ಜೀನ್ಸ್-ಟಿ ಶರ್ಟ್ ಮೇಲೆ ಯೋಗಿಯ ವಕ್ರದೃಷ್ಟಿ !

ಉತ್ತರ ಪ್ರದೇಶದ ನೂತನ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅಧಿಕಾರ ವಹಿಸಿಕೊಂಡ ಸ್ವಲ್ಪ ಸಮಯದಲ್ಲೇ ರಾಜ್ಯದಲ್ಲಿ ಭಾರೀ ಬದಲಾವಣೆ ತರಲು ಟೊಂಕ ಕಟ್ಟಿ ನಿಂತಿದ್ದಾರೆ. ಗುಟ್ಕಾ ಸಿಗರೇಟು ನಿಷೇಧ ಮಾಡಿದ ನಂತರ ಕಾಲೇಜುಗಳಲ್ಲಿ ಜೀನ್ಸ್ ಮತ್ತು ಟೀಶರ್ಟ್ ಧರಿಸುವುದನ್ನೂ ಯೋಗಿ ನಿಷೇಧಿಸಿದ್ದಾರೆ.

ಇದಕ್ಕೆ ಸಂಬಂಧಿಸಿದಂತೆ ಸಿಎಂ ಯೋಗಿ ಆದಿತ್ಯನಾಥ್‌ ಉನ್ನತ ಶಿಕ್ಷಣ ಇಲಾಖೆಗೆ ಈಗಾಗ್ಲೇ ಸೂಚನೆ ನೀಡಿ ಉತ್ತರ ಪ್ರದೇಶದಲ್ಲಿರುವ ಒಟ್ಟು 158 ಸರ್ಕಾರಿ ಕಾಲೇಜು ಹಾಗೂ 331 ಅನುದಾನಿತ ಕಾಲೇಜುಗಳಲ್ಲಿ ಜೀನ್ಸ್‌ ಹಾಗೂ ಟೀ ಶರ್ಟ್ ಧರಿಸುವುದನ್ನು ನಿಷೇಧಿಸಲಾಗಿದೆ ಎನ್ನಲಾಗುತ್ತಿದೆ.

ಹಾಗಂತ ಈ ನಿಯಮ ಕೇವಲ ಕಾಲೇಜು ವಿದ್ಯಾರ್ಥಿ-ವಿದ್ಯಾರ್ಥಿನಿಯರಿಗೆ ಮಾತ್ರವಲ್ಲ. ಅಲ್ಲಿನ ಶಿಕ್ಷಕ ಹಾಗೂ ಶಿಕ್ಷಕೇತರ ಸಿಬ್ಬಂದಿಗಳಿಗೂ ಅನ್ವಯವಾಗಲಿದೆ. ಮಾರ್ಚ್‌ 31ರಂದು ಉನ್ನತ ಶಿಕ್ಷಣ ಇಲಾಖೆ ಜಂಟಿ ನಿರ್ದೇಶಕಿ ಉರ್ಮಿಳಾ ಸಿಂಗ್ ಅವರಿಗೆ ಈ ಕುರಿತಾಗಿ ಅಧಿಸೂಚನೆ ಸಹ ನೀಡಲಾಗಿದೆ ಎನ್ನಲಾಗುತ್ತಿದೆ.

ಲಕ್ನೋದ ಕಾಲೇಜು ಹುಡುಗ-ಹುಡುಗಿಯರು ಮಾತ್ರ ತಮ್ಮ ಬಳಿ ಇರುವ ಜೀನ್ಸ್ ಟೀಶರ್ಟ್ ಗಳನ್ನು ಏನು ಮಾಡೋದು ಎನ್ನುವ ಚಿಂತೆಯಲ್ಲಿದ್ದಾರೆ. ಕೆಲವರಂತೂ ತಮ್ಮ ಬಳಿ ಕೇವಲ ಜೀನ್ಸ್ ಮತ್ತು ಟಿ ಶರ್ಟ್ ಮಾತ್ರವೇ ಇದೆ. ಹೊಸ ನಿಯಮ ಜಾರಿಯಾದರೆ ನಾವು ಮತ್ತೆ ಹೊಸದಾಗಿ ಬಟ್ಟೆ ಕೊಳ್ಳಬೇಕಾಗುತ್ತದೆ ಎಂದು ದುಃಖ ತೋಡಿಕೊಂಡಿದ್ದಾರೆ.

Comments are closed.