ಸೋಲನ್ನು ನಿರೀಕ್ಷಿಸಿರಲಿಲ್ಲ : ಮತದಾರರ ತೀರ್ಪನ್ನು ಗೌರವಿಸುವೆ : ಬಿಎಸ್‌ ಯಡಿಯೂರಪ್ಪ…

ಬೆಂಗಳೂರು: ಗುಂಡ್ಲುಪೇಟೆ ಮತ್ತು ನಂಜನಗೂಡಿನ ಉಪ ಚುನಾವಣೆಯಲ್ಲಿ ಬಿಜೆಪಿಗೆ ಆದ ಹಿನ್ನೆಡೆಗೆ ಪ್ರತಿಕ್ರಿಯಿಸಿದ ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್‌ ಯಡಿಯೂರಪ್ಪ, ಸೋಲನ್ನ ತಾವು ನಿರೀಕ್ಷೆ ಮಾಡಿರಲಿಲ್ಲ, ಉಪ ಚುನಾವಣೆಯಲ್ಲಿ ಆಡಳಿತ ಪಕ್ಷಕ್ಕೆ ಜಯ ಸಿಕ್ಕಿದೆ. ವಿ.ಶ್ರೀನಿವಾಸ ಪ್ರಸಾದ್ ಅವರಿಗೆ ಹಿನ್ನಡೆ ಅತೀವ ನೋವು ತಂದಿದೆ, ಆದರೂ ಮತದಾರರ ತೀರ್ಪನ್ನು ಗೌರವಿಸುತ್ತೇನೆ ಎಂದು ಹೇಳಿದ್ದಾರೆ.
ನಮ್ಮ ಸೋಲಿನ ಕಾರಣಗಳನ್ನು ಪರಾಮರ್ಶೆ ಮಾಡುತ್ತೇವೆ ಎಂದಿರುವ ಯಡಿಯೂರಪ್ಪ,  ಉಪಚುನಾವಣೆ ಫಲಿತಾಂಶ 2018 ರ ವಿಧಾನಸಭಾ ಚುನಾವಣೆ ಮೇಲೆ ಯಾವುದೇ ಪರಿಣಾಮ ಬೀರಲ್ಲ ಎಂಬ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಕಾಂಗ್ರೆಸ್‌‌ ಮತ್ತು ಬಿಜೆಪಿ ನಡುವಿನ ಪ್ರತಿಷ್ಠೆಯ ಸ್ಪರ್ಧೆಯಾಗಿದ್ದ ಗುಂಡ್ಲುಪೇಟೆ, ನಂಜನಗೂಡು ಉಪಚುನಾವಣೆ ಫಲಿತಾಂಶ ಬಹುತೇಕ ಪೂರ್ಣಗೊಂಡಿದ್ದು,  ಗುಂಡ್ಲುಪೇಟೆಯಲ್ಲಿ ಕಾಂಗ್ರೆಸ್‌‌ನ ಗೀತಾ ಮಹದೇವ ಪ್ರಸಾದ್‌ ಜಯಭೇರಿ ಬಾರಿಸಿದರೆ,  ಇತ್ತ ನಂಜನಗೂಡಲ್ಲಿ ಶ್ರೀನಿವಾಸ ಪ್ರಸಾದ್‌ ವಿರುದ್ಧ ಕಳಲೆ ಕೇಶವಮೂರ್ತಿ ಭರ್ಜರಿ ಮುನ್ನಡೆ ಕಾಯ್ದುಕೊಂಡಿದ್ದಾರೆ.

Comments are closed.

Social Media Auto Publish Powered By : XYZScripts.com