Black & white : ಮತ್ತಿಕಟ್ಟಿ ಅಳಿಯನಿಗೆ ಜಾಮೀನು : ತಾತ್ಕಾಲಿಕ ಬಿಡುಗಡೆ ಪಡೆದ ಪ್ರವೀಣ್‌….

ಬೆಂಗಳೂರು: ಬ್ಲ್ಯಾಕ್‌ ಅಂಡ್‌ ವೈಟ್‌ ದಂದೆ ನಡೆಸಲು ಹೋಗಿ, ಸಿಸಿಬಿ ಪೊಲೀಸರ ವಶವಾಗಿದ್ದ, ಕಾಂಗ್ರೆಸ್‌ ನಾಯಕ ವೀರಣ್ಣ ಮತ್ತಿಕಟ್ಟಿ ಅಳಿಯ ಮಂಗಳವಾರ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದಾರೆ.  ಹಳೆಯ ನೋಟುಗಳನ್ನು ಹೊಸ ನೋಟುಗಳಿಗೆ ಬದಲಾಯಿಸಲು ಯತ್ನಿಸುತ್ತಿದ್ದ ವೇಳೆ ಸಿಸಿಬಿ ಪೊಲೀಸರಿಂದ ಬಂಧಿಸಲ್ಪಟ್ಟ ಪ್ರವೀಣ್‌ ಕುಮಾರ್‌ ರೊಂದಿಗೆ 6 ತಿಂಗಳುಗಳಿಂದ ತಾನು ಸಂಪರ್ಕದಲ್ಲಿಲ್ಲ ಎಂದು ವೀರಣ್ಣ ಮತ್ತಿಕಟ್ಟಿ ಹೇಳಿಕೆ ನೀಡಿದ್ದರು.
ನಾಗರಬಾವಿಯ ಬೆಸ್ಕಾಂ ಲೇಔಟ್‍ನಲ್ಲಿ ಬ್ಲ್ಯಾಕ್ ಅಂಡ್ ವೈಟ್ ದಂಧೆಯಲ್ಲಿ ಭಾಗಿಯಾಗಿದ್ದ ಪ್ರವೀಣ್‌ ಕುಮಾರ್‌ ತಂಡದಿಂದ ಸಿಸಿಬಿ ಪೊಲೀಸರು  9 ಕೋಟಿ 10 ಲಕ್ಷ ರೂ. ಹಳೇ ನೊಟುಗಳನ್ನ ಜಪ್ತಿ ಮಾಡಿದ್ದರು.  ರಿಯಲ್ ಎಸ್ಟೆಟ್ ಉದ್ಯಮಿ ಉಮೇಶ್ ಎಂಬವರಿಂದ ಹಣ ತಂದು ವೈಟ್ ಮಾಡಿಕೊಡುವುದಾಗಿ ಆರೋಪಿ ಪ್ರವೀಣ್ ಕುಮಾರ್ ಒಪ್ಪಿಕೊಂಡಿದ್ದರು ಎನ್ನಲಾಗಿದ್ದು, ಪ್ರವೀಣ್ ಕುಮಾರ್ ಜೊತೆ 14 ಜನ ಭಾಗಿಯಾಗಿದ್ದರು.

Comments are closed.

Social Media Auto Publish Powered By : XYZScripts.com