ಕಣ್ತೆರೆದಿದ್ದಾನೆ ಮುಕ್ಕಣ್ಣ..! ತೆಂಗಿನ ಕಾಯಿಯ ಮೇಲೆ ಮೂಡಿದೆ ಕಣ್ಣಿನ ಆಕೃತಿ..

ತುಮಕೂರು: ಪ್ರಕೃತಿಯ ವೈಶಿಷ್ಟ್ಯ ಎಂಥವರನ್ನೂ ಒಮ್ಮೆ ಬೆರಗಾಗಿಸಿಬಿಡುತ್ತೆ ಎಂಬುವುದಕ್ಕೆ ಇದು ಒಂದು ನಿದರ್ಶನ.  ತೆಂಗಿನ ಕಾಯಿ ಮೇಲೆ ಮನುಷ್ಯರ ಕಣ್ಣಿನ ಆಕೃತಿ ಮೂಡಿ ಬಂದಿದ್ದು, ಜನರ ಅಚ್ಛರಿಗೆ ಕಾರಣವಾಗಿದೆ. ತುಮಕೂರು ಜಿಲ್ಲೆ ಗುಬ್ಬಿ ತಾಲೂಕಿನ ಕಡಬ ಗ್ರಾಮದಲ್ಲಿಯ ಉಮೇಶ ಎಂಬಾತರು ಸೋಮವಾರ,  ತಮ್ಮ ತೋಟದಲ್ಲಿ ತೆಂಗಿನ ಕಾಯಿ ಸುಲಿಸುತ್ತಿರುವ ವೇಳೆ ಈ ಅಪರೂಪದ ಕಾಯಿ ಸಿಕ್ಕಿದೆ.
ಮೂರು ಕಣ್ಣುಗಳಿರುವ ಕಾರಣ ತೆಂಗಿನ ಕಾಯಿ ಶಿವನ ಪ್ರತಿರೂಪ ಎಂಬ ನಂಬಿಕೆ ಜನರಲ್ಲಿದೆ,  ಈಗ ತೆಂಗಿನ ಕಾಯಿಯ ಮೇಲೆಯೇ ಮಾನವನ ಕಣ್ಣಿನ ಆಕೃತಿ ಮೂಡಿರುವುದರಿಂದ ಈ ಅಪರೂಪದ ಕಾಯಿ ಜನರನ್ನ ಆಕರ್ಷಿಸುತ್ತಿದೆ. ಕಣ್ಣು ಮೂಡಿಬಂದಿರುವ ತೆಂಗಿನ ಕಾಯಿಯನ್ನ ನೋಡಲು ಜನರು ತಂಡೋಪ ತಂಡವಾಗಿ ಕಡಬ ಗ್ರಾಮಕ್ಕೆ ಭೇಟಿಕೊಡುತ್ತಿದ್ದಾರಂತೆ.

Comments are closed.

Social Media Auto Publish Powered By : XYZScripts.com