By election ; ಯಡಿಯೂರಪ್ಪನವರದ್ದು ಉತ್ತರನ ಪೌರುಷ : ವಿ.ಎಸ್‌ ಉಗ್ರಪ್ಪ…

ಮೈಸೂರು:  ರೈತರ ಸಾಲ ಮನ್ನಾ ವಿಚಾರದಲ್ಲಿ ಮಾಜಿ ಮುಖ್ಯಮಂತ್ರಿ ಬಿಎಸ್‌ ಯಡಿಯೂರಪ್ಪ ಉತ್ತರ ಕುಮಾರನ ಪೌರುಷ ತೋರಿಸುತ್ತಿದ್ದಾರೆ ಎಂದು ವಿಧಾನ ಪರಿಷತ್‌ ಸದಸ್ಯ ವಿಎಸ್‌ ಉಗ್ರಪ್ಪ ಲೇವಡಿ ಮಾಡಿದ್ದಾರೆ. ಮೈಸೂರಿನಲ್ಲಿ ಗುರುವಾರ ಪತ್ರಕರ್ತರ ಭವನದಲ್ಲಿ ಮಾತನಾಡಿದ ಅವರು,  ಬಿಎಸ್‌ವೈ ಮಾನಸಿಕ ಸ್ಥಿಮಿತ ಕಳೆದುಕೊಂಡಂತೆ ಕಾಣುತ್ತಿದೆ, ರೈತರ ವಿಚಾರದಲ್ಲಿ ರಾಜಕೀಯ ಮಾಡುವುದನ್ನ ಅವರು ಮೊದಲು ನಿಲ್ಲಿಸಬೇಕು ಎಂದರು.  ರೈತರ ಸಾಲಾ ಮನ್ನಾ ಮಾಡುವಂತೆ ಕೋರಿ ಮಹಾರಾಷ್ಟ್ರ ಕೇಂದ್ರಕ್ಕೆ ಹೋಗಿದೆ, ಮಹಾರಾಷ್ಟ್ರ ಈಗಾಗಲೇ ಪ್ರಧಾನಿ‌ ಮೋದಿಯವರನ್ನ ಭೇಟಿಯಾಗಿ ಮನವಿ ಸಲ್ಲಿಸಿದೆ. ಆದರೆ ಬಿಎಸ್‌ವೈ ಇಲ್ಲಿಯೇ ಇದ್ದು, ರಾಜ್ಯಸರ್ಕಾರದ ಮೇಲೆ ಗೂಬೆ ಕೂರಿಸುತ್ತಾ, ಉತ್ತರನ ಪೌರುಷ ತೋರಿಸುವ ಬದಲು,  ತಾವೇ ಸ್ವತಃ  ರೈತರ ಸಾಲಾ ಮನ್ನಾ ಮಾಡುವ ಕುರಿತು ಪ್ರಧಾನಿಯವರನ್ನ ಒತ್ತಾಯಿಸಬಹುದಿತ್ತು. ಅಂಥ ದೈರ್ಯ ಅವರಲ್ಲಿಲ್ಲ ಎಂದರು.
ಸಾಲಾ ಮನ್ನಾ ವಿಚಾರದಲ್ಲಿ ಕೇಂದ್ರ ಸರ್ಕಾರ ಸ್ಪಂದಿಸದ ಹಿನ್ನಲೆಯಲ್ಲಿ ಮಾತನಾಡಿದ ಉಗ್ರಪ್ಪ,  ಉತ್ತರ ಪ್ರದೇಶಕ್ಕೆ ಕೇಂದ್ರ ಸರ್ಕಾರ ವಿಶೇಷ ಅನುದಾನ ನೀಡಿದ ಹಿನ್ನೆಲೆಯಲ್ಲಿ ಸಾಲ ಮನ್ನಾ ಸಾಧ್ಯವಾಯಿತು. ಕರ್ನಾಟಕ ವಿಚಾರದಲ್ಲಿ ಕೇಂದ್ರಸರ್ಕಾರ ಮಲತಾಯಿ ಧೋರಣೆ ಅನುಸರಿಸುತ್ತಿದೆ ಎಂದು ಗಂಭೀರ ಆರೋಪ ಮಾಡಿದ್ದಾರೆ.

Comments are closed.

Social Media Auto Publish Powered By : XYZScripts.com