ನೀವು ಒಳ್ಳೆ ಮಾತುಗಾರರು, ಆದ್ರೆ ಗೆದ್ದ ಮೇಲೆ ಮೌನವಾಗಿರಿ: ಬಿಜೆಪಿಗೆ ಮೋದಿ ಕಡಕ್ ಮಾತು

ಬಿಜೆಪಿ ಮುಖಂಡರು ಅತ್ಯುತ್ತಮ ಮಾತುಗಾರರು, ಆದ್ರೆ ಅಧಿಕಾರಕ್ಕೆ ಬಂದಾದ ಮೇಲೆ ಮೌನದ ಕಲೆಯನ್ನು ಕಲಿಯಬೇಕು ಎಂದು ಪಕ್ಷದ ಸದಸ್ಯರು ಮತ್ತು ಕಾರ್ಯಕರ್ತರಿಗೆ ಪ್ರಧಾನಿ ಮೋದಿ ಕಿವಿಮಾತು ಹೇಳಿದ್ದಾರೆ.

ಭುವನೇಶ್ವರದಲ್ಲಿ ನಡೆಯುತ್ತಿರುವ ಎರಡು ದಿನಗಳ ಸಿಮಾವೇಶದಲ್ಲಿ ಪ್ರಧಾನಿ ಮೋದಿ ನೆರೆದಿದ್ದ ಲಕ್ಷಾಂತರ ಕಾರ್ಯಕರ್ತರು ಮತ್ತು ಪಕ್ಷದ ಹಿರಿಕಿರಿಯ ನಾಯಕರನ್ನು ಉದ್ದೇಶಿಸಿ ಮಾತನಾಡಿದ್ರು. ಗೆಲುವಿನ ನಂತರ ಯಾರೂ ನಿರಾಳರಾಗಬೇಕಾಗಿಲ್ಲ, ನಮಗೆ ಮತ ನೀಡಿ ಗೆಲ್ಲಿಸಿದ ಜನರಿಗೆ ಶ್ರಮ ಮತ್ತು ಅತ್ಯುತ್ತಮ ಅಭಿವೃದ್ಧಿ ಕೆಲಸದ ಮೂಲಕ ಧನ್ಯವಾದ ಹೇಳಬೇಕು ಎಂದು ಪ್ರಧಾನಿ ಹೇಳಿದ್ರು.

ಮುಂಬರುವ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಒರಿಸ್ಸಾದಲ್ಲಿ ಪಕ್ಷ ಸಂಘಟನೆ ಮಾಡುವ ಸಲುವಾಗಿ ಮೋದಿ ಈ ಸಮಾವೇಶದಲ್ಲಿ ಮಾತನಾಡಿದ್ದಾರೆ. ಈ ಸಮಾವೇಶದಲ್ಲಿ ಕೇಂದ್ರದ ಪ್ರಮುಖ ಸಚಿವರು, 13 ಬಿಜೆಪಿ ಮುಖ್ಯಮಂತ್ರಿಗಳು, ಪಕ್ಷದ ರಾಷ್ಟ್ರಾಧ್ಯಕ್ಷ ಅಮಿತ್ ಷಾ, ಉತ್ತರ ಪ್ರದೇಶದ ನೂತನ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸೇರಿದಂತೆ ಅನೇಕ ಮುಖಂಡರು ಉಪಸ್ಥಿತರಿದ್ದರು.

One thought on “ನೀವು ಒಳ್ಳೆ ಮಾತುಗಾರರು, ಆದ್ರೆ ಗೆದ್ದ ಮೇಲೆ ಮೌನವಾಗಿರಿ: ಬಿಜೆಪಿಗೆ ಮೋದಿ ಕಡಕ್ ಮಾತು

  • October 21, 2017 at 12:50 AM
    Permalink

    Viagra Acheter Sur Internet viagra Cialis 10 Mg Filmtabletten Preisvergleich Propecia For Hair Care

Comments are closed.

Social Media Auto Publish Powered By : XYZScripts.com