Football AFC cup : ಬಿಎಫ್‌ಸಿ ಗೆಲುವು, ಅಗ್ರಸ್ಥಾನಕ್ಕೆರಿದ ಬೆಂಗಳೂರು ತಂಡ….

ಕೊನೆಯ ಕ್ಷಣದವರೆಗೂ ಚಂಚಲೆಯಾಗಿದ್ದ ವಿಜಯ ಲಕ್ಷ್ಮೀ ಕೊನೆಯ ಕ್ಷಣದಲ್ಲಿ ಜಾನ್ ಜಾನ್ಸನ್ ಅವರು ಬಾರಿಸಿದ ಗೋಲಿನ ಸಹಾಯದಿಂದ ಬೆಂಗಳೂರು ಎಫ್‌ಸಿ ಪರ ವಾಲಿದ್ದಾಳೆ. ಬುಧವಾರ  ಎ.ಎಫ್.ಸಿ ಕಪ್ ಫುಟ್ಬಾಲ್ ಟುರ್ನಿಯಲ್ಲಿ ಬಿಎಫ್‌ಸಿ ತಂಡ ೧-೦ ಗೋಲುಗಳಿಂದಮಾಜಿಯಾ ಸ್ಫೋರ್ಟ್ಸ್ ಹಾಗೂ ರಿಕ್ರಿಯೇಷನ್ ಕ್ಲಬ್ ತಂಡವನ್ನು ಮಣಿಸಿತು.

ಕಾಫು ಅಟಾಲ್‌ನ ರಾಸಮೇ ದಾಹುದ್ ಅಂಗಳದಲ್ಲಿ ಮಂಗಳವಾರ ನಡೆದ ಪಂದ್ಯದಲ್ಲಿ ಬಿಎಫ್‌ಸಿ ಪರ ಜಾನ್ ೯೪ನೇ ನಿಮಿಷದಲ್ಲಿ ಗೊಲು ಬಾರಿಸಿ ಜಯದಲ್ಲಿ ಮಿಂಚಿದರು. ಆಡಿರುವ ಎರಡು ಪಂದ್ಯಗಳಲ್ಲಿ ಬೆಂಗಳೂರು ಎಫ್‌ಸಿ ತಂಡ ಜಯ ಸಾಧಿಸಿ ೬ ಅಂಕಗಳೊಂದಿಗೆ ‘ಇ’ ಗುಂಪಿನ ಅಂಕ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದೆ. ಮಾಜಿಯಾ ತಂಡ ೨ ಪಂದ್ಯಗಳಲ್ಲಿ ೧ ಗೆಲುವು, ೧ ಸೋಲು ಕಂಡಿದ್ದು, ೩ ಅಂಕಗಳೊಂದಿಗೆ ಎರಡನೇ ಸ್ಥಾನದಲ್ಲಿದೆ.

ಮೊದಲಾವಧಿಯ ಆಟದಲ್ಲಿ ಉಭಯ ತಂಡದ ಆಟಗಾರರು ಅಂಕಗಳಿಸುವ ಯೋಜನೆ ಫಲಿಸಲಿಲ್ಲ. ಸಿಕ್ಕ ಅವಕಾಶದಲ್ಲಿ ಬೆಂಗಳೂರು ತಂಡ ಕೈ ಸುಟ್ಟು ಕೊಂಡಿತು. ಆದರೆ ಎರಡನೇ ಅವಧಿಯಲ್ಲಿ ಸಮಯೋಚಿತ ಆಟವನ್ನು ಆಡಿದ ಸುನಿಲ್ ಛೆಟ್ರಿ ಮುಂದಾಳತ್ವದ ತಂಡ ಕೊನೆಯ ಕ್ಷಣದಲ್ಲಿ ಸಿಕ್ಕ ಅವಕಾಶ ಬಳಸಿಕೊಂಡು ಚಂಚಲೆಯಾಗಿದ್ದ ವಿಜಯ ಲಕ್ಷ್ಮಿಯನ್ನು ಕಟ್ಟಿಹಾಕಿತು.

 

 

Comments are closed.