ನಂಜನಗೂಡಿನಲ್ಲಿ ಶ್ರೀಕಂಠೇಶ್ವರ ಜಾತ್ರೆಯ ಸಡಗರ : ಆಂತಕದ ನಡುವೆ ಸರಾಗವಾಗಿ ಸಾಗಿದ ರಥ…

ಮೈಸೂರು:  ನಂಜನಗೂಡಿನ ಚುನಾವಣೆಯ ಗುಂಗಿನಲ್ಲೂ ಶ್ರೀಕಂಠೇಶ್ವರಸ್ವಾಮಿಯ ಜಾತ್ರೆಯ ಸಡಗರ ಮೇಳೈಸಿದ್ದು, ಶುಕ್ರವಾರ ಬೆಳಗ್ಗೆ  5.20 ರಿಂದ 6.20 ರವರೆಗಿನ ಶುಭ ಮೀನ ಲಗ್ನದಲ್ಲಿ ಪಂಚ ಮಹಾರಥೊತ್ಸವ ನೆರವೇರಿದೆ. ಶುಕ್ರವಾರ ದಿನವಿಡೀ ನಂಜನಗೂಡು ಶ್ರೀಕಂಠೇಶ್ವರಸ್ವಾಮಿಯ ದೊಡ್ಡ ಜಾತ್ರಾ ಮಹೋತ್ಸವದ ನಡೆಯುತ್ತಿದೆ.
ಲಕ್ಷ ಲಕ್ಷ ಭಕ್ತಾಧಿಗಳ ಸಮ್ಮುಖದಲ್ಲಿ ಜಾತ್ರಾ ಮಹೋತ್ಸವಕ್ಕೆ ಚಾಲನೆ ಸಿಕ್ಕಿದ್ದು,  ಗಣಪತಿ, ಶ್ರೀಕಂಠೇಶ್ವರಸ್ವಾಮಿ, ಪಾರ್ವತಿ ಅಮ್ಮನವರು, ಸುಬ್ರಹ್ಮಣ್ಯೇಶ್ವರ ಹಾಗು ಚಂಡಿಕೇಶ್ವರ ದೇವರುಗಳ ಉತ್ಸವಮೂರ್ತಿಗಳ ಮೆರವಣಿಗೆ ನಡೆಯಿತು. ಶ್ರೀಕಂಠೇಶ್ವರ ಜಾತ್ರೆಯ ಕೇಂದ್ರಬಿಂದು 125 ಅಡಿ ಎತ್ತರದ ಅಲಂಕೃತ ಗೌತಮ ರಥ ಭಕ್ತರ ಕಣ್ಮನ ಸೆಳೆಯುತ್ತಿದೆ.
ಚುನಾವಣೆಯೂ ಹತ್ತಿರ ಬಂದಿರುವ ಕಾರಣ, ಜಾತ್ರೆಯಲ್ಲಿ ಯಾವುದೇ ಅವಘಡ ಸಂಭವಿಸದಂತೆ ಜಿಲ್ಲಾ ಪೊಲೀಸರು ಭದ್ರತೆ ಕೈಗೊಂಡಿದ್ದಾರೆ.  ತಾತ್ಕಾಲಿಕವಾಗಿ 35 ಸಿಸಿ ಕ್ಯಾಮರಾ, 7 ಮೊಬೈಲ್ ವಾಚ್ ಟವರ್ ವ್ಯವಸ್ಥೆ ಮಾಡಲಾಗಿದೆ.

Comments are closed.

Social Media Auto Publish Powered By : XYZScripts.com