ಸಿಂಗಾಪುರ್ ಓಪನ್ ಸೂಪರ್ ಸೀರೀಸ್ ಕ್ವಾರ್ಟರ್ ಫೈನಲ್ ಗೆ ಸಿಂಧು, ಕೆ.ಶ್ರೀಕಾಂತ್…

ಒಲಿಂಪಿಕ್ಸ್ ನಲ್ಲಿ ಬೆಳ್ಳಿ ಸಾಧನೆ ಮಾಡಿರುವ ಸಿಂಧು ಹಾಗೂ ಕೆ.ಶ್ರೀಕಾಂತ್ ಅವರು ಸಿಂಗಾಪುರ್ ಓಪನ್ ಸೂಪರ್ ಸೀರೀಸ್ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಕ್ವಾರ್ಟರ್ ಫೈನಲ್ ಗೆ ಅರ್ಹತೆ ಪಡೆದುಕೊಂಡಿದ್ದಾರೆ.

ಎಂಟರ ಘಟ್ಟದ ಕದಾಟದಲ್ಲಿ ಸಿಂಧು ಅವರು ಮಾಜಿ ನಂಬರ್ ಒನ್ ಆಟಗಾರ್ತಿ ಕರೋಲಿನಾ ಮರಿನ್ ಅವರನ್ನು ಎದುರಿಸಲಿದ್ದಾರೆ. ಈ ಮೊದಲು ಇಂಡಿಯನ್ ಓಪನ್ ಸೀರೀಸ್ ನಲ್ಲಿ ಸಿಂಧು ಮರಿನ್ ಗೆ ಶಾಕ್ ನೀಡಿದ್ದರು.

ಗುರುವಾರ ನಡೆದ ವನಿತೆಯರ ಸಿಂಗಲ್ಸ್ ಪಂದ್ಯದಲ್ಲಿ ಎರಡು ಬಾರಿ ಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್‌ನಲ್ಲಿ ಕಂಚಿನ ಪದಕ ವಿಜೇತೆ ಸಿಂಧು 19-21, 21-17, 21-8 ಅಕಗಳಿಂದ ಇಂಡೋನೇಷ್ಯಾದ ಫತ್ರೈನಿ ವಿರುದ್ಧ 43 ನಿಮಿಷಗಳ ಹೋರಾಟದಲ್ಲಿ ಜಯ ಸಾಧಿಸಿದರು.

ಸಿಂಧು ಅವರು ಆಕರ್ಷಕ ಆಟವನ್ನು ಆಡಿ ಗಮನ ಸೆಳೆದರು. ಮೊದಲ ಸೆಟ್‌ನಲ್ಲಿ ಹಿನ್ನಡೆ ಅನುಭವಿಸಿದರೂ, ನಿರ್ಣಾಯಕ ಎರಡನೇ ಹಾಗೂ ಮೂರನೇ ಸೆಟ್‌ನಲ್ಲಿ ಚೇತೋಹಾರಿ ಆಟವಾಡಿದ ಸಿಂಧು ಸೆಟ್‌ಗೆದ್ದು ಬೀಗಿದರು.

ಸಾಯ್ ಪ್ರಣೀತ್ 21-15, 21-23, 21-16 ರಿಂದ ಚೀನಾದ ಕ್ವಿನ್ ಬಿನ್ ವಿರುದ್ಧ 1 ಗಂಟೆ 12 ನಿಮಿಷ ನಡೆದ ಹೋರಾಟದಲ್ಲಿ ಜಯ ಸಾಧಿಸಿದರು.

ಪುರುಷರ ಸಿಂಗಲ್ಸ್‌ನಲ್ಲಿ ಕೆ.ಶ್ರೀಕಾಂತ್ 18-21, 21-19, 22-20 ರಿಂದ ಇಂಡೋನೇಷ್ಯಾದ ಇಹಾಸನ್ ಮೌಲನ್ ವಿರುದ್ಧ 1 ಗಂಟೆ 21 ನಿಮಿಷದ ಹೋರಾಟದಲ್ಲಿ ಜಯ ಸಾಧಿಸಿದರು. ಇವರು ಚೀನಾದ ಶಿ ಯುಕಿ ವಿರುದ್ಧ ಸೆಣಸಾಟವನ್ನು ನಡೆಸಲಿದ್ದರೆ.

ಮಿಶ್ರ ಡಬಲ್ಸ್‌ನಲ್ಲಿ ಕರ್ನಾಟಕದ ಅಶ್ವಿನಿ ಪೊನ್ನಪ್ಪ, ಸುಮಿತ್ ಬಿ ರೆಡ್ಡಿ 17-21, 21-17, 21-16 ರಿಂದ ದಕ್ಷಿಣ ಕೊರಿಯಾ ವಿರುದ್ಧ ಜೆ ಹವಾನ್ ಕಿಮ್, ಲಿ ಸೊ ಹಿ ವಿರುದ್ಧ ೫೪ ನಿಮಿಷದ ಹೋರಾಟದಲ್ಲಿ ಸೋಲಿಸಿದರು.

Comments are closed.

Social Media Auto Publish Powered By : XYZScripts.com