Child kidnap: ನಿಮ್ಮ ಮಕ್ಕಳು ಪದೆ ಪದೆ ಚಾಕಲೇಟ್ ತಿನ್ನುತ್ತಾರಾ.. ಸ್ವಲ್ಪ ನಿಲ್ಲಿ.. ವರದಿ ಓದಿ …

ನಿಮ್ಮ ಮಕ್ಕಳು ಚಾಕಲೇಟ್ ತಿನ್ನುತ್ತಿದ್ದಾರಾ..? ಬೇರೆಯವರಿಂದ ಚಾಕಲೇಟ್ ಪಡೆದರಾ..? ನೀವು ಮಕ್ಕಳ ಸಮಾಧಾನಕ್ಕೆ ಚಾಕಲೇಟ್ ನೀಡುತ್ತೀರಾ..? ಹಾಗಿದ್ದರೆ ಈ ವರದಿಯನ್ನು ನೀವು ಓದಲೇ ಬೇಕು.

ಮಾಧಕ ವಸ್ತುಗಳ ತಡೆಗೆ ಸರ್ಕರ ಇನ್ನಿಲ್ಲದ ಕಸರತ್ತು ನಡೆಸುತ್ತಿದೆ. ಆದರೆ ಸರ್ಕಾರ ಚಾಪೆ ಕೆಳಗೆ ನುಸುಳಿದರೆ, ಮಾರಾಟಗಾರರು ರಂಗೂಲಿ ಕೆಳಗೆ ಕಾರ್ಯ ಮಾಡುತ್ತಾರೆ. ಇದೇನಪ್ಪ ಚಾಪೆ, ರಂಗೋಲಿ ಅಂತಾ ಗಲಿಬಿಲಿ ಆಗಬೇಡಿ. ವಿಧಾನಪರಿಷತ್ನಲ್ಲಿ ಗೃಹ ಸಚಿವ ಡಾ. ಪರಮೇಶ್ವರ್ ಅವರ ಹೇಳಿಕೆ ಎಲ್ಲರ ಚಿಂತೆಯನ್ನು ಹೆಚ್ಚಿಸಿದೆ. ಚಾಕಲೇಟ್ನಲ್ಲಿ ಗಾಂಜಾ ಸೇರಿಸಿ ಮಕ್ಕಳಿಗೆ ಮಾರಾಟ ಮಾಡಲಾಗುತ್ತಿದೆ ಎಂಬ ಆಘಾತಕಾರಿ ವಿಷಯವನ್ನು ಪರಮೇಶ್ವರ್  ಬಹಿರಂಗಪೆಇಸಿದ್ದಾರೆ.

ಮಾರಾಟ ಹೇಗೆ?

ಜಯನಗರ್ ಕಾನ್ವೆಂಟ್ನಲ್ಲಿ ಇಬ್ಬರು ನೈಜಿರಿಯಾ ಪ್ರಜೆಯ ಮಕ್ಕಳು ಶಾಲೆ ಬರುತ್ತಾರೆ. ಈ ಮಕ್ಕಳು ಸ್ನೇಹಿತಿಗೆ ಚಾಕಲೇಟ್ ನೀಡುತ್ತಾರೆ. ಚಾಕಲೇಟ್ ತುಂಬಾ ಚೆನ್ನಾಗಿದೆ ಎಂದು ಮಕ್ಕಳು ಮತ್ತೆ ಮತ್ತೆ ಕೇಳಿ ಪಡೆಯುತ್ತಾರೆ. ಇದನ್ನು ಕಂಡು ನೈಜಿರಿಯಾ ಪ್ರಜೆಗಳು ಶಾಲೆಯ ಸುತ್ತ ಚಾಕಲೇಟ್ ಮಾರಾಟ ದಂಧೆ ಆರಂಭಿಸಿದ್ದರು. ಇವರ ಬಳಿ ಇದ್ದ ಚಾಕಲೇಟ್ ಪರಿಶೀಲಿಸಿದಾಗ ಇವುಗಳಲ್ಲಿ ಗಾಂಜಾ ಇರುವುದು ಪತ್ತೆಯಾಗಿದೆ.


ಬೆಂಗಳೂರಿನಲ್ಲಿ ಮಾಧಕ ವಸ್ತುಗಳ ಮಾರಾಟ ಹೆಚ್ಚಾಗುತ್ತಿದ್ದು, ೪೫ ಪೊಲೀಸ್ ಠಾಣೆಗಳಲ್ಲಿ ಪ್ರಕರಣ ದಾಖಲಾಗಿದೆ. ಬಾಗಲೂರು, ಎಚ್ಎಸ್ಆರ್ ಲೇಔಟ್, ಕೆ.ಆರ್ ಪುರ, ಜೆಜೆ ನಗರ, ಜಯನಗರ, ಕೆಜಿ ನಗರ, ಕಾಡುಗೋಡಿ, ಕೆಂಗೇರಿ, ಮಡಿವಾಳ, ಪುಲಿಕೇಶಿ ನಗರ, ತಿಲಕ್ನಗರ, ವರ್ತೂರು, ಯಲಹಂಕಾ, ಬಸವನಗುಡಿ, ಸೇರಿದಂತೆ ಹಲವೆಡೆ ಪ್ರಕರಣ ದಾಖಲಾಗಿದ್ದು, ಈ ಪ್ರದೇಶವನ್ನು ಸೂಕ್ಷ್ಮ ಪ್ರದೇಶ ಎಂದು ಪರಿಗಣಿಸಿ ವಿಶೇಷ ನಿಗಾ ವಹಿಸಲಾಗಿದೆ ಎಂದು ಗೃಹ ಸಚಿವರು ಹೇಳಿದ್ದಾರೆ.
ವ್ಯಾಪಾರಿಗಳು ಯಾರು? ನೈಜಿರಿಯಾ ಮೂಲದ ಪ್ರಜೇಗಳು ಸಮಾಜ ಘಾತುಕ ಕೆಲಸ ಮಾಡುತ್ತಿರುವುದು ಬಯಲಿಗೆ ಬಂದಿದೆ. ಅಲ್ಲದೆ ಇವರು ಅವಧಿ ಮೀರಿ ನಮ್ಮ ದೇಶದಲ್ಲಿ ವಾಸವಾಗಿರುವುದು ಪತ್ತೆಯಾಗಿದೆ. ಅಲ್ಲದೆ ದೇಶವನ್ನು ಬಿಟ್ಟು ಹೋಗದ ಪರಿಸ್ಥಿತಿ ನಿರ್ಮಾಣವಾಗಿದೆ.

Comments are closed.

Social Media Auto Publish Powered By : XYZScripts.com