CBSE ನಲ್ಲಿ ಇನ್ಮೇಲೆ ಹಿಂದಿ ಕಡ್ಡಾಯ ?? ಇದು ಪ್ರಾದೇಶಿಕ ಭಾಷೆಗಳ ಅಳಿವಿನ ದಾರಿಯಾ?

ಕೇಂದ್ರೀಯ ವಿದ್ಯಾಲಯ ಮತ್ತು ಉಳಿದ CBSE ಶಾಲೆಗಳಲ್ಲಿ 10ನೇ ತರಗತಿಯವರಗೆ ಮಕ್ಕಳು ಹಿಂದಿಯನ್ನು ಕಡ್ಡಾಯ ಭಾಷೆಯಾಗಿ ಕಲಿಯಲೇಬೇಕಾ? ಹೀಗೊಂದು ನಿಯಮ ಸದ್ಯದಲ್ಲೇ ಜಾರಿಗೆ ಬರುವ ಎಲ್ಲಾ ಲಕ್ಷಣಗಳೂ ಕಾಣುತ್ತಿವೆ.

ಈ ವಿಚಾರವಾಗಿ ಇನ್ನೂ ಮಾನವ ಸಂಪನ್ಮೂಲ ಇಲಾಖೆಯಿಂದ ಅಂಕಿತ ಬಿದ್ದಿಲ್ಲ. ಆದ್ರೆ ಈಗಾಗ್ಲೇ ಎಲ್ಲೆಡೆ ಚರ್ಚೆಯಾಗ್ತಿರೋ ಈ ವಿಚಾರಕ್ಕೆ ಶೀಘ್ರವೇ ಒಪ್ಪಿಗೆಯ ಮುದ್ರೆ ಬಿದ್ದರೂ ಆಶ್ಚರ್ಯವಿಲ್ಲ.

ಇತ್ತೀಚೆಗಷ್ಟೇ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಈಗಾಗ್ಲೇ ಸಂಸತ್ತಿನ ಒಂದು ವಿಭಾಗ ಸಲ್ಲಿಸಿರುವ ಮನವಿಗೆ ಒಪ್ಪಿಗೆಯ ಮುದ್ರೆ ಒತ್ತಿದ್ದಾರೆ. ಮಾನವ ಸಂಪನ್ಮೂಲ ಇಲಾಖೆಯೂ ಇದಕ್ಕೆ ಅಸ್ತು ಎಂದರೆ ದೇಶದಾದ್ಯಂತ ಮುಂದಿನ ಶೈಕ್ಷಣಿಕ ವರ್ಷದಿಂದಲೇ ಹಿಂದಿ ಕಡ್ಡಾಯ ಎನ್ನುವ ನಿಯಮ ಜಾರಿಗೆ ಬರುವ ಸಾಧ್ಯತೆ ಇದೆ.

ಸದ್ಯ ಎಲ್ಲಾ ಕೇಂದ್ರೀಯ ವಿದ್ಯಾಲಯ ಮತ್ತು CBSE ಶಾಲೆಗಳಲ್ಲಿ ಪ್ರಥಮ ಭಾಷೆ ಇಂಗ್ಲಿಷ್ ಜೊತೆಯಲ್ಲಿ ಬೇರೆ ಯಾವುದೇ ಎರಡು ಪ್ರಾದೇಶಿಕ ಭಾಷೆಯನ್ನು ಆಯ್ದುಕೊಳ್ಳುವ ಅಧಿಕಾರ ವಿದ್ಯಾರ್ಥಿಗೆ ಇದೆ. ಆದ್ರೆ ಹಿಂದಿ ಕಡ್ಡಾಯ ಮಾಡಿದ್ರೆ ಆಗ ಪ್ರಾದೇಶಿಕ ಭಾಷೆಗಳ ಕಲಿಕೆ ವಿದ್ಯಾರ್ಥಿಗಳಿಂದ ಇನ್ನೊಂದು ಹೆಜ್ಜೆ ಹಿಂದಕ್ಕೆ ಹೋಗುವಂತೆ ಮಾಡುತ್ತದೆ. ಇದು ಭಾಷೆಗಳ ುಳಿವಿನ ಹೋರಾಟಕ್ಕೆ ದೊಡ್ಡ ಪೆಟ್ಟು ಬಿದ್ದಂತಾಗುತ್ತದೆ ಎನ್ನುವ ಕೂಗು ಎಲ್ಲೆಡೆ ಕೇಳಿಬರುತ್ತಿದೆ.

Comments are closed.