3 ವರ್ಷದ ಮಗಳ ಮೇಲೆ ಲೈಂಗಿಕ ದೌರ್ಜನ್ಯ ಆರೋಪ: ಫ್ರೆಂಚ್ ರಾಜತಾಂತ್ರಿಕ ಖುಲಾಸೆ

2012ರಲ್ಲಿ ತನ್ನ ಮಗಳ ಮೇಲೆ ಲೈಂಗಿಕ ದೌರ್ಜನ್ಯ ಮಾಡಿದ ಆರೋಪ ಎದುರಿಸಿದ್ದ ಫ್ರೆಂಚ್ ರಾಜತಾಂತ್ರಿಕ ಪಾಸ್ಕಲ್ ಮಾಜುರಿಯರ್ ನ್ಯಾಯಾಲಯ ಖುಲಾಸೆ ಮಾಡಿದೆ.

ತಂದೆಯೇ ತನ್ನ 3 ವರ್ಷದ ಮಗಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ಕೇರಳ ಮೂಲದ ಅವರ ಪತ್ನಿ ಸುಜಾ ಜೋನ್ಸ್ ಆರೋಪಿಸಿದ್ರು. ಬೆಂಗಳೂರನ್ನೇ ತಲ್ಲಣಗೊಳಿಸಿದ್ದ ಈ ಪ್ರಕರಣ ಕಳೆದ 5 ವರ್ಷಗಳವರಗೆ ಸಿವಿಲ್ ನ್ಯಾಯಾಲಯದಲ್ಲಿ ಮುಂದುವರೆದಿತ್ತು. ಈ ಪ್ರಕರಣದಲ್ಲಿ 24 ಸಾಕ್ಷಿಗಳನ್ನು ಪ್ರಶ್ನಿಸಲಾಗಿದ್ದು ತನಗೆ ನ್ಯಾಯ ದೊರಕಿದೆ ಎಂದು ಪಾಸ್ಕಲ್ ಸಂತಸ ವ್ಯಕ್ತಪಡಿಸಿದ್ದಾರೆ.

ಈ ವಿಚಾರವಾಗಿ ಏನ್ ಸುದ್ದಿಯೊಂದಿಗೆ ಮಾತನಾಡಿದ ಪಾಸ್ಕಲ್ ತನಗೆ ನ್ಯಾಯ ದೊರಕಿಸಿಕೊಡಲು ಕ್ರಿಸ್ಪ್ ಸಂಸ್ಥೆ ಮತ್ತು ಅದರ ಅಧ್ಯಕ್ಷ ಕುಮಾರ ಜಾಗೀರದಾರ್ ಮಾಡಿರುವ ಸಹಾಯವನ್ನು ಸ್ಮರಿಸಿದರು.

 

One thought on “3 ವರ್ಷದ ಮಗಳ ಮೇಲೆ ಲೈಂಗಿಕ ದೌರ್ಜನ್ಯ ಆರೋಪ: ಫ್ರೆಂಚ್ ರಾಜತಾಂತ್ರಿಕ ಖುಲಾಸೆ

Comments are closed.