Mandya teacher murder : ಸುಪಾರಿ ಕೊಟ್ಟಿದ್ದು ಯಾರಂತಿರಾ, ನಂಬಕ್ಕಾಗಲ್ಲ…

ಮಂಡ್ಯ :  ಮದ್ದೂರಿನ ಅರೆನಾಚನಹಳ್ಳಿಯಲ್ಲಿ ಬೆಳ್ಳಂಬೆಳಗ್ಗೆ ನಡೆದಿದ್ದ ಮುಖ್ಯ ಶಿಕ್ಷಕನ ಕೊಲೆ ಪ್ರಕರಣದ ಆರೋಪಿಗಳನ್ನು ಭಾನುವಾರ ಪೊಲೀಸರು ಬಂಧಿಸಿದ್ದು, ಕೊಲೆಯಾದ ಶಿಕ್ಷಕನ ಹೆಂಡತಿ, ಮತ್ತು ಮಗಳೇ ಪ್ರಮುಖ ಆರೋಪಿಗಳಾಗಿದ್ದಾರೆ.  ಹತ್ಯೆಯಾಗಿದ್ದ ಶಿಕ್ಷಕ ಶಿಶಿಭೂಷಣ್‌ ಪತ್ನಿ ಶಾಂತಮ್ಮ ಮತ್ತು ಮಗಳು ನವ್ಯಶ್ರಿ ಸೇರಿ ಕೊಲೆಗೆ ಸುಪಾರಿ ಕೊಟ್ಟಿದ್ದರು ಎಂಬುದು ಧೃಡಪಟ್ಟಿದ್ದು, ಕೊಲೆಗಾಗಿ ಐದು ಲಕ್ಷ ಕೊಟ್ಟಿದ್ದರು ಎಂದು ತಿಳಿದುಬಂದಿದೆ.  ಮುಖ್ಯಶಿಕ್ಷಕನ ಫೊಟೋ, ಆತ ಸಂಚರಿಸುವ ರಸ್ತೆಯ ಫೋಟೋ ಮತ್ತು ಸ್ಕೂಲ್ ಫೋಟೋ ವಾಟ್ಸಪ್ ನಲ್ಲಿ ಹಂತಕರಿಗೆ ಕಳುಹಿಸಿ ಕೊಲೆ ಮಾಡಲು ಸೂಚಿಸಿದ್ದರು ಎಂಬ ಭಯಾನಕ ಸತ್ಯ ಭಾನುವಾರ ತಿಳಿದುಬಂದಿದೆ.
ಮಾರ್ಚ್‌ 31ರ ದಿನ ಬೆಳ್ಳಂಬೆಳಗ್ಗೆ, ಮಂಡ್ಯದ ಮದ್ದೂರು ತಾಲೂಕಿನ ಅರೆಚಾಕನಹಳ್ಳಿಯಲ್ಲಿ ಕೆಲಸದ ನಿಮಿತ್ತ ಶಾಲೆಗೆ ಆಗಮಿಸುತ್ತಿದ್ದ ಮುಖ್ಯೋಪಾಧ್ಯಾಯ ಶಶಿಭೂಷನ್‌ (47)ರ ಬೈಕ್‌ಗೆ ಕಾರ್‌ನಿಂದ ಗುದ್ದಿದ ಹಂತಕರು,  ಕೆಳಗೆಬಿದ್ದ ಅವರನ್ನ ಕತ್ತು ಕುಯ್ದು ಕೊಲೆ ಮಾಡಿದ್ದರು.
ಬಿದರಹೊಸಹಳ್ಳಿ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಮುಖ್ಯಶಿಕ್ಷಕರಾಗಿ ಕಾರ್ಯ ನಿರ್ವಹಿಸುತ್ತಿದ್ದ ಶಿಶಿಭೂಷಣ್‌  ಕೊಲೆಯಿಂದ ಗ್ರಾಮದಲ್ಲಿ ಆತಂಕ ಮನೆಮಾಡಿತ್ತು.  ಕೆ.ಎಂ.ದೊಡ್ಡಿ ಪೊಲೀಸರು ಸ್ಥಳಕ್ಕೆ ಭೇಟಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದರು. ಮೂರೇ ದಿನದಲ್ಲಿ ಮುಖ್ಯ ಆರೋಪಿಗಳನ್ನ ಬಂಧಿಸಿದ್ದು, ಹಂತಕರಿಗಾಗಿ ಹುಡುಕಾಟ ನಡೆಸಿದ್ದಾರೆ.  ⁠⁠⁠⁠

One thought on “Mandya teacher murder : ಸುಪಾರಿ ಕೊಟ್ಟಿದ್ದು ಯಾರಂತಿರಾ, ನಂಬಕ್ಕಾಗಲ್ಲ…

  • October 20, 2017 at 7:20 PM
    Permalink

    I’m really enjoying the design and layout of your website. It’s a very easy on the eyes which makes it much more pleasant for me to come here and visit more often. Did you hire out a developer to create your theme? Excellent work!

Comments are closed.

Social Media Auto Publish Powered By : XYZScripts.com