Online market : ಇನ್ನು ಮುಂದೆ ಹಾಪ್ ಕಾಮ್ಸ್ ನಲ್ಲೂ ಅನ್ ಲೈನ್ ಸೇವೆ ಲಭ್ಯ…

ರೈತರ ಪಾಲಿಗೆ ಸಂಜೀವಿನಿಯಾಗಿರುವ  ಹಾಪ್‌ಕಾಮ್ಸ್ ಆಧುನಿಕರಣ ಕೊಂಡಿದೆ. ನಗರದಲ್ಲಿನ  ಹಾಪ್​ ಕಾಮ್ಸ್​ಗಳು ಇಂದಿನಿಂದ ಆನ್ ಲೈನ್ ಡೆಲಿವರಿ ಆರಂಭಿಸಿದ್ದು, ಖಾಸಗಿ ಸಹಭಾಗಿತ್ವದಲ್ಲಿ ಹಾಪ್ ಕಾಮ್ಸ್​ ಈ ಹೊಸ ಪ್ರಯತ್ನಕ್ಕೆ ಮುನ್ನುಡಿ ಬರೆದಿದೆ.
 ಹಾಪ್ ಕಾಮ್ಸ್​ನಲ್ಲಿ  ೨೦೦ ರೂಪಾಯಿಯಿಂದ ಆರಂಭಿಸಿ ೧೦ ಸಾವಿರ ರೂಪಾಯಿವರೆಗಿನ  ಖರೀದಿಗೆ ನೀವು ಆನ್​ಲೈನ್​ ಸೇವೆ ಪಡೆದುಕೊಳ್ಳಬಹುದಾಗಿದೆ. ನೀವು ಆರ್ಡರ್ ಮಾಡಿದ ೨೪ ಗಂಟೆಯೊಳಗೆ ವಸ್ತುಗಳು‌ ನಿಮ್ಮ ಮನೆ ಸೇರಲಿದೆ. ಯುನರವಿ ಎಂಬ ಖಾಸಗಿ ಸಂಸ್ಥೆ ಸಹಭಾಗಿತ್ವದಲ್ಲಿ ಈ ಯೋಜನೆ ಜಾರಿಗೊಳ್ಳುತ್ತಿದ್ದು, ಮೊದಲ ಹಂತವಾಗಿ ಜಯನಗರ ಹಾಗೂ ಇಂದಿರಾನಗರದಲ್ಲಿ ಮಳಿಗೆ ಆರಂಭಿಸಲಾಗಿದೆ. ಈ ಪ್ರಯತ್ನ ಯಶಸ್ವಿಯಾದ ಲ್ಲಿ ನಗರದ ಇತರೆಡೆಯೂ ಆನ್ ಲೈನ್​ ಸೇವೆ ಲಭ್ಯವಾಗಲಿದೆ.
  ಹಾಪ್ ಕಾಮ್ಸ್​ ಅನ್ ಲೈನ್ ನಲ್ಲಿ  ಆರ್ಡರ್ ಮಾಡುವ ಗ್ರಾಹಕರು ಪೊರೈಕೆ ವೆಚ್ಚವಾಗಿ  ೫೦೦ ರೂಪಾಯಿವರೆಗಿನ ಖರೀದಿಗಾಗಿ ೨೦ ರೂಪಾಯಿ,೫೦೦ ರಿಂದ ೧೦ ಸಾವಿರ ರೂಪಾಯಿವರೆಗಿನ  ಆರ್ಡರ್ ಮೇಲೆ  ೬೦ ರಿಂದ ೮೦ ರೂಪಾಯಿ ಪಾವತಿಸಬೇಕು. ಇದರಿಂದ ಹಾಪ್ ಕಾಮ್ಸ್​ನ ವಹಿವಾಟು ಪ್ರಮಾಣದಲ್ಲಿ ಏರಿಕೆಯಾಗಬಹುದೆಂದು ನೀರಿಕ್ಷಿಸಲಾಗಿದೆ. ಪ್ರಸ್ತುತ ಹಾಪ್ ಕಾಮ್ಸ್​ ಪ್ರತಿನಿತ್ಯ  ೩೦ ಲಕ್ಷ ವಹಿವಾಟು ನಡೆಸುತ್ತಿದ್ದು, ಇದೀಗ ಅನ್ ಲೈನ್ ವಹಿವಾಟಿನಿಂದ ೧೦ ಲಕ್ಷ ರೂಪಾಯಿಯಷ್ಟು ವ್ಯಾಪಾರ ವೃದ್ಧಿಸುವ ಭರವಸೆ ವ್ಯಕ್ತವಾಗಿದೆ.

Comments are closed.

Social Media Auto Publish Powered By : XYZScripts.com