Exclusive: ಶಿವಪ್ಪನ ಅಡ್ಡದಲ್ಲಿ ಮತ್ತೆ ರಣರಂಗವಾಗುತ್ತೆ ಸ್ಯಾಂಡಲ್ ವುಡ್ !

ಈಗಂತೂ ಎಲ್ಲರ ಕಣ್ಣು ಸ್ಯಾಂಡಲ್ ವುಡ್ ಮೇಲೆ ನೆಟ್ಟಿರೋದಂತೂ ನಿಜ. ಒಂದರ ಹಿಂದೊಂದು ಸಿನಿಮಾಗಳು ಬಾಕ್ಸ್ ಆಫೀಸ್ ನಲ್ಲಿ ಗೆಲ್ತಿರೋದೇ ಪ್ರಮುಖ ಕಾರಣ. ಆದ್ರೆ ವಿಷ್ಯ ಇದಲ್ಲ. ಸ್ಯಾಂಡಲ್ ವುಡ್ ಕಿಂಗ್ ಶಿವರಾಜ್ ಕುಮಾರ್ ಶಿವಪ್ಪನ ಅವತಾರದಲ್ಲಿ ಮತ್ತೆ ರಣರಂಗ ಸೃಷ್ಟಿ ಮಾಡೋಕೆ ಹೊರಟಿದ್ದಾರೆ. ಏನು ಅರ್ಥ ಆಗ್ಲಿಲ್ವಾ..? ಇಲ್ಲಿದೆ ನೋಡಿ ಸ್ಟೋರಿ.

ಅಂದ್ಹಾಗೆ ಶಿವಪ್ಪ ಹಾಗು ಮತ್ತೆ ರಣರಂಗ ಇವೆರಡು ಹೊಸದಾಗಿ ಸೆಟ್ಟೇರಲಿರುವ ಶಿವರಾಜ್ ಕುಮಾರ್ ಎರಡು ಸಿನಿಮಾಗಳು.  ರಾಟೆ, ಅಂಬಾರಿ, ಐರಾವತದಂತಹ ಚಿತ್ರಗಳನ್ನ ನಿರ್ದೇಶಿಸಿರುವ ಎ.ಪಿ ಅರ್ಜುನ್ ಶಿವಪ್ಪ ಚಿತ್ರಕ್ಕೆ ಆಕ್ಷನ್ ಕಟ್ ಹೇಳ್ತಿದ್ದಾರೆ.

ಇನ್ನೊಂದು ಕಡೆ ಬಾಕ್ಸ್ ಆಫೀಸ್ ನಲ್ಲಿ ಅಬ್ಬರಿಸುತ್ತಿರೋ ರಾಜಕುಮಾರ ನಿರ್ದೇಶಕನ ಸಿನಿಮಾ. ಶಿವಣ್ಣನಿಗೆ ಆಕ್ಷನ್ ಕಟ್ ಹೇಳ್ತಿರೋ ಸಂತೋಷ್ ಆನಂದ್ ರಾಮ್ ಮುಂದಿನ ಚಿತ್ರದ ಟೈಟಲ್ ‘ಮತ್ತೆ ರಣರಂಗ’. ಈ ಎರಡೂ ಚಿತ್ರಗಳ ಬಗ್ಗೆ ಸೆಂಚುರಿ ಸ್ಟಾರ್ ಗೆ ಸಿಕ್ಕಾ-ಪಟ್ಟೆ ಹೋಪ್ ಇದೆ ಅಂತಿವೆ ಗಾಂಧಿನಗರದ ಮೂಲಗಳು.

ಸದ್ಯ ಶಿವರಾಜ್ ಕುಮಾರ್ ದಿ ವಿಲನ್ ಚಿತ್ರತಂಡವನ್ನ ಸೇರಿಕೊಳ್ಳಲಿದ್ದು, ಆ ಸಿನಿಮಾದ ಬಳಿಕ ಈ ಎರಡೂ ಸಿನಿಮಾಗಳ ಕಡೆ ಮುಖ ಮಾಡಲಿದ್ದಾರೆ. ಹೀಗಾಗಿ ಮುಂದಿನ ಎರಡು ವರ್ಷಗಳು ಸೆಂಚುರಿ ಸ್ಟಾರಿನದ್ದೇ ಹವಾ ಅಂದ್ರೂ ತಪ್ಪಾಗಲಿಕ್ಕಿಲ್ಲ.

One thought on “Exclusive: ಶಿವಪ್ಪನ ಅಡ್ಡದಲ್ಲಿ ಮತ್ತೆ ರಣರಂಗವಾಗುತ್ತೆ ಸ್ಯಾಂಡಲ್ ವುಡ್ !

  • October 25, 2017 at 10:15 AM
    Permalink

    magnificent issues altogether, you just gained a new reader.
    What might you recommend about your submit that you simply made a
    few days in the past? Any sure?

Comments are closed.

Social Media Auto Publish Powered By : XYZScripts.com