Sandalwood : ಚಾಲೆಂಜಿಗ್​ ಸ್ಟಾರ್​ ದರ್ಶನ್​ರ ಚಕ್ರವರ್ತಿ ದರ್ಬಾರ್.”.?..

ಸ್ಯಾಂಡಲ್​ವುಡ್​ ಮಾತ್ರವಲ್ಲದೆ ದೇಶದ ಚಿತ್ರರಂಗದಲ್ಲೇ ದೊಡ್ಡ ಮಟ್ಟದ ಕ್ರೇಜ್​ ಸೃಷ್ಟಿಸಿದೆ  ಚಾಲೆಂಜಿಗ್​ ಸ್ಟಾರ್​ ದರ್ಶನ್​ರ ಚಕ್ರವರ್ತಿ. ರಿಲೀಸ್​ಗೆ ಮೊದಲೇ ಹಿಸ್ಟರಿಯನ್ನು ಚಕ್ರವರ್ತಿ ಕ್ರಿಯೇಟ್​ ಮಾಡಿದ್ದೇ  ಸ್ಯಾಂಡಲ್​ವುಡ್​ ದಾದ​ರ ಡಿಫರೆಂಟ್​ ಲುಕ್​ನಿಂದ. ನಿರ್ದೇಶಕರ ಪಾಲಿಗೆ ಸದಾ ಗೆಲ್ಲುವ ಕುದುರೆಯಾಗಿದ್ದು ಸಾಲು ಸಾಲು ಹಿಟ್​ ಚಿತ್ರಗಳನ್ನೇ ನೀಡುತ್ತಾ ಬಂದಿರೋ ದರ್ಶನ್​ರ ಚಕ್ರವರ್ತಿ ನಾಳೆ ತೆರೆಗಪ್ಪಳಿಸಲಿದೆ.

ಚಕ್ರವರ್ತಿ ಹೆಸರು ಅನೌನ್ಸ್​ ಆದ ಕ್ಷಣದಿಂದ ಇಲ್ಲಿವರೆಗೂ ತನ್ನ ಛಾರ್ಮ್ ನ್ನು ಹೆಚ್ಚಿಸಿಕೊಳ್ತಾನೆ ಇದೆ. ಬರಿ ರಾಜ್ಯ ಮಾತ್ರವಲ್ಲದೆ ಇಡೀ ದೇಶವನ್ನೇ ತನ್ನತ್ತ ಸೆಳೆದಿರೋ ಬಿಗ್​ ಬಜೆಟ್​ ಚಿತ್ರ ಇದು,  ಆಲ್​ವುಡ್​ಗಳನ್ನೂ ಹಿಂದಿಕ್ಕಿ ದೇಶದ ನಿರೀಕ್ಷಿತ ಸಿನಿಮಾಗಳಲ್ಲಿ ಮೊದಲ ಸ್ಥಾನವನ್ನು ಚಕ್ರವರ್ತಿ ಕಾಯ್ದುಕೊಂಡಿದೆ. ಸಿನಿಪ್ರಿಯರ ಹುಬ್ಬೇರಿಸುವಂತೆ ಮಾಡಿದ್ದು ಚಕ್ರವರ್ತಿಯ ಮೇಕಿಂಗ್​. ಬರೀ ಪ್ರೋಮೋಗೆಂದೆ ಬರೋಬ್ಬರಿ 20 ಲಕ್ಷದಷ್ಟು ಖರ್ಚು ಮಾಡಿದ್ದೇ ದರ್ಶನ್​ ಮೇಲೆ ನಿರ್ಮಾಪಕರು ಇಟ್ಟಿರೋ ನಂಬಿಕೆಗೆ ಸಾಕ್ಷಿ.

ಚಕ್ರವರ್ತಿಯ ಸಿನಿಮಾದ ಡಿಫರೆಂಟ್​ ಕಾನ್ಸೆಪ್ಟ್​ ಕುತೂಹಲವನ್ನು ಕೆರಳಿಸುವಂತಿದೆ. ಪಿರಿಯಾಡ್ರಿಕ್​ ಸ್ಟೈಲ್​ನಲ್ಲಿ ಹೆಣೆದಿರೋ ಕಥೆಯಲ್ಲಿ,  ಭೂಗತ ಲೋಕ, ಫ್ಯಾಮಿಲಿ, ಲವ್​ ಸೆಂಟಿಮೆಂಟ್  ಈ ಚಿತ್ರದಲ್ಲಿದೆ. ಜೊತೆಗೆ ಉಳಿದ 8 ಸ್ಪೆಷಲ್​ ಕ್ಯಾರೆಕ್ಟರ್​ಗಳು ಕೂಡ ಥ್ರಿಲ್​ ಹುಟ್ಟಿಸಲಿವೆ. ನಿರ್ದೇಶಕ ಎ.ವಿ. ಚಿಂತನ್​  ಚಕ್ರವರ್ತಿಯಲ್ಲಿ ದರ್ಶನ್​ರನ್ನು ಮೂರು ಶೇಡ್​ನಲ್ಲಿ ತೋರಿಸಲಿದ್ದಾರೆ. ಒಂದ್ಕಡೆ ಏಕ್ದಂ ಸ್ಟೈಲಿಶ್​ ಲುಕ್​ನಲ್ಲಿ ದರ್ಶನ್​ ಕಾಣಿಸಿಕೊಂಡ್ರೆ, ಮತ್ತೊಂದೆಡೆ ರೆಟ್ರೋ ಸ್ಟೈಲ್​ ಸ್ಟಂಟ್​ ಮಾಡಲಿದ್ದಾರೆ. ಇನ್ನೊಂದ್ಕಡೆ ಅಂದಿನ ಜಮಾನದ ಗೆಟಪ್​ನಲ್ಲಿ ಈ ಸೂಪರ್​ಸ್ಟಾರ್​ ಮೋಡಿ ಮಾಡಲು ಹೊರಟಿದ್ದಾರೆ.

ದೀಪಾ ಸನ್ನಿದಿ ಚಕ್ರವರ್ತಿಯ ರಾಣಿಯಾಗಿದ್ದು ದರ್ಶನ್​ ಜೊತೆ ಡ್ಯೂಯಟ್​ ಹಾಡಲಿದ್ದಾರೆ.  ಇನ್ನು ದರ್ಶನ್​ರ ಸಹೋದರ ದಿನಕರ್​ ತೂಗುದೀಪ  ಚಕ್ರವರ್ತಿ ಮೂಲಕ ಸ್ಯಾಂಡಲ್​ವುಡ್​ನ  ಬಿಗ್​ಸ್ಕ್ರೀನ್​ಗೆ ಎಂಟ್ರಿ ಆಗ್ತಾ ಇದ್ದಾರೆ. ನಿರ್ದೇಶಕ ಚಿಂತನ್​ರ ಒತ್ತಾಯಕ್ಕೆ ಕಟ್ಟು ಬಿದ್ದು ಕೇಡಿ ಪಾತ್ರದಲ್ಲಿ ಕಾಣಿಸಿಕೊಂಡಿರೋ ದಿನಕರ್​ ತಮ್ಮ ತಂದೆ ತೂಗುದೀಪ ಶ್ರೀನಿವಾಸ್​ ಅವರನ್ನು ನೆನಪಿಸಲಿದ್ದಾರೆ. ಸೃಜನ್​ ಲೋಕೇಶ್​, ಕುಮಾರ್​ ಬಂಗಾರಪ್ಪ ಚಿತ್ರದಲ್ಲಿ ಬಣ್ಣಹಚ್ಚಿದ್ದಾರೆ.

           ರಿಲೀಸ್​ಗು ಮೊದಲೆ ಚಕ್ರವರ್ತಿ ಆರ್ಭಟ ಜೋರಾಗಿದೆ ಬಹಳಷ್ಟು ಹೈಪ್​ ಕ್ರಿಯೇಟ್​ ಮಾಡಿರೋ ಚಕ್ರವರ್ತಿಯ ಅಡ್ವಾನ್ಸ್​ ಟಿಕೆಟ್​ ಬುಕಿಂಗ್ ಆರಂಭವಾಗಿದ್ದು ಕೆಲವೊಂದು ಕಡೆ ಸೋಲ್ಡ್​ ಔಟ್ ಆಗಿದೆ.  ಚಕ್ರವರ್ತಿಯ ಹವಾದ ಎದುರು ಬಾಹುಬಲಿ ಕೂಡ ಮಂಕಾಗಿದೆ. ಹೀಗೆ ಇಡೀ ಭಾರತದ ಬಹುನಿರೀಕ್ಷಿತ ಚಿತ್ರಗಳ ಸಾಲಿಗೆ ದರ್ಶನ್​ರ ಚಕ್ರವರ್ತಿ ಸೇರ್ಪಡೆಯಾಗೋ ಮೂಲಕ ಚಂದನವನದಲ್ಲೇ ಹೊಸ ಭಾಷ್ಯ ಬರೆಯಲಿದೆ..

2 thoughts on “Sandalwood : ಚಾಲೆಂಜಿಗ್​ ಸ್ಟಾರ್​ ದರ್ಶನ್​ರ ಚಕ್ರವರ್ತಿ ದರ್ಬಾರ್.”.?..

  • October 25, 2017 at 9:03 AM
    Permalink

    Excellent read, I just passed this onto a friend who was doing some research on that. And he just bought me lunch as I found it for him smile Therefore let me rephrase that: Thanks for lunch!

  • October 25, 2017 at 9:22 AM
    Permalink

    I truly appreciate this post. I have been looking everywhere for this! Thank goodness I found it on Bing. You’ve made my day! Thx again

Comments are closed.

Social Media Auto Publish Powered By : XYZScripts.com