ಮಾಲ್ವಾನಾ ಬೀಚ್‌ ದುರ್ಘಟನೆ : ಮಣ್ಣಲ್ಲಿ ಮಣ್ಣಾದ ವಿದ್ಯಾರ್ಥಿಗಳು : ಮುಗಿಲು ಮುಟ್ಟಿದ ಆಕ್ರಂದನ..

ಬೆಳಗಾವಿ:  ಮಾಲ್ವಾನ್ ಸಮುದ್ರದಲ್ಲಿ ಮುಳುಗಿ ಮೃತಪಟ್ಟ ಬೆಳಗಾವಿಯ ಇಂಜನಿಯರಿಂಗ್ ಕಾಲೇಜು ವಿದ್ಯಾರ್ಥಿಗಳು ಭಾನುವಾರ ಮಣ್ಣಲ್ಲಿ ಮಣ್ಣಾಗಿದ್ದಾರೆ. ಶನಿವಾರ ಮಹಾರಾಷ್ಟ್ರದ ವಾಯರಿ ಬೀಚ್‌ನಲ್ಲಿ ನೀರುಪಾಲಾಗಿದ್ದ ವಿದ್ಯಾರ್ಥಿಗಳ ಪಾರ್ಥೀವ ಶರೀರಗಳು ಶನಿವಾರ ತಡರಾತ್ರಿ ಬೆಳಗಾವಿಗೆ ಆಗಮಸಿದ್ದವು. ಭಾನುವಾರ ಬೆಳಗ್ಗೆ ಮೃತರ ಪೋಷಕರು ತಮ್ಮ ವಿಧಿ ವಿಧಾನಗಳ ಮೂಲಕ ಅಂತ್ಯಕ್ರಿಯೆ ನಡೆಸಿದರು.
ಉಪನ್ಯಾಸಕ ಮಹೇಶ್ ಕುಡಚಕರ್, ವಿದ್ಯಾರ್ಥಿಗಳಾದ ಕಿರಣ್ ಕಾಂಡೇಕರ್, ಮುಜಮಿಲ್ ಅಣ್ಣಿಗೇರಿ, ಅವಧೂತ ತಹಶೀಲ್ದಾರ್, ನಿತಿನ್ ಮುತ್ನಾಳ್ಕರ್ ಅಂತ್ಯಕ್ರಿಯೆ ಬೆಳಗಾವಿಯಲ್ಲಿ ನಡೆಯಿತು. ಸಾಂಬ್ರಾ ಗ್ರಾಮದಲ್ಲಿ ಆರತಿ ಚೌಹಾಣ್, ಬಂಬರಗಾ ಗ್ರಾಮದಲ್ಲಿ ಮೃತ ವಿದ್ಯಾರ್ಥಿನಿ ಮಾಯಾ ಕೋಳೆ ಅಂತ್ಯಕ್ರಿಯೆ ನಡೆಯಿತು. ಮೃತ ಮಾಯಾ ವಿದ್ಯಾರ್ಥಿನಿ ಶವವನ್ನ ಯಕ್ಕೆ ಗಿಡದ ಜತೆಗೆ ಮದುವೆ ಶಾಸ್ತ್ರ ಮಾಡಿ, ನಂತರ ಸಂಪ್ರದಾಯದಂತೆ ಗ್ರಾಮದ ರುದ್ರಭೂಮಿಯಲ್ಲಿ ಅಂತ್ಯಕ್ರಿಯೆ ನಡೆಸಲಾಗಿದೆ. ಈ ವೇಳೆ ಕುಟುಂನಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು. ಗ್ರಾಮದ ನೂರಾರು ಜನ ಅಂತ್ಯಕ್ರಿಯೆ ವೇಳೆ ಭಾಗವಹಿಸಿದ್ದರು.
ಪ್ರವಾಸಕ್ಕೆ ತೆರಳಿದ್ದ  ಮರಾಠಾ ಎಂಜಿನಿಯರಿಂಗ್ ಕಾಲೇಜಿನ 8 ವಿದ್ಯಾರ್ಥಿಗಳು ಶನಿವಾರ ಸಮುದ್ರ ಪಾಲಾಗಿರುವ ದಾರುಣ ಘಟನೆ ಮಹಾರಾಷ್ಟ್ರ ರಾಜ್ಯಕ್ಕೆ ಸೇರಿದ ಸಿಂಧದುರ್ಗ ಬಳಿಯ ಮಾಲ್ವಾನಾ ಬೀಚ್‌ನಲ್ಲಿ ನಡೆದಿತ್ತು.  ಶುಕ್ರವಾರವೇ ವಿದ್ಯಾರ್ಥಿಗಳು ಪ್ರವಾಸಕ್ಕೆ ತೆರಳಿದ್ದು, ಮಾಲ್ವಾನಾ ಬೀಚ್‌ನಲ್ಲಿ ಈಜಲು ಹೋದಾಗ ಈ ಘಟನೆ ನಡೆದಿತ್ತು.

Comments are closed.

Social Media Auto Publish Powered By : XYZScripts.com