ರಾಜ್ಯದಲ್ಲಿ ದುಡ್ಡಿಗೇನೂ ತೊಂದರೆ ಇಲ್ಲ, ಎಲ್ಲ ಡಿ.ಸಿಗಳೂ ಹಣ ಇದೆ ಎಂದಿದ್ದಾರೆ : ಸಿ.ಎಂ ಸಿದ್ದರಾಮಯ್ಯ

ಬೆಂಗಳೂರು:  ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ 1ಕೋಟಿ 90ಲಕ್ಷ ಬಿಡುಗಡೆ ಮಾಡಿದ್ದೇವೆ, ದುಡ್ಡಿಗೆ ಏನೇನು ತೊಂದರೆ ಇಲ್ಲ, ಎಲ್ಲ ಡಿಸಿಗಳು ನಮ್ಮ ಬಳಿ ಹಣವಿದೆ ಅಂದಿದ್ದಾರೆ, 272ಕೋಟಿ ಇದೆ ಅಂತ ಡಿಸಿಗಳು ಹೇಳಿದ್ದಾರೆ, ಪ್ರತಿ ಡಿಸಿಗಳ ಬಳಿಯೂ 10ಕೋಟಿ ಇದೆ, ಸಿಇಒಗಳಿಗೆ 90ಕೋಟಿ ಬಿಡುಗಡೆ ಮಾಡಿದ್ದೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ. ಮುಖ್ಯಮಂತ್ರಿ ನಿವಾಸ ಕೃಷ್ಣಾದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಸಿ.ಎಂ ಸಿದ್ದರಾಮಯ್ಯ, ಬರಗಾಲದ ಹಿನ್ನೆಲೆಯಲ್ಲಿ 30ಜಿಲ್ಲೆಗಳ ಡಿ.ಸಿ, ಜಿಲ್ಲಾಪಂಚಾಯತ್‌ ಸಿಇಒ ಮತ್ತು ಅಧಿಕಾರಿಗಳ ಜೊತೆ ವೀಡಿಯೋ ಕಾನ್ಫರೆನ್ಸ್ ಮಾಡಿದ್ದೇವೆ.  2016-17ರಲ್ಲಿ ಕುಡಿಯುವ ನೀರಿನ ಪೂರೈಕೆಗೆ ಒಟ್ಟು 843.73 ಕೋಟಿ ಬಿಡುಗಡೆ ಮಾಡಿದ್ದೆವು, ಇದರಲ್ಲಿ ಶೇಕಡಾ 90ರಷ್ಟು ಖರ್ಚಾಗಿದೆ, ರಾಜ್ಯದ 1575 ಬರಗಾಲದ ಹಳ್ಳಿಗಳಿಗೆ ಟ್ಯಾಂಕರ್ ಮೂಲಕ ನೀರು ಪೂರೈಕೆ ಮಾಡಲಿದ್ದೇವೆ, ಯಾವುದೇ ಹಳ್ಳಿಗಳಲ್ಲಿ ಕುಡಿಯುವ ನೀರಿನ ಸಮಸ್ಯೆಯಾದ್ರೆ ನೀವೇ ಹೊಣೆಗಾರರು ಅಂತ ಸಿಇಒಗಳಿಗೆ ತಿಳಿಸಿದ್ದೇವೆ, ಎಂದು ಸಿದ್ದರಾಮಯ್ಯ ಮಾಧ್ಯಮಗಳ ಮುಂದೆ ಸ್ಪಷ್ಟಪಡಿಸಿದರು.
ಬರಗಾಲದ ಹಳ್ಳಿಗಳಿಗೆ ನೀರು ಪೂರೈಕೆ ಮಾಡುವ ಕುರಿತು ಮಾತನಾಡಿದ ಸಿ.ಎಂ,  ಖಾಸಗೀ ಬೋರ್ ಬೆಲ್ ಗಳನ್ನು ಬಾಡಿಗೆಗೆ ತೆಗೆದುಕೊಳ್ಳುವಂತೆ ಸೂಚಿಸಿದ್ದೇವೆ, ರೈತರಿಂದ 607 ಖಾಸಗಿ ಬೋರ್ ವೆಲ್‌ಗಳನ್ನ ಬಾಡಿಗೆ ಪಡೆಯಲಾಗಿದೆ ಎಂದರು. ಜಾನುವಾರುಗಳ ಪೋಷಣೆ ಬಗ್ಗೆ ಮಾತನಾಡಿ,  ೩ ವಾರದಿಂದ 20ವಾರಗಳಿಗಾಗುವಷ್ಟು ಮೇವು ರಾಜ್ಯದಲ್ಲಿದೆ, 384 ಮೇವು ಬ್ಯಾಂಕ್ ಗಳನ್ನು ಮಾಡಿದ್ದೇವೆ, 84 ಕಡೆ ಗೋಶಾಲೆ ಮಾಡಿದ್ದೇವೆ, 7 ಲಕ್ಷ ಮೇವಿನ ಮಿನಿ ಕಿಟ್ ಗಳನ್ನು ಈಗಾಗಲೇ ವಿತರಿಸಿದ್ದೇವೆ ಎಂದು ಲೆಕ್ಕ ನೀಡಿದ್ದಾರೆ. ⁠⁠⁠⁠
ಉದ್ಯೋಗ ಖಾತ್ರಿಗೆ ಖರ್ಚಾದ ಹಣದ ಬಗ್ಗೆ ತಿಳಿಸಿದ ಸಿ.ಎಂ, 2017—18ರ ಉದ್ಯೋಗ ಖಾತ್ರಿ ಯೋಜನೆಯಡಿ 3316ಕೋಟಿ ವೆಚ್ಚ ಮಾಡಲಾಗಿದೆ, ನರೇಗ ಕೆಲಸಕ್ಕೆ ಬರುವ ಕಾರ್ಮಿಕರ ಮಕ್ಕಳಿಗೆ ಊಟ ಮತ್ತು ವೈದ್ಯಕೀಯ ವೆಚ್ಚ ಭರಿಸಬೇಕು ಅಂತ ಸೂಚಿಸಿದ್ದೇವೆ ಎಂದಿದ್ದಾರೆ. ಮುಂಗಾರು ನಷ್ಟದ ಪರಿಹಾರ ಮತ್ತು  ಹಿಂಗಾರು ನಷ್ಟಕ್ಕೂ ಕೇಂದ್ರಕ್ಕೆ ನೆರವು ಕೋರಿಕೆ, ಮಾಡಿದ್ದೇವೆ. ಈಗಾಗಲೇ 3310 ಕೋಟಿ ಕೇಂದ್ರದಿಂದ ನೆರವು ಕೇಳಿದ್ದೇವೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ಇನ್ನು, ರೈತರ ಬ್ಯಾಂಕ್ ಖಾತೆಗೆ ನೇರವಾಗಿ ಇನ್ ಪುಟ್ ಸಬ್ಸಿಡಿ, ಈವರೆಗೆ 16 ಲಕ್ಷ ರೈತರಿಗೆ ವಿತರಿಸಲಾಗಿದೆ, ಉಳಿದ 5 ಲಕ್ಷ ರೈತರಿಗೆ 30 ರೊಳಗೆ ಸಬ್ಸಿಡಿ ನೀಡಲಾಗುತ್ತದೆ ಎಂದರು. ಸಾಲಬಾಧೆಯಿಂದ ಮೃತಪಟ್ಟ ರೈತರ ಕುಟುಂಬಕ್ಕೂ ಸರ್ಕಾರ ಪರಿಹಾರ ಘೋಷಿಸಿದ್ದು, ಆತ್ಮಕತ್ಯೆ ಮಾಡಿಕೊಂಡ ರೈತರ ಕುಟುಂಬಕ್ಕೆ ಪ್ಯಾಕೇಜ್, ಮೃತರ ಕುಟುಂಬಕ್ಕೆ 5 ಲಕ್ಷ ಪರಿಹಾರ, ಮೃತರ ಮಕ್ಕಳಿಗೆ ಉಚಿತ ಶಿಕ್ಷಣ, ಪತ್ನಿಗೆ  ತಿಂಗಳಿಗೆ ಎರಡು ಸಾವಿರ ಮಾಸಾಶನ ನೀಡಲು ನಿರ್ಧರಿಸಿದ್ದೇವೆ ಎಂದು ಸಿ.ಎಂ ತಿಳಿಸಿದ್ದಾರೆ.

Comments are closed.

Social Media Auto Publish Powered By : XYZScripts.com