರಿಗಳು

ಮೈಸೂರು:  ಮುಖ್ಯಮಂತ್ರಿ ಸಿದ್ದರಾಮಯ್ಯ ಪುತ್ರ ಡಾ. ಯತೀಂದ್ರ, ಮೈಸೂರಿನಲ್ಲಿರುವ ಸಿ.ಎಂ ನಿವಾಸದಲ್ಲಿ ಶುಕ್ರವಾರ ಮುಖ್ಯಮಂತ್ರಿಗಳ ಅನುಪಸ್ಥಿತಿಯಲ್ಲಿ ಸರ್ಕಾರಿ ಅಧಿಕಾರಿಗಳ ಸಭೆ ನಡೆಸುವ ಮೂಲಕ ದರ್ಬಾರ್‌ ನಡೆಸಿದ್ದಾರೆ. ಮೈಸೂರು ನಗರಾಭಿವೃದ್ದಿ ಪ್ರಾಧಿಕಾರದ ಅಧಿಕಾರಿಗಳನ್ನ ಸಿ.ಎಮ್‌ ನಿವಾಸಕ್ಕೆ ಕರೆಯಿಸಿಕೊಂಡು ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದರು. ಯತೀಂದ್ರ ಸಭೆ ಕರೆದ ಕೂಡಲೆ ಅಧಿಕಾರಿಗಳೆಲ್ಲ ಸರ್ಕಾರಿ ಕಾರಿನಲ್ಲಿಯೇ ಬಂದು ಸಭೆಗೆ ಹಾಜರಾದರು.
ಮುಖ್ಯಮಂತ್ರಿಗಳು ನಡೆಸಬೇಕಾದ ಸಭೆಯನ್ನ, ಯಾವುದೇ ಸಾಂವಿಧಾನಿಕ ಹುದ್ದೆ ಇಲ್ಲದಿದ್ದರೂ,   ಕೇವಲ ಮುಖ್ಯಮಂತ್ರಿಯ ಮಗ ಎಂಬ ಕಾರಣಕ್ಕೆ ಅಧಿಕಾರಗಳನ್ನ ಕರೆಸಿ ಸಭೆ ನಡೆಸಿದ್ದಾರೆ ಎಂಬ ಕಾರಣಕ್ಕೆ ಸಾರ್ವಜನಿಕರಿಂದ ಆಕ್ಷೇಪ ವ್ಯಕ್ತವಾಗಿದೆ.  ಸಿ.ಎಂ ತವರು ಜಿಲ್ಲೆಯಲ್ಲಿಯೇ ಇಂಥ ಅಂಧ ದರ್ಬಾರ್‌ ನಡೆಯುತ್ತಿರುವುದರ ಬಗ್ಗೆ ಪ್ರಜ್ಞಾವಂತರು ವಿರೋಧ ವ್ಯಕ್ತಪಡಿಸಿದ್ದಾರೆ.

Comments are closed.

Social Media Auto Publish Powered By : XYZScripts.com