ODI rank: ಭಾರತಕ್ಕೆ ಏಕದಿನ ಶ್ರೇಯಾಂಕದಲ್ಲಿ  ನಾಲ್ಕನೇ ಸ್ಥಾನ

ಐಸಿಸಿ ನೂತನ ರ್ಯಾಂಕಿಂಗ್ ಪ್ರಕಟಗೊಂಡಿದ್ದ ಭಾರತ ಏಕದಿನ ತಂಡ ಪಟ್ಟಿಯಲ್ಲಿ ನಾಲ್ಕನೇ ಸ್ಥಾನವನ್ನು ಪಡೆದುಕೊಂಡಿದೆ. 119 ಅಂಕ ಸೇರಿಸಿರುವ ದಕ್ಷಿಣ ಆಫ್ರಿಕಾ ತಂಡ ಅಗ್ರ ಸ್ಥಾನದಲ್ಲಿದ್ದು, ನಂತರದ ಸ್ಥಾನದಲ್ಲಿ ಆಸ್ಟ್ರೇಲಿಯಾ (118) ಹಾಗೂ ನ್ಯೂಜಿಲೆಂಡ್ (113) ತಂಡಗಳಿವೆ.
2017 ರ ಸೆಪ್ಟೆಂಬರ್ 30 ರಂದು ಇಂಗ್ಲೆಂಡ್ ಹಾಗೂ ರ್ಯಾಂಕಿಂಗ್ನಲ್ಲಿ ಮೊದಲ ಏಳು ಸ್ಥಾನದಲ್ಲಿರುವ ತಂಡಗಳು ವಿಶ್ವಕಪ್ಗೆ ನೇರವಾಗಿ ಪ್ರವೇಶ ಪಡೆಯಲಿದ್ದು, ಉಳಿದ ನಾಲ್ಕು ತಂಡಗಳನ್ನು 2018 ರಲ್ಲಿ ನಡೆಯಲಿರುವ ಹತ್ತು ತಂಡಗಳು ಪಾಲ್ಗೊಳ್ಳಲಿರುವ ಅರ್ಹತಾ ಸುತ್ತಿನ ಪಂದ್ಯಗಳ ಮೂಲಕ ಆಯ್ಕೆ ನಡೆಯಲಿದೆ.
ಐಸಿಸಿ ವಿಶ್ವ ಕಪ್ ಕ್ರಿಕೆಟ್ ಪಂದ್ಯಾವಳಿ 2019 ರಲ್ಲಿ ನಡೆಯಲಿದ್ದು, ನೇರವಾಗಿ ಅರ್ಹತೆ ಪಡೆಯಲು ವೆಸ್ಟ್ ಇಂಡೀಸ್ ಹಾಗೂ ಪಾಕಿಸ್ತಾನ ತಂಡಗಳು ಸೆಣಸಾಟ ನಡೆಸಬೇಕಿದೆ. ಉಭಯ ರಾಷ್ಟ್ರಗಳ ನಡುವೆ ಮೂರು ಏಕದಿನ ಪಂದ್ಯಗಳ ಸರಣಿಯ ಮೊದಲ ಪಂದ್ಯ ಶುಕ್ರವಾರ ಗಯಾನಾದಲ್ಲಿ ನಡೆಯಲಿದೆ.

 

Comments are closed.

Social Media Auto Publish Powered By : XYZScripts.com