IPL: ಗೇಲ್, ಕೊಹ್ಲಿ ಸುನಾಮಿ | ಆರ್ ಸಿಬಿಗೆ 21 ರನ್ ಜಯ

ರಾಜ್ಕೋಟ್ ಸೌರಾಷ್ಟ್ರ ಅಂಗಳದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಗೆಲುವಿನ ಲಯಕ್ಕೆ ಮರಳುವಲ್ಲಿ ಸಫಲವಾಗಿದೆ. ಗುಜರಾತ್ ಲಯನ್ಸ್ ವಿರುದ್ಧ ನಡೆದ ಪಂದ್ಯದಲ್ಲಿ 21 ರನ್ಗಳಿಂದ ಆರ್ಸಿಬಿ ತಂಡ ಟೂರ್ನಿಯಲ್ಲಿ ಎರಡನೇ ಜಯ ದಾಖಲಿಸಿದೆ. ಸಾಲು ಸಾಲು ಸೋಲುಗಳಿಂದ ಕಂಗೆಟ್ಟಿದ್ದ ಬೆಂಗಳೂರು ತಂಡ ಕೊನೆಗೂ ಗೆಲುವಿನ ನಿಟ್ಟುಸಿರು ಬಿಟ್ಟಿದೆ.
ಆರ್ಸಿಬಿ ಟಾಸ್ ಸೋತರೂ ಮೊದಲು ಬ್ಯಾಟ್ ಮಾಡಿದ ಬೆಂಗಳೂರು ತಂಡಕ್ಕೆ ಸ್ಪೋಟಕ ಬ್ಯಾಟ್ಸ್ಮನ್ ಕ್ರಿಸ್ ಗೇಲ್ ಹಾಗೂ ನಾಯಕ ವಿರಾಟ್ ಕೊಹ್ಲಿ ತಂಡಕ್ಕೆ ಶತಕದ ಜೊತೆಯಾಟ ನೀಡಿದರು. ಈ ಜೋಡಿ ಗುಜರಾತ್ ಬೌಲರ್ಗಳ ಬೆವರಿಳಿಸಿತು.


ಗೇಲ್ ಅಬ್ಬರದ ಆಟಕ್ಕೆ ಮಣೆ ಹಾಕಿದರು. ಈ ಪಂದ್ಯದಲ್ಲಿ ಅವರು 77 ರನ್ ಬಾರಿಸಿ ಅಬ್ಬರಿಸಿದರು. ಇವರ ಇನಿಂಗ್ಸ್ನಲ್ಲಿ 5 ಬೌಂಡರಿ ಹಾಗೂ 7 ಮುಗಿಲೆತ್ತರದ ಸಿಕ್ಸರ್ ಸೇರಿವೆ.
ವಿರಾಟ್ ಕೊಹ್ಲಿ ಅವರು ಸಹ ಆಕರ್ಷಕ ಹೊಡೆತಗಳ ಮೂಲಕ ಗಮನ ಸೆಳೆದರು. 50 ಎಸೆತದಲ್ಲಿ 7 ಬೌಂಡರಿ 1 ಸಿಕ್ಸರ್ ನೆರವಿನಿಂದ 64 ರನ್ ಬಾರಿಸಿದರು.
ಕೆಳ ಕ್ರಮಾಂಕದಲ್ಲಿ ಟ್ರಾವಿಸ್ ಹೆಡ್ 16 ಎಸೆತದಲ್ಲಿ 2 ಬೌಂಡರಿ 1 ಸಿಕ್ಸರ್ ನೆರವಿನಿಂದ 30 ರನ್ ಸಿಡಿಸಿದರೆ, ಕೇದಾರ್ ಜಾದವ್ 16 ಎಸೆತದಲ್ಲಿ 5 ಬೌಂಡರಿ, 2 ಸಿಕ್ಸರ್ ಸಹಾಯದಿಂದ 38 ರನ್ ಬಾರಿಸಿದರು.
ಬೆಂಗಳೂರು ತಂಡ 20 ಓವರ್ಗಳಲ್ಲಿ 2 ವಿಕೆಟ್ಗೆ 212 ರನ್ ಕಲೆ ಹಾಕಿತು.
ಬೃಹತ್ ಮೊತ್ತ ಹಿಂಬಾಲಸಿದ ಗುಜರಾತ್ ತಂಡಕ್ಕೆ ಸ್ಟಾರ್ ಆಟಗಾರರು ನೆರವಾಗಲಿಲ್ಲ. ಡ್ವೇನ್ ಸ್ಮಿತ್ (1), ಸುರೇಶ್ ರೈನಾ (23), ಏರಾನ್ ಫಿಂಚ್ (19), ದಿನೇಶ್ ಕಾರ್ತಿಕ್ (1), ಜವಾಬ್ದಾರಿ ಮರೆತರು. ಇಶಾನ್ ಕಿಶನ್ ಅಬ್ಬರದ 39 ರನ್ ಬಾರಿಸಿದರು.
ಆರಂಭಿಕ ಮೆಕಲಂ 44 ಎಸೆತಗಳಲ್ಲಿ 2 ಬೌಂಡರಿ, 7 ಸಿಕ್ಸರ್ ನೆರವಿನಿಂದ 72 ರನ್ ಬಾರಿಸಿದರು.

ಸಂಕ್ಷಿಪ್ತ ಸ್ಕೋರ್

ಗುಜರಾತ್ ಲಯನ್ಸ್ 20 ಓವರ್ಗಳಲ್ಲಿ 7 ವಿಕೆಟ್ಗೆ 191
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 20 ಓವರ್ಗಳಲ್ಲಿ 2 ವಿಕೆಟ್ಗೆ 213

Comments are closed.

Social Media Auto Publish Powered By : XYZScripts.com