ಸಾಲಮನ್ನಾ ಬಗ್ಗೆ ಕೇಂದ್ರ ಸರ್ಕಾರವನ್ನ ಕೇಳ್ರಯ್ಯ: ಸಿ.ಎಂ ಸಿದ್ದರಾಮಯ್ಯ

ಸಾಲಮನ್ನಾ ವಿಷಯಕ್ಕೆ ಸಂಬಂಧಿಸಿದಂತೆ ಮನವಿ ಸ್ವೀಕರಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಈ ಬಗ್ಗೆ  ಕೇಂದ್ರ ಸರ್ಕಾರವನ್ನ ಕೇಳ್ರಯ್ಯ.. ಎಂಬ ವ್ಯಂಗ್ಯಮಿಶ್ರಿತ ಸಲಹೆ ಇತ್ತ ಘಟನೆ ಮಂಡ್ಯದಲ್ಲಿ ನಡೆದಿದೆ.

ವಿವಿಧ ಅಭಿವೃದ್ದಿ ಕಾಮಗಾರಿಗಳಿಗೆ ಚಾಲನೆ ನೀಡಲು ಮಂಡ್ಯದ ಮಳವಳ್ಳಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಆಗಮಿಸಿದ ವೇಳೆ ಮನವಿ ನೀಡಿದ ಜನವಾದಿ ಸಂಘಟನೆ ಕಾರ್ಯಕರ್ತರಿಗೆ ಸಿ.ಎಂ ಮೊದಲು ಪ್ರತಿಕ್ರಿಯಿಸಿದ ರೀತಿ ಇದು. ಈ ಸಂದರ್ಭದಲ್ಲಿ  ನೀವೆ ಸಾಲ ಮನ್ನಾ ಮಾಡಿ ಎಂದು ಕೋರಿ,  ಮನವಿ ಪತ್ರವನ್ನ ಅವರು ನೀಡಲು ಹೋದಾಗ, ಹೆಲಿಪ್ಯಾಡ್‌ನಲ್ಲಿಯೇ ಸಿದ್ದರಾಮಯ್ಯ ಮನವಿ ಸ್ವೀಕರಿಸಿದ್ದಾರೆ.

ಕೃಷಿ ಸಾಲ ಮನ್ನಾ ಹಾಗೂ ಬಗರ್ ಹುಕುಂ ಸಾಗುವಳಿ ಸೇರಿದಂತೆ ಮಳವಳ್ಳಿ ತಾಲೂಕಿನ ‌ಜನರ ಸಮಸ್ಯೆ ಬಗೆ ಹರಿಸುವಂತೆ ಮನವಿ ಪತ್ರದಲ್ಲಿ ಕೋರಲಾಗಿದೆ ಎನ್ನಲಾಗಿದೆ. ಈ ಸಂದರ್ಭದಲ್ಲಿ  ಸಿದ್ದರಾಮಯ್ಯರ ಜೊತೆ ಸಚಿವರಾದ ಟಿ ಬಿ ಜಯಚಂದ್ರ, ಎಂ ಬಿ ಪಾಟೀಲ್ ಸೇರಿದಂತೆ ಕೆಲ ಸಚಿವರು ಭಾಗಿಯಾಗಿದ್ದರು.

Comments are closed.