ನಂಜನಗೂಡು, ಗುಂಡ್ಲುಪೇಟೆ ಮತದಾರರಿಗೆ ಕೃತಜ್ಞನಾಗಿದ್ದೇನೆ: ಸಿ.ಎಂ ಸಿದ್ದರಾಮಯ್ಯ…

ಬೆಂಗಳೂರು: ನಂಜನಗೂಡು- ಗುಂಡ್ಲುಪೇಟೆ ಉಪ ಚುನಾವಣೆಯಲ್ಲಿ ತಮ್ಮನ್ನು ಗೆಲ್ಲಿಸಿಕೊಟ್ಟ ಮತದಾರರಿಗೆ ತಾವು ಕೃತಜ್ಞರಾಗಿದ್ದೇವೆ ಎಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ಹೇಳಿದ್ದಾರೆ. ಗುರುವಾರ, ಬೆಂಗಳೂರಿನ ಗೃಹ ಕಚೇರಿ ಕೃಷ್ಣಾದಲ್ಲಿ ಗುರುವಾರ ಸಂಜೆ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಸಿದ್ದರಾಮಯ್ಯ, ಉಪ ಚುನಾವಣೆಯ ಗೆಲುವು ಮುಂದಿನ ಚುನಾವಣೆಗೆ ದಿಕ್ಸೂಚಿ ಅಲ್ಲ, ಇದನ್ನ ಸ್ವತಃ ತಾನೇ ಹೇಳಿದ್ದೇನೆ ಎಂದರು.
ಬಿಜೆಪಿ ಪ್ರಚಾರಕಾರ್ಯದ ಬಗ್ಗೆ ಮಾತನಾಡಿ, 40 ದಿನಗಳ ಕಾಲ ಬಿ.ಎ‌ಸ್‌ ವೈ ತಮ್ಮ ಸಂಸದರನ್ನ ಸೇರಿಸಿಕೊಂಡು ನಂಜನಗೂಡು-ಗುಂಡ್ಲುಪೇಟೆಯಲ್ಲಿ ಠಿಕಾಣಿ ಹೂಡಿದ್ದರು.  ಆದರೂ ಅವರ ಪ್ರಭಾವ ಕೆಲಸ ಮಾಡಿಲ್ಲ ಎಂಬುದಕ್ಕೆ ಫಲಿತಾಂಶವೇ ಸಾಕ್ಷಿ, ಬಿಎಸ್ವೈ ಹಾಗೂ ಶ್ರೀನಿವಾಸ್ ಪ್ರಸಾದ್ ಕೀಳು ಮಟ್ಟದ ಭಾಷೆ ಪ್ರಯೋಗ ಮಾಡಿದ್ದಾರೆ.  ವೈಯಕ್ತಿಕ ಟೀಕೆ ಮಾಡಿದಕ್ಕೆ ಮತದಾರರು ತಕ್ಕ ಉತ್ತರ ಕೊಟ್ಟಿದ್ದಾರೆ. ನಾನೂ ಯಾರಿಗೂ ಟೀಕೆ ಮಾಡಿಲ್ಲ.  ಇಡೀ ಪ್ರಚಾರದಲ್ಲಿ ನಾನೂ ಎಲ್ಲೂ ಶ್ರೀನಿವಾಸ್ ಪ್ರಸಾದ್ ಬಗ್ಗೆ ಕೀಳಾಗಿ ಮಾತನಾಡಿಲ್ಲ.  ಗೆಲ್ಲಲು ಬಿಎಸ್ವೈ ಜಾತಿ-ಧರ್ಮ ಪ್ರಯೋಗ ಮಾಡಿದ್ದರು ಎಂದು ನೆನಪಿಸಿಕೊಂಡರು.
ತಮ್ಮ ಪಕ್ಷದ ಗೆಲುವಿನ ಬಗೆಗೆ ಮಾತನಾಡುತ್ತಾ, ಮತದಾರರ ನಾಡಿ ಮಿಡಿತ ಏನೆಂದು ನಮಗೆ ಗೊತ್ತಾಗಿದೆ.  ಜನ ನಮಗೆ ನಿಜವಾದ ಅಭಿವೃದ್ಧಿ ಕೆಲಸ ಆಗಿದೆ ಎಂದು ಮತ ನೀಡುವುದರ ಮೂಲಕ ಹೇಳಿದ್ದಾರೆ ಎಂದರು.  ಎಲ್ಲರೂ ಕಾಂಗ್ರೆಸ್ ಗೆ ಸಹಕರಿಸಿದ್ದಾರೆ. ಎಲ್ಲಾ ಧರ್ಮದವರು ನಮಗೆ ಮತ ಹಾಕಿದ್ದಾರೆ.  ಕಾಂಗ್ರೆಸ್ ಜಾತಿ ಧರ್ಮದ ಮೇಲೆ ಮತ ಕೇಳಲ್ಲ. ನಮ್ಮ ಸಿದ್ದಾಂತ, ಅಭಿವೃದ್ಧಿ ಕೆಲಸವೇ ಈ ಗೆಲುವಿಗೆ ಕಾರಣ. ನಮ್ಮ ಕಾರ್ಯಕರ್ತರಿಗೆ ಹೆಚ್ಚಿನ ಉತ್ಸಾಹ ಬಂದಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.
ಯು.ಪಿ.ಚುನಾವಣೆ ಗೆದ್ದ ಮೇಲೆ ಬಿಜೆಪಿಯ ಗೆಲುವಿನ ಗಾಳಿ ರಾಜ್ಯದಲ್ಲಿಯೂ ಬೀಸುತ್ತದೆ ಎಂದಿದ್ದರು,  ಕಾಂಗ್ರೆಸ್ ಮುಕ್ತ ಮಾಡುವ ಭ್ರಮೆಯಲ್ಲಿ ಬಿಜೆಪಿ ಇದೆ,  ಅಲ್ಲದೆ, ಮಿಷನ್ ೧೫೦ ಅಂತಾ ಮತದಾರರನ್ನ ಯಾಮಾರಿಸುತ್ತಿದ್ದಾರೆ,  ಬಿಎಸ್ವೈ ಸಿಎಂ ಆಗಿಯೇ ಬಿಟ್ಡಿದ್ದೇನೆ ಎಂದಿಕೊಂಡಿದ್ದಾರೆ. ಈ‌ ನಿಮ್ಮ ಯಡಿಯೂರಪ್ಪ ಮುಖ್ಯಮಂತ್ರಿಯಾಗಬೇಕೆಂದರೆ ಮತ ಹಾಕಿ ಎನ್ನುತ್ತಾ ಪ್ರಚಾರ ಮಾಡಿದ್ದಾರೆ. ಆದರೆ, ಮತದಾರರು ದಡ್ಡರಲ್ಲ, ಭ್ರಷ್ಟಾಚಾರಕ್ಕೆ ಮುನ್ನುಡಿ ಬರೆದಿದ್ದೆ ಬಿಎಸ್ವೈಗೆ ಅವರು ಮತ ಹಾಕೋದಿಲ್ಲ ಎಂದರು.
ನಂತರ ಚುನಾವಣೆಯಲ್ಲಿ ಅಭ್ಯರ್ಥಿಗಳನ್ನ ಕಣಕ್ಕಿಳಿಸದೇ, ತಮ್ಮ ಗೆಲುವಿಗೆ ಕಾರಣರಾದ ಜೆಡಿಎಸ್‌ ರಾಷ್ಟ್ರಾಧ್ಯಕ್ಷ ಹೆಚ್‌ಡಿ ದೇವೇಗೌಡರಿಗೆ ಧನ್ಯವಾದ ತಿಳಿಸಿದ್ದಾರೆ.  ಶುಕ್ರವಾರ ಮುಖ್ಯಮಂತ್ರಿಗಳು ತಾವು ದೆಹಲಿಗೆ ತೆರಳುತ್ತಿರುವ ವಿಚಾರವನ್ನೂ ತಿಳಿಸಿ,  ರಾಷ್ಟ್ರಪತಿಗಳ ಕಾರ್ಯಕ್ರಮದಲ್ಲಿ ಭಾಗವಹಿಸುವುದಾಗಿ ಹೇಳಿದ್ದಾರೆ. ಕೊನೆಯಲ್ಲಿ ಗೆಲುವಿಗೆ ಕಾರಣಕರ್ತರಾದ ಸೋನಿಯಾ ಗಾಂಧಿ, ಮಲ್ಲಿಕಾರ್ಜುನ ಖರ್ಗೆ, ರಾಹುಲ್ ಗಾಂಧಿ ಸೇರಿದಂತೆ ಪಕ್ಷದ ಮುಖಂಡರು, ಮಂತ್ರಿಮಂಡಲ, ಕಾರ್ಯಕರ್ತರು ಹಾಗೂ ಪತ್ರಕರ್ತರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಧನ್ಯವಾದ ಹೇಳಿದರು.

Comments are closed.

Social Media Auto Publish Powered By : XYZScripts.com