By election : ಸ್ವಾಭಿಮಾನದ ಬಾವುಟ ಎತ್ತರಕ್ಕೆ ಹಾರಲಿ – ಎಸ್.ಎಂ.ಕೃಷ್ಣ ….

ಶ್ರೀನಿವಾಸ ಪ್ರಸಾದ್ ಅವರ ಸ್ವಾಭಿಮಾನದ ಬಾವುಟವನ್ನು ನಂಜನಗೂಡು ವಿಧಾನಸಭಾ ಕ್ಷೇತ್ರದಲ್ಲಿ ಅತಿ ಎತ್ತರದಲ್ಲಿ ಹಾರಿಸುವ ಜವಾಬ್ದಾರಿ ಇಲ್ಲಿನ ಜನತೆಯ ಮೇಲಿದ್ದು ಅವರನ್ನು ಮತ್ತೆ ರಾಜ್ಯ ವಿಧಾನಸಭೆಗೆ ಆರಿಸಿ ಕಳುಹಿಸಬೇಕು ಎಂದು ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಅವರು ಮನವಿ ಮಾಡಿದ್ದಾರೆ.

ಕಾಂಗ್ರೆಸ್ ತೊರೆದು ಬಿಜೆಪಿಗೆ ಸೇರ್ಪಡೆಗೊಂಡಿರುವ ಅವರು ನಂಜನಗೂಡು ಮತ್ತು ಗುಂಡ್ಲುಪೇಟೆ ವಿಧಾನಸಭಾ ಕ್ಷೇತ್ರಗಳಲ್ಲಿ ನಡೆಯುತ್ತಿರುವ ಉಪ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗಳ ಪರ ಪ್ರಚಾರ ನಡೆಸಲು ಸೋಮವಾರ ಮೈಸೂರಿಗೆ ಆಗಮಿಸಿದ್ದು ನಂಜನಗೂಡಿನ ಬಿಜೆಪಿ ಪ್ರಚಾರ ಕಾರ್ಯಾಲಯದಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದರು.

ಶ್ರೀನಿವಾಸ ಪ್ರಸಾದ್ ಅವರು ಹಿರಿಯ, ಅನುಭವಿ ರಾಜಕೀಯ ಮುತ್ಸದ್ಧಿಯಾಗಿದ್ದು ನಲವತ್ತು ವರ್ಷಗಳಿಗೂ ಹೆಚ್ಚು ಕಾಲದಿಂದ ರಾಜಕೀಯ ಕ್ಷೇತ್ರದಲ್ಲಿರುವ ಅವರು ನಿಸ್ವಾರ್ಥ ಸೇವೆ ಸಲ್ಲಿಸುವ ಮೂಲಕ ಜನಮಾನಸದಲ್ಲಿ ನೆಲೆಸಿದ್ದಾರೆ. ಅಂಥ ನಾಯಕರು ಕಾಂಗ್ರೆಸ್ ಪಕ್ಷದೊಳಗಿನ ವಾತಾವರಣದಿಂದ ಮನನೊಂದು ಪಕ್ಷ ತೊರೆದು ಬಿಜೆಪಿಗೆ ಬಂದಿದ್ದಾರೆ. ಅವರು ಸಚಿವ ಸ್ಥಾನವನ್ನು ಕಳೆದುಕೊಂಡರೂ ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಡಬೇಕಾಗಿರಲಿಲ್ಲ. ಆದರೆ ಅವರ ಸ್ವಾಭಿಮಾನಕ್ಕೆ ಧಕ್ಕೆ ಉಂಟಾದದ್ದರಿಂದ ಪ್ರತಿಭಟಿಸಿ ಪ್ರಾತಿನಿಧ್ಯವನ್ನು ತ್ಯಜಿಸಿ ಹೊರಬಂದು ಜನರ ಬಳಿ ಹೋಗುವ ನಿರ್ಧಾರ ಮಾಡಿದರು. ಇಂದು ಬಹಳ ಜನರು ಸುಲಭ ಮಾರ್ಗದಲ್ಲಿ ಅಧಿಕಾರ ಹಿಡಿಯಲು ಯತ್ನಿಸುತ್ತಾರೆ. ದಕ್ಕಿರುವ ಅಧಿಕಾರವನ್ನು ಬಿಡಲು ಮನಸ್ಸಿರುವುದಿಲ್ಲ. ಹಾಗಿರುವಾಗ ಶ್ರೀನಿವಾಸ ಪ್ರಸಾದ್ ಅವರು ತಮಗಾದ ಅವಮಾನವನ್ನು ಸಹಿಸದೆ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ ಎಂದು ಅವರು ಪ್ರಸಾದ್ ಅವರಿಗಾದ ನೋವನ್ನು ಪುನರ್ ಮನನ ಮಾಡಿದ ಅವರು ಸ್ವಾಭಿಮಾನದ ದೃಷ್ಟಿಯಿಂದ ಮತದಾರರು ಪ್ರಸಾದ್ ಅವರ ನಿಲುವಿಗೆ ಬಲ ತುಂಬಬೇಕು ಎಂದು ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಹಾಜರಿದ್ದ ವಿ.ಶ್ರೀನಿವಾಸ ಪ್ರಸಾದ್ ಮಾತನಾಡಿ, ನನ್ನ ರಾಜಕೀಯ ಜೀವನದಲ್ಲಿ ಎಸ್.ಎಂ.ಕೃಷ್ಣ ಅವರು ನಾನು ಹೆಚ್ಚು ಇಷ್ಟಪಡುವ ನಾಯಕರು. ಅವಿಭಜಿತ ಕಾಂಗ್ರೆಸ್ ಪಕ್ಷದಲ್ಲಿ ಪಕ್ಷವನ್ನು ಬಲಪಡಿಸುವ ಜವಾಬ್ದಾರಿಯನ್ನು ಹೊಂದಿದ್ದ ಎಸ್.ಎಂ.ಕೃಷ್ಣ ಅವರು ಉತ್ತಮ ಸಂಘಟಕರು. ಇಂದು ಅವರು ನನ್ನ ಪರ ಪ್ರಚಾರಕ್ಕೆ ಬಂದಿರುವುದರಿಂದ ನನಗೆ ಹೆಚ್ಚಿನ ಬಲ ಬಂದಿದೆ. ಅವರ ಆಶೀರ್ವಾದ ಸಿಕ್ಕಿರುವುದಕ್ಕೆ ಸಂತೋಷವಾಗಿದೆ. ಇದುವರೆಗೆ ಇದ್ದ ವಿಶ್ವಾಸ ಇಮ್ಮಡಿಯಾಗಿ ಆತ್ಮಸ್ಥೈರ್ಯ ಹೆಚ್ಚಾಗಿದೆ ಎಂದರು.

 

`ರಾಜ್ಯದಲ್ಲಿರುವುದು ಅತ್ಯಂತ ಕೆಟ್ಟ ಸರ್ಕಾರ’ – ಎಸ್.ಎಂ.ಕೃಷ್ಣ

ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಕಾಂಗ್ರೆಸ್ ಸರ್ಕಾರ ನನ್ನ 55 ವರ್ಷಗಳ ರಾಜಕೀಯ ಜೀವನದಲ್ಲಿ ನಾನು ಕಂಡ ಅತ್ಯಂತ ಕೆಟ್ಟ ಸರ್ಕಾರ ಎಂದು ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಅಭಿಪ್ರಾಯಪಟ್ಟಿದ್ದಾರೆ.

ನಂಜನಗೂಡಿನಲ್ಲಿ ಸೋಮವಾರ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು ನಾನು ಕೆ.ಸಿ.ರೆಡ್ಡಿ ಸೇರಿದಂತೆ ಹಲವು ಮುಖ್ಯಮಂತ್ರಿಗಳನ್ನು ನೋಡಿದ್ದೇನೆ, ಹಲವರೊಡನೆ ಕೆಲಸ ಮಾಡಿದ್ದೇನೆ, ಸ್ವತಃ ಆಡಳಿತ ನಡೆಸಿದ್ದೇನೆ. ಆದರೆ ಇದು ಯಾವ ದೂರದೃಷ್ಟಿಯಿಲ್ಲದ ಸರ್ಕಾರ. ಆಡಳಿತ ನಡೆಸಲು ಇರಬೇಕಾದ ಯಾವ ಮಾನದಂಡವೂ ಈ ಸರ್ಕಾರಕ್ಕಿಲ್ಲ ಎಂದರು.

 

7 thoughts on “By election : ಸ್ವಾಭಿಮಾನದ ಬಾವುಟ ಎತ್ತರಕ್ಕೆ ಹಾರಲಿ – ಎಸ್.ಎಂ.ಕೃಷ್ಣ ….

 • October 18, 2017 at 12:44 PM
  Permalink

  I’m now not sure the place you’re getting your information, but good topic. I needs to spend a while learning more or working out more. Thank you for great info I used to be on the lookout for this info for my mission.|

 • October 18, 2017 at 2:30 PM
  Permalink

  I am now not certain the place you’re getting your info, however good topic. I must spend a while learning more or working out more. Thank you for great info I was on the lookout for this info for my mission.|

 • October 18, 2017 at 4:16 PM
  Permalink

  It is appropriate time to make a few plans for the long run and it is time to be happy. I’ve read this submit and if I could I want to counsel you few fascinating issues or tips. Perhaps you can write subsequent articles referring to this article. I want to learn more things approximately it!|

 • October 20, 2017 at 6:50 PM
  Permalink

  My brother recommended I might like this web site. He was totally right. This post truly made my day. You cann’t imagine simply how much time I had spent for this info! Thanks!|

 • October 20, 2017 at 8:36 PM
  Permalink

  You have made some really good points there. I checked on the net to find out more about
  the issue and found most people will go along with your views on this site.

 • October 21, 2017 at 2:44 AM
  Permalink

  Hurrah, that’s what I was searching for, what a data! present here at this webpage, thanks admin of this web page.|

 • October 24, 2017 at 11:59 AM
  Permalink

  Wow, incredible weblog format! How long have you been running a
  blog for? you make blogging look easy. The total look of
  your website is wonderful, as smartly as the content!

Comments are closed.

Social Media Auto Publish Powered By : XYZScripts.com