ರಾಜಕುಮಾರ ಮತ್ತು ಹೆಬ್ಬುಲಿಯನ್ನು ಹಿಂದಿಕ್ಕಿದ ‘ಚಕ್ರವರ್ತಿ’…ಮೊದಲ ದಿನದ ಕಲೆಕ್ಷನ್ ಎಷ್ಟು ಗೊತ್ತಾ?

ಚಕ್ರವರ್ತಿ ಬಾಕ್ಸಾಫೀಸನ್ನು ಅಕ್ಷರಶಃ ಒಡೆದು ಚೂರು ಮಾಡಿಬಿಟ್ಟಿದ್ದಾನೆ. ಚಕ್ರವರ್ತಿ ಮೊದಲ ದಿನದ ಕಲೆಕ್ಷನ್ ರಾಜಕುಮಾರ ಮತ್ತು ಹೆಬ್ಬುಲಿಯನ್ನು ಮೀರಿಸಿ ಹೊಸ ದಾಖಲೆಯನ್ನೇ ಬರೆದಿದೆ.

ಬಾಕ್ಸಾಫೀಸ್ ಸುಲ್ತಾನ್ ಎನ್ನುವ ತಮ್ಮ ಬಿರುದನ್ನು ಉಳಿಸಿಕೊಂಡಿದ್ದಾರೆ ಚಾಲೆಂಜಿಂಗ್ ಸ್ಟಾರ್ ದರ್ಶನ್. ಬರೋಬ್ಬರಿ 450 ಥಿಯೇಟರ್ ಗಳಲ್ಲಿ ಬಿಡುಗಡೆಯಾಗಿದ್ದ ಚಕ್ರವರ್ತಿ ಮೊದಲ ದಿನ ಬರೋಬ್ಬರಿ 12.45 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ ಎನ್ನಲಾಗುತ್ತಿದೆ.

ಆದ್ರೆ ಇದು ಚಿತ್ರತಂಡ ನೀಡಿರುವ ಅಧಿಕೃತ ಹೇಳಿಕೆ ಅಲ್ಲ. ಚಕ್ರವರ್ತಿ ಸಿನಿಮಾ ಬಿಡುಗಡೆಯಾದ ದಿನ ಅಂದ್ರೆ ಏಪ್ರಿಲ್ 14ರಂದು ಅಂಬೇಡ್ಕರ್ ಜಯಂತಿ ಪ್ರಯುಕ್ತ ದೇಶದಾದ್ಯಂತ ರಜೆ ಇತ್ತು. ಹಾಗಾಗಿ ರಾಜ್ಯದ 400 ಮತ್ತು ಹೊರರಾಜ್ಯಗಳ 50 ಥಿಯೇಟರ್ ಗಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ಜನ ಬಂದರು ಎನ್ನುವ ಲೆಕ್ಕಾಚಾರವೂ ಕೇಳಿಬರ್ತಿದೆ.

ಇನ್ನು ಗಾಂಧಿನಗರದ ಮತ್ತೊಂದು ಮೂಲದ ಪ್ರಕಾರ ಚಕ್ರವರ್ತಿ ಮೊದಲ ದಿನದ ಕಲೆಕ್ಷನ್ 8.5 ಕೋಟಿ ರೂಪಾಯಿಯಂತೆ. ಇದೇ ನಿಜವಾದ್ರೂ ಕೂಡಾ ಗಳಿಕೆಯ ದಾಖಲೆ ಚಕ್ರವರ್ತಿಯದ್ದೇ ಆಗಲಿದೆ. ಅಂಬೇಡ್ಕರ್ ಜಯಂತಿ ಮತ್ತು ಮಕ್ಕಳ ಬೇಸಿಗೆ ರಜೆ ಜೊತೆಯಾಗಿ ಬಂದಿದ್ರಿಂದ ಚಕ್ರವರ್ತಿ ರಾಜಕುಮಾರ ಮತ್ತು ಹೆಬ್ಬುಲಿಯನ್ನು ಹಿಂದಿಕ್ಕಿದ್ದಾನೆ ಎನ್ನಲಾಗಿದೆ.

One thought on “ರಾಜಕುಮಾರ ಮತ್ತು ಹೆಬ್ಬುಲಿಯನ್ನು ಹಿಂದಿಕ್ಕಿದ ‘ಚಕ್ರವರ್ತಿ’…ಮೊದಲ ದಿನದ ಕಲೆಕ್ಷನ್ ಎಷ್ಟು ಗೊತ್ತಾ?

 • October 24, 2017 at 2:30 PM
  Permalink

  Gгeetingѕ I am ѕo excited I found your weblog, Ӏ really found you by mistake, whіle I was loⲟking on Google for something
  else, Nonetheless Ι am here now and wouuld just like to say thanks a lot for a marvelous post and a ɑll
  round thrilling blo (I ɑlso love the theme/design), I
  don’t have time to ggo througһ it aⅼl at the minute but I have saved it and also added in your RSS feeds, so
  when I havνe time I will be back to read a great
  deaⅼ more, Please do keep up the fantastic jⲟb. http://cara-daftarsbobet.com/

Comments are closed.

Social Media Auto Publish Powered By : XYZScripts.com