Health tips : ತಂಪು ತಂಪಾಗಿ ಹೊಟ್ಟೆಗೆ ಸೇರಿ ಜೀವಕ್ಕೆ ಕುತ್ತು ತರುವ ತಂಪು ಪಾನೀಯ…

ಬಿರು ಬಿಸಿಲಿನ ನಡುವೆ ದಾಹ ಇಂಗಿಸಲು ತಂಪು ಪಾನೀಯಗಳು ಸುಲಭವಾಗಿ ಎಲ್ಲೆಡೆ ಲಭಿಸುತ್ತಿವೆ. ಹಾಗಂತ ಈ ಪಾನೀಯಗಳನ್ನು ಕುಡಿದರೆ ಜೀವಕ್ಕೆ ಅಪಾಯವನ್ನುಂಟು ಮಾಡುವ ಖಾಯಿಲೆಗಳನ್ನು ತರುವುದಂತೂ ಗ್ಯಾರಂಟಿ. ಇದನ್ನು ಸ್ವತಃ ಇಂಡಿಯನ್ ಮೆಡಿಕಲ್ ಅಸೋಸಿಯೇಷನ್ ಹಾಗೂ ಬ್ಯೂರೋ ಆಫ್ ಇಂಡಿಯನ್ ಸ್ಟಾಂಡರ್ಡ್ ಬಹಿರಂಗ ಪಡಿಸಿವೆ.

ದೇಶದ ವಿವಿದೆಡೆ ಕೋಕೋಕೋಲಾ ಮತ್ತು ಪೆಪ್ಸಿಕೋ ಕಂಪನಿ ಸೇರಿದಂತೆ ಹಲವು ಕಂಪನಿಗಗಳು ತಂಪು ಪಾನೀಯವನ್ನು ತಯಾರಿಸುತ್ತಿದೆ. ವಿವಿಧೆಡೆ ತೆರಳಿ ಈ 12 ಕಂಪನಿಗಳ ಉತ್ಪನ್ನಗಳ ಮಾದರಿಗಳನ್ನು ಪರೀಕ್ಷೆಗೆ ಒಡ್ಡಲಾಗಿದೆ. ಈ ಪರೀಕ್ಷೆಯಲ್ಲಿ ಭಯಾನಕ ಅಂಶಗಳು ಹೊರಬಿದ್ದಿವೆ.

ಕೆಲವು ಕಂಪನಿಗಳು ಜೀವಕ್ಕೆ ಕುತ್ತಾಗಿರುವ ಹಾಗೂ ಭಾರತದಲ್ಲಿ ನಿಷೇಧಿಸಿರುವ ಕ್ರಿಮಿನಾಶಗಳನ್ನು ಬಳಸುತ್ತಿದ್ದರೆ, ಇನ್ನು ಕೆಲವು ಬಿಐಎಸ್ ನ ನಿರ್ದೇನಕ್ಕಿಂತ ಹೆಚ್ಚು ಪಟ್ಟು ಕ್ರಿಮಿನಾಶಕವನ್ನು ನಿರ್ದಾಕ್ಷಿಣ್ಯವಾಗಿ ಗ್ರಾಹಕರಿಗೆ ಕುಡಿಸುತ್ತಿದೆ. ಕೋಲ್ಕತ್ತಾದಲ್ಲಿ ತಯಾರಿಸಲಾಗುತ್ತಿರುವ ಕೋಕೋಕೋಲಾ ಉತ್ಪನ್ನಗಳಲ್ಲಿ ಬಿಐಎಸ್ ನ ನಿರ್ದೇಶನಕ್ಕಿಂತ 140 ಪಟ್ಟು ಹೆಚ್ಚು ಕ್ರಿಮಿನಾಶಕವನ್ನು ಬಳಸುತ್ತಿದೆ. ಇನ್ನು ಥಾಣೆಯಲ್ಲಿ ಸುಮಾರು 200 ಪಟ್ಟು ಹೆಚ್ಚು ಕ್ರಿಮಿನಾಶಕವನ್ನು ಬಳಸಲಾಗುತ್ತಿದೆ.

ಹೆಪ್ತಾಕ್ಲೋರ್ ಎಂಬ ಕ್ರಿಮಿನಾಶಕವನ್ನು ಭಾರತದಲ್ಲಿ ನಿಷೇಧಿಸಲಾಗಿದೆ. ಆದರೂ ಹೆಪ್ತಾಕ್ಲೋರ್ ನ್ನು ತಂಪುಪಾನೀಯದಲ್ಲಿ ಶೇಕಡ 71ರಷ್ಟು ಬಳಸಲಾಗುತ್ತಿದೆ. ಅಷ್ಟೇ ಅಲ್ಲ, ನ್ಯೂರೋ ಟಾಕ್ಸಿನ್ ಸೇರಿದಂತೆ ಹಲವು ವಿಷಕಾರಿ ಕ್ರಿಮಿನಾಶಕಗಳನ್ನು ತಂಪುಪಾನೀಯಗಳಲ್ಲಿ ಬಳಸಲಾಗುತ್ತಿದೆ. ಹೀಗೆ ಒಂದಲ್ಲ ಒಂದು ಕ್ರಿಮಿನಾಶಕ ಗ್ರಾಹಕನ ಹೊಟ್ಟೆ ಸೇರುತ್ತಲೇ ಇದೆ.

ಈ ಕುರಿತು 3 ವರ್ಷಗಳ ಹಿಂದೆಯೇ ವರದಿ ನೀಡಲಾಗಿತ್ತು. ಅದರಂತೆ ಎಲ್ಲ ಕಂಪನಿಗಳಿಗೂ ಕ್ರಿಮಿನಾಶಕ ಅಂಶಗಳನ್ನು ಕಡಿತಗೊಳಿಸುವಂತೆ ಸೂಚಿಸಲಾಗಿತ್ತು. ಆದರೆ, ಯಾವುದೇ ಪ್ರಯೋಜನವಾಗಿಲ್ಲ. ಕೇಂದ್ರ ಸರ್ಕಾರದ ನಿರಾಸಕ್ತಿ, ಕಠಿಣ ಕಾನೂನು ಇಲ್ಲದಿರುವುದು ಸೇರಿದಂತೆ ಹಲವು ಕಾರಣಗಳಿಂದ ವಿದೇಶಿ ಕಂಪನಿಗಳು ಕ್ರಮ ತೆಗೆದುಕೊಳ್ಳದೇ ಕೈ ಕಟ್ಟಿ ಕುಳಿತಿವೆ.

ಹೆಚ್ಚು ಹೆಚ್ಚು ಕ್ರಿಮಿ ನಾಶಕ ಅಂಶಗಳನ್ನು ಒಳಗೊಂಡಿರುವ ತಂಪು ಪಾನೀಯ ಸೇವಿಸುವುದರಿಂದ ಮಾರಕ ರೋಗಗಳು ದೇಹಕ್ಕೆ ಅಂಟಿಕೊಳ್ಳಬಹುದು. ಕ್ಯಾನ್ಸರ್ ಸೇರಿದಂತೆ ಹಲವು ಜೀವಕ್ಕೆ ಕುತ್ತು ತರುವ ರೋಗಗಳು ಬರಬಹುದು ಎಂಬ ಅಂಶ ಸಂಶೋಧನೆಯಿಂದ ಬಯಲಾಗಿದೆ. ಇಷ್ಟಾದರೂ, ಬಣ್ಣ ಬಣ್ಣದ ಪ್ಯಾಕೆಟ್ ಮತ್ತು ಬಾಟಲಿಗಳಲ್ಲಿ ಕಡಿಮೆ ದರದಲ್ಲಿ ಮಾರುಕಟ್ಟೆಯಲ್ಲಿ ಕ್ರಿಮಿನಾಶಕ ಹೊಂದಿರುವ ಎಲ್ಲ ಬಗೆಯ ತಂಪುಪಾನೀಯಗಳು ರಾರಾಜಿಸುತ್ತಿರುವುದು ಮಾತ್ರ ವಿಪರ್ಯಾಸ.
ಇಂಡಿಯನ್ ಮೆಡಿಕಲ್ ಅಸೋಸಿಯೇಷನ್ ಬಿಡುಗಡೆಗೊಳಿಸಿರುವ ಪಟ್ಟಿ ಇಲ್ಲಿದೆ.
ತಂಪು ಪಾನೀಯಗಳ ಹೆಸರು – ಕ್ರಿಮಿನಾಶಕ ಬಳಕೆ (ಶೇಕಡಾವಾರುವಿನಲ್ಲಿದೆ)

_1     Thums up      7.2%_

_2     Coke              9.4%_   

_3     7 UP             12.5%_  

_4     Mirinda         20.7%_   

_5     Pepsi            10.9%_  

_6     Fanta              29.1%_    

_7    Sprite                 5.3%_

_8    Frooti               24.5%_
_9    Maaza              19.3%_

One thought on “Health tips : ತಂಪು ತಂಪಾಗಿ ಹೊಟ್ಟೆಗೆ ಸೇರಿ ಜೀವಕ್ಕೆ ಕುತ್ತು ತರುವ ತಂಪು ಪಾನೀಯ…

  • October 16, 2017 at 4:38 PM
    Permalink

    Pretty section of content. I just stumbled upon your weblog and in accession capital to assert that I acquire actually enjoyed account your blog posts. Any way I’ll be subscribing to your feeds and even I achievement you access consistently quickly.

Comments are closed.