By election : ಪ್ರತಿಭಟನೆ : ಕಾಂಗ್ರೆಸ್‌, ಬಿಜೆಪಿ ಕಾರ್ಯಕರ್ತರ ನಡುವೆ ಕಿತ್ತಾಟ : ಲಾಠಿ ಚಾರ್ಜ್…

ಗುಂಡ್ಲುಪೇಟೆ : ಮಾಜಿ ಸಚಿವ ರೇಣುಕಾಚಾರ್ಯ ನೇತೃತ್ವದಲ್ಲಿ ಬುಧವಾರ ನಡೆದ ಪ್ರತಿಭಟನೆಯಿಂದ ಗುಂಡ್ಲುಪೇಟೆ ಪೊಲೀಸ್‌ ಠಾಣೆ ಮುಂದೆ ಉದ್ವಿಘ್ನ ಪರಿಸ್ಥಿತಿ ಉಂಟಾಗಿದ್ದು, ಪರಿಸ್ಥಿತಿ ತಿಳಿಗೊಳಿಸಲು ಪೊಲೀಸರು ಲಾಠಿಚಾರ್ಜ್‌ ನಡೆಸಿದ್ದಾರೆ.  ಕಾಂಗ್ರೆಸ್ ಕಾರ್ಯಕರ್ತರು ಉಪ ಚುನಾವಣೆಗಾಗಿ ಹಣ ಹಂಚುತ್ತಿದ್ದಾರೆಂದು ಆರೋಪಿಸಿ, ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆಸುತ್ತಿದ್ದ ವೇಳೆ, ಠಾಣೆ ಮುಂದೆ ಜಮಾಯಿಸಿದ ಕಾಂಗ್ರೆಸ್ ಕಾರ್ಯಕರ್ತರು, ಮಾತಿಗೆ ಮಾತು ಬೆಳೆಸಿದ್ದಾರೆ.  ಎರಡು ಪಕ್ಷದ ಕಾರ್ಯಕರ್ತರ ನಡುವೆ ಮಾತಿನ ಚಕಮಕಿ ನಡೆದು ಗುಂಡ್ಲುಪೇಟೆ ಪೊಲೀಸ್ ಠಾಣೆ ಮುಂದೆ ಉದ್ವಿಘ್ನ ಪರಿಸ್ಥಿತಿ ಉಂಟಾಗಿತ್ತು. ಹೀಗಾಗಿ ಕಿತ್ತಾಡುತ್ತಿದ್ದ ಎರಡು ಗುಂಪುಗಳನ್ನ ಚದುರಿಸಲು ಪೊಲೀಸರು ಲಾಠಿ ಚಾರ್ಜ್‌ ನಡೆಸಿದ್ದಾರೆ.
ಇದಕ್ಕೂ ಮೊದಲು, ಹಣ ಹಂಚಿಕೆ ಆರೋಪದ ಮೇಲೆ ಚಿಕ್ಕಬಳ್ಳಾಪುರ ಜಿಲ್ಲಾ ಪಂಚಾಯತ್‌ ಸದಸ್ಯ ಮಳವಳ್ಳಿ ಚನ್ನಪ್ಪನನ್ನ ಪೊಲೀಸರು ಬಂಧಿಸಿದ್ದು, 1 ಲಕ್ಷ 26 ಸಾವಿರ ರೂಪಾಯಿ ಹಣವನ್ನ ವಶಪಡಿಸಿಕೊಂಡಿದ್ದರು.  ಬರಗಿ ಕ್ಷೇತ್ರದ ಕಾಂಗ್ರೆಸ್ ಜಿ.ಪಂ ಸದಸ್ಯನಾಗಿರುವ ಮಳವಳ್ಳಿ ಚೆನ್ನಪ್ಪನಿಂದ ಹಣದ ಜೊತೆಗೆ ಹಣ ಹಂಚಿಕೆಯ ಮಾಹಿತಿ ಇರುವ ಚೀಟಿಯನ್ನೂ ಪೊಲೀಸರು ಪಡೆದುಕೊಂಡಿದ್ದು, ಇದರಿಂದ ಮಹತ್ವದ ಮಾಹಿತಿ ತಿಳಿದಂತಾಗಿದೆ.  ಬಿಜೆಪಿ ಸದಸ್ಯರಿಗೆ ಈ ಬಗ್ಗೆ ಅನುಮಾನವಿದ್ದ ಕಾರಣ, ಖುದ್ದಾಗಿ ಅವರೇ ಚುನಾವಣಾ ವೀಕ್ಷಕರಿಗೆ ಮಾಹಿತಿ ನೀಡಿ ಈತನನ್ನ ರೆಡ್ ಹ್ಯಾಂಡ್ ಹಿಡಿದುಕೊಟ್ಟಿದ್ದಾರೆ. ಈ ಹಿನ್ನೆಲೆಯಲ್ಲಿ ರೇಣುಕಾಚಾರ್ಯ ಕಾರ್ಯಕರ್ತರೊಂದಿಗೆ ಪೊಲೀಸ್‌ ಠಾಣೆ ಮುಂದೆ ಪ್ರತಿಭಟನೆ ನಡೆಸಿದ್ದರು.

2 thoughts on “By election : ಪ್ರತಿಭಟನೆ : ಕಾಂಗ್ರೆಸ್‌, ಬಿಜೆಪಿ ಕಾರ್ಯಕರ್ತರ ನಡುವೆ ಕಿತ್ತಾಟ : ಲಾಠಿ ಚಾರ್ಜ್…

  • October 20, 2017 at 7:35 PM
    Permalink

    Hi there, I log on to your new stuff like every week. Your writing style is awesome, keep up the good work!|

  • October 21, 2017 at 4:26 AM
    Permalink

    Hi to every one, it’s really a fastidious for me to go to see this web site, it contains priceless Information.|

Comments are closed.

Social Media Auto Publish Powered By : XYZScripts.com