ಗುಂಡ್ಲುಪೇಟೆಯಲ್ಲಿ ಕಾಂಗ್ರೆಸ್‌ ಜಯಭೇರಿ : ಗೀತಾ ಮಹದೇವ್‌ ಪ್ರಸಾದ್‌ಗೆ ಒಲಿದಳು ವಿಜಯಲಕ್ಷ್ಮಿ,,

ಚಾಮರಾಜನಗರ: ಗುಂಡ್ಲುಪೇಟೆ ವಿಧಾನಸಭಾ ಕ್ಷೇತ್ರದಲ್ಲಿ, ಮಹದೇವ್‌ ಪ್ರಸಾದ್‌ ಸಾವಿನಿಂದ ತೆರವಾಗಿದ್ದ ಸ್ಥಾನಕ್ಕಾಗಿ ನಡೆದ ಉಪಚುನಾವಣೆಯಲ್ಲಿ, ಮೃತರ ಪತ್ನಿ ಗೀತಾ ಮಹದೇವ್‌ ಪ್ರಸಾದ್‌ ಗೆದ್ದುಬಂದಿದ್ದಾರೆ.  ಎಂ.ಸಿ ಮೋಹನಕುಮಾರಿ ಎಂಬ ಹೆಸರಿನಲ್ಲಿ ಕ್ಷೇತ್ರದಿಂದ ಸ್ಪರ್ಧಿಸಿದ್ದ ಗೀತಾ ಅವರಿಗೆ ಮತದಾರರ ಅನುಕಂಪದ ಅಲೆ ಕೈ ಹಿಡಿದಿದೆ.
ಆರಂಭದಿಂದಲೂ ಗುಂಡ್ಲುಪೇಟೆಯ ಬಿಜೆಪಿ ಅಭ್ಯರ್ಥಿ ನಿರಂಜನಕುಮಾರ್ ಅವರಿಗೆ ಮುನ್ನಡೆ ಲಭಿಸಲಿಲ್ಲ. ಅಂತಿಮವಾಗಿ ಮೋಹನ್‌ಕುಮಾರಿ (ಗೀತಾ ಮಹದೇವ್‌ ಪ್ರಸಾದ್‌) ಅವರು ಗೆಲುವಿನ ನಗೆ ಬೀರದ್ದಾರೆ. ಗುಂಡ್ಲುಪೇಟೆ ಅಂತಿಮ ಸುತ್ತಿನ ಎಣಿಕೆ ಪೂರ್ಣಗೊಂಡಿದ್ದು, 10,877 ಮತಗಳ ಅಂತರದಿಂದ ಕಾಂಗ್ರೆಸ್‌ ಗೆಲುವು ಸಾಧಿಸಿದೆ.
 ಕಾಂಗ್ರೆಸ್ ಒಟ್ಟೂ 90258 ಮತ ಗಳಿಸಿಕೊಂಡರೆ, ಬಿಜೆಪಿ 79381 ಮತಗಳಿಗೆ ತೃಪ್ತಿಪಡಬೇಕಾಯಿತು. ಜೊತೆಗೆ 1596 ನೋಟಾ ಮತಗಳು ಜೊತೆಗಿವೆ..
ಈ ಉಪಚುನಾವಣೆಯನ್ನು ೨೦೧೮ರ ರಾಜ್ಯ ವಿಧಾನ ಸಭೆ ಚುನಾವಣೆಯ ದಿಕ್ಸೂಚಿ ಎಂದು ಬಿಂಬಿಸಲಾಗಿದ್ದು, ಗೆಲುವಿಗಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್ ಯಡಿಯೂರಪ್ಪ ಜಿದ್ದಾಜಿದ್ದಿಗೆ ಬಿದ್ದು, ಪ್ರಚಾರ ಕಾರ್ಯ ನಡೆಸಿದ್ದರು.  ಯಡಿಯೂರಪ್ಪ ಮತ್ತ ಇತರ ಬಿಜೆಪಿ ಮುಖಂಡರ ಅಬ್ಬರದ ಪ್ರಚಾರದಿಂದ ಲಿಂಗಾಯತ ಮತಗಳು ಬಿಜೆಪಿಗೆ ಒಲಿಯಲಿವೆ ಎಂಬ ಅಂದಾಜು ಕೈಗೂಡಲಿಲ್ಲ. ಆದರೆ, ಮತದಾರರ ಅನುಕಂಪದ ಅಲೆ ಮೋಹನ ಕುಮಾರಿಯವರನ್ನ ಗೆಲ್ಲಿಸಿದೆ.
ಗೆಲುವಿನ ನಗೆ ಬೀರಿದ ಮೋಹನ್‌ಕುಮಾರ್‌ ಮಾಧ್ಯಮಗಳೊಂದಿಗೆ ಮಾತನಾಡಿ, ಚುನಾವಣೆ ಪ್ರಚಾರದ ವೇಳೆ ಬಿಜೆಪಿಯ ಕೆಲವು ಮುಖಂಡರು ನನ್ನ ವಿರುದ್ಧ ಅಸಂಬಂದ್ಧವಾಗಿ ಮತನಾಡಿದರು. ಈ ಉಪಚುನಾವಣೆಯಲ್ಲಿ ಕ್ಷೇತ್ರದ ಮತದಾರರು ತಕ್ಕ ಪಾಠ ಕಲಿಸಿದ್ದಾರೆ ಎಂದಿದ್ದಾರೆ.

Comments are closed.