Summer holiday : ಗೋಲ್ಡನ್ ಚ್ಯಾರಿಯೇಟ್ ರೈಲಿನಲ್ಲಿ ಪ್ರವಾಸ ….

ಏಪ್ರಿಲ್-ಮೇ ತಿಂಗಳು ಸಹಜವಾಗಿಯೇ ರಜಾ ದಿನಗಳು ಅನ್ನೋ ಭಾವನೆ ಜನರಲ್ಲಿದೆ. ಮಕ್ಕಳಿಗೆ ಪರೀಕ್ಷೆ ಮುಗಿದಿರೋದರಿಂದ ಹೆತ್ತವರು ಪ್ರವಾಸದ ಪ್ಲಾನ್​ ಮಾಡ್ತಾರೆ. ಹೀಗೆ ಟ್ರಿಪ್​ ಹೋಗೋ ಮೂಡಲ್ಲಿರೋ ಜನರಿಗಾಗಿ ಕರ್ನಾಟಕ ಪ್ರವಾಸೋದ್ಯಮ ಇಲಾಖೆ ಐಷಾರಾಮಿ ದಿ ಗೋಲ್ಡನ್ ಚ್ಯಾರಿಯೇಟ್ ರೈಲಿನಲ್ಲಿ ವಿಶೇಷ ಪ್ರವಾಸದ ಪ್ಯಾಕೇಜ್ ಆರಂಭಿಸಲಿದೆ.
   ಹೌದು ಈ ಪ್ರವಾಸದಲ್ಲಿ ಸಧ್ಯಕ್ಕೆ ಹಂಪಿ ಮತ್ತು ಮೈಸೂರು ತೆರಳಲು ಅವಕಾಶವಿದೆ. ಹವಾನಿಯಂತ್ರಿತ ಈ ರೈಲಿನಲ್ಲಿ ಪ್ರವಾಸ ನಡೆಯಲಿದ್ದು, ಸಾಫ್ಟವೇರ್​ ಉದ್ಯೋಗಿಗಳನ್ನು ಗಮನದಲ್ಲಿರಿಸಕೊಂಡು ಪ್ರವಾಸೋದ್ಯಮ ಇಲಾಖೆ ವಾರಾಂತ್ಯದಲ್ಲಿ ಪ್ರವಾಸ ಆಯೋಜಿಸಿದೆ. ಎರಡು ರಾತ್ರಿ ಹಾಗೂ ಒಂದು ಹಗಲಿನ ಪ್ರವಾಸದ ಪ್ಯಾಕೇಜ್ ಗೆ ತಲಾ ೩೦ ಸಾವಿರ ರೂಪಾಯಿ‌‌ ದರ ನಿಗದಿ ಪಡಿಸಲಾಗಿದೆ. ಪ್ರತಿ ಶುಕ್ರವಾರ ಬೆಂಗಳೂರಿನಿಂದ ಆರಂಭವಾಗಲಿರುವ ಪ್ರವಾಸದ ಟ್ರಿಪ್ ಭಾನುವಾರ ರಾತ್ರಿ ನಗರಕ್ಕೆ ಹಿಂತಿರುಗಲಿದೆ.   ಊಟೋಪಚಾರ-ಸ್ಥಳಗಳ ವೀಕ್ಷಣೆ,ಗೈಡ್ ಗಳ ವೆಚ್ಚ ಎಲ್ಲವನ್ನು ಪ್ಯಾಕೇಜ್ ಒಳಗೊಂಡಿರಲಿದೆ.
ಮೈಸೂರು ಪ್ರವಾಸ ಶ್ರೀರಂಗಪಟ್ಟಣ,ರಂಗನತಿಟ್ಟು ಪಕ್ಷಿಧಾಮ,ಅಂಬಾವಿಲಾಸ ಅರಮನೆ,ಬೃಂದಾವನ,ಲಲಿತ ಮಹಲ್ ಒಳಗೊಂಡಿದ್ದು, ಮೈಸೂರು ಪ್ರವಾಸ ನಾಳೆಯಿಂದ ಆರಂಭವಾಗಲಿದೆ. ಏಪ್ರಿಲ್ 17 ರಂದು ವಿಶ್ವ ವಿಖ್ಯಾತ ಹಂಪಿ ಪ್ರವಾಸ ಆರಂಭವಾಗಲಿದ್ದು, ಈ ಪ್ಯಾಕೇಜ್​ ಹೇಮಕೂಟ,ವಿರೂಪಾಕ್ಷ ದೇವಾಲಯ,ಆನೆಬಿಡಾರ,ಲೋಟಸ್ ಮಹಲ್,ಹಜಾರ ರಾಮ ದೇವಾಲಯ,ರಾಣಿ ಸ್ನಾನ ಗೃಹ ,ಕಲ್ಲಿನ ರಥ, ತುಂಗಭದ್ರಾ ನದಿಯ ಸೂರ್ಯಾಸ್ಥ ವೀಕ್ಷಣೆಯನ್ನು ಒಳಗೊಂಡಿದೆ.   ಇನ್ನು ಪ್ರವಾಸದ ಬಗ್ಗೆ ಹೆಚ್ಚಿನ ಮಾಹಿತಿಗೆ ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಇಲಾಖೆ ವೆಬ್ ಸೈಟ್ ನಲ್ಲಿ ಮಾಹಿತಿ ಪಡೆಯಬಹುದಾಗಿದೆ.

Comments are closed.

Social Media Auto Publish Powered By : XYZScripts.com