ರಶ್ಮಿಕಾ ಮಂದಣ್ಣ ಸ್ಟೈಲಿಶ್ ಸ್ಟಾರ್ ಗೆ ನಾಯಕಿ ಆಗ್ಬಿಟ್ರಾ ?

ಸ್ಯಾಂಡಲ್ ವುಡ್ ನಲ್ಲಿ ಕಿರಿಕ್ ಪಾರ್ಟಿ ಮಾಡಿರೋ ಹವಾ ಹೇಗಿತ್ತು ಅನ್ನೋದನ್ನ ನೀವು ಕಣ್ಣಾರೆ ನೋಡಿದ್ದೀರಿ. ಅದ್ರಲ್ಲೂ ಈ ಚಿತ್ರದ ನಾಯಕಿ ರಶ್ಮಿಕಾ ಮಂದಣ್ಣ ಮೆಚ್ಚಿಕೊಂಡಾಡಿದ್ದವರೇನು ಕಮ್ಮಿಯಿಲ್ಲ. ಸದ್ಯ ಕನ್ನಡಲ್ಲಿ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಜೊತೆ ಆಂಜನಿಪುತ್ರದಲ್ಲಿ ಇವರು ಬ್ಯಸಿಯಾಗಿದ್ದಾರೆ.

ಅಷ್ಟರಲ್ಲೇ ತೆಲುಗಿನಿಂದ ಕೂಡ ಆಫರ್ ಗಳು ಬರೋಕೆ ಶುರುವಾಗಿವೆ. ಈಗಾಗ್ಲೇ ಪ್ರಭಾಸ್ ಅವ್ರೊಂದಿಗೆ  ನಟಿಸುತ್ತಾರೆ ಅನ್ನೋ ಗಾಳಿಸುದ್ದಿ ಟಾಲಿವುಡ್ ನಿಂದ್ಲೇ ಹರಿದು ಬಂದಿತ್ತು. ಈಗ ಮತ್ತೊಂದು ಸುದ್ದಿ ಅದೇ ಅಂಗಳದಿಂದ ಹರಿದಾಡೋಕೆ ಶುರುವಾಗಿದೆ. ಸದ್ಯ ಸ್ಟೈಲಿಷ್ ಸ್ಟಾರ್ ಅಲ್ಲು ಅರ್ಜುನ್ ಸಿನಿಮಾದಲ್ಲಿ ನಟಿಸೋಕೆ ಇವ್ರಿಗೆ ಕರೆ ಬಂದಿದೆಯಂತೆ.

ಟಾಲಿವುಡ್ ನಿರ್ದೇಶಕ ವಕ್ಕಂಥಮ್ ವಂಶಿ ಆಕ್ಷನ್ ಕಟ್ ಹೇಳಲಿರುವ ಚಿತ್ರಕ್ಕೆ ಅಲ್ಲು ಅರ್ಜುನ್ ನಾಯಕ. ಈತನಿಗೆ ನಾಯಕಿಯಾಗುವ ಸಾಧ್ಯತೆಯಿದೆ ಅಂತಿದೆ ಟಾಲಿವುಡ್ ಮೂಲ. ಈಗಾಗ್ಲೇ ಈ ಚಿತ್ರಕ್ಕೆ ‘ನಾ ಪೇರು ಸೂರ್ಯ-ನಾ ಇಲ್ಲು ಇಂಡಿಯಾ’ ಎಂಬ ಟೈಟಲ್ ಕೂಡ ಸಹ ಫಿಕ್ಸ್ ಆಗಿದೆ.

One thought on “ರಶ್ಮಿಕಾ ಮಂದಣ್ಣ ಸ್ಟೈಲಿಶ್ ಸ್ಟಾರ್ ಗೆ ನಾಯಕಿ ಆಗ್ಬಿಟ್ರಾ ?

  • October 24, 2017 at 7:56 PM
    Permalink

    Thank you for sharing superb informations. Your site is so cool. I’m impressed by the details that you’ve on this website. It reveals how nicely you perceive this subject. Bookmarked this web page, will come back for extra articles. You, my pal, ROCK! I found simply the information I already searched everywhere and simply could not come across. What a perfect site.

Comments are closed.