ಇನ್ಮೇಲೆ Whatsapp ಮೂಲಕವೂ ಹಣ ವರ್ಗಾಯಿಸಬಹುದು !

Cashless Transactionಗೆ ಒತ್ತು ಕೊಡ್ತಿರೋ ಪ್ರಧಾನಿ ಮೋದಿ ನಡೆಗೆ Whatsapp ಕೂಡಾ ಸಾಥ್ ಕೊಡುವಂತಿದೆ. ಯಾಕಂದ್ರೆ ಅತೀ ಶೀಘ್ರದಲ್ಲಿ ವಾಟ್ಸಾಪ್ ಮೂಲಕವೂ ಹಣವನ್ನು ವರ್ಗಾಯಿಸಬಹುದಂತೆ.

ಈಗಾಗ್ಲೇ ಬೇರೆ ಬೇರೆ ವಿಧಾನಗಳಿಂದ ಇಂಟರ್ನೆಟ್ ಬ್ಯಾಂಕಿಂಗ್ ಮಾಡುವ ಸೌಲಭ್ಯಗಳು ಎಲ್ಲೆಡೆ ವ್ಯಾಪಕವಾಗಿ ಬಳಕೆಯಲ್ಲಿವೆ. ಈ ಪಟ್ಟಿಗೆ ವಾಟ್ಸಾಪ್ ಕೂಡಾ ಸೇರಿಕೊಳ್ಳಲು ಸಜ್ಜಾಗಿದೆ.

ಫೇಸ್ಬುಕ್ ಮಾಲಿಕತ್ವದ ವಾಟ್ಸಾಪ್ UPI (Unified Payments Interface) ಬಳಕೆ ಮೂಲಕ ಡಿಜಿಟಲ್ ಪೇಮೆಂಟ್ ಮಾಡುವ ಸೇವೆಯನ್ನು ಆರಂಭಿಸಲಿದೆ ಎಂದು ಹೇಳಲಾಗುತ್ತಿದೆ. ಸದಾ ವಾಟ್ಸಾಪ್ ಚಾಟಿಂಗ್ ನಲ್ಲೇ ಮುಳುಗಿರುವ ಮಂದಿಗೆ ಇದೊಂದು ಸಂತಸದ ಸುದ್ದಿಯಾಗಿರುವುದಂತೂ ಹೌದು.

ಎಲ್ಲಾ ಅಂದುಕೊಂಡಂತೆ ಆದರೆ ಇನ್ನು 3-4 ತಿಂಗಳೊಳಗೆ ವಾಟ್ಸಾಪ್ ಮೂಲಕವೇ ಹಣದ ವ್ಯವಹಾರ ಶುರುವಾಗಲಿದೆ. ಈ ಮೂಲಕ ವಾಟ್ಸಾಪ್ ನಲ್ಲೇ ವ್ಯವಹಾರ ಮಾಡುವವರಿಗೆ ಬಹಳ ಅನುಕೂಲಕರವಾಗಲಿದೆ. ವಾಟ್ಸಾಪ್ ಕೇವಲ ಸಾಮಾಜಿಕ ಜಾಲತಾಣ ಮಾತ್ರ ಆಗಿ ಉಳಿಯದೇ ಬ್ಯುಸಿನೆಸ್ ಗೆ ಹೊಸ ದಾರಿಯೂ ಆಗುವ ಎಲ್ಲಾ ಲಕ್ಷಣಗಳಿವೆ.

Comments are closed.

Social Media Auto Publish Powered By : XYZScripts.com