By election : ಸದ್ಯದಲ್ಲಿಯೇ ಜಿ.ಪರಮೇಶ್ವರ್‌ಗೆ ಸಿಎಂ ಗೇಟ್ ಪಾಸ್ ನೀಡಲಿದ್ದಾರೆ : ಆರ್‌ ಅಶೋಕ್‌..

ಬೆಂಗಳೂರು :  ನಂಜನಗೂಡು, ಗುಂಡ್ಲುಪೇಟೆಯ ಉಪಚುನಾವಣೆಯ ನಂತರ, ಮುಖ್ಯಮಂತ್ರಿ ಸಿದ್ದರಾಮಯ್ಯ ಕೆಪಿಸಿಸಿ ಅಧ್ಯಕ್ಷ ಜಿ.ಪರಮೇಶ್ವರ್‌ಗೆ ಗೇಟ್‌ಪಾಸ್‌ ನೀಡಲಿದ್ದಾರೆ ಎಂದು ಮಾಜಿ ಡಿಸಿಎಂ ಆರ್‌. ಅಶೋಕ್‌ ಹೇಳಿದ್ದಾರೆ. ಭಾನುವಾರ ಬಿಜೆಪಿ ಕಚೇರಿಯಲ್ಲಿ ಮಾತನಾಡಿದ ಅವರು, ಸಿದ್ದಾರಾಮಯ್ಯ ಅವರ ಮುಂದಿನ ಟಾರ್ಗೆಟ್  ಜಿ.ಪರಮೇಶ್ವರ್ ..! ಈಗಾಗಲೇ ಲೆಟರ್ ಟೈಪ್ ಆಗಿದೆ, ಏಪ್ರಿಲ್ 10 ನಂತರ ಲೆಟರ್ ಪರಮೇಶ್ವರ್‌ ಕೈ ಸೇರಲಿದೆ ಎಂದು ಹೇಳಿದ ಅಶೋಕ್‌, ತಾನು ಗೃಹಮಂತ್ರಿಯಾಗಿದ್ದೆ ಹೀಗಾಗಿ ಇದರ ಬಗ್ಗೆ ತನಗೆ ಮಾಹಿತಿ ಇದೆ ಎಂದು ಸ್ಪಷ್ಟಪಡಿಸಿದರು.
ಪರಮೇಶ್ವರ್ ಗೇಟ್ ಪಾಸ್ ಬಗ್ಗೆ ನನ್ಗೆ ಮಾಹಿತಿ ಇದೆ ಎಂದು ಹೇಳಿದ ಅಶೋಕ್‌, ಕಾಂಗ್ರೆಸ್ ಪಕ್ಷದಲ್ಲಿ ದಲಿತ ಮುಖಂಡರನ್ನ ಸಿದ್ದರಾಮಯ್ಯ ತುಳಿಯುತ್ತಿದ್ದಾರೆ, ಸಿದ್ದರಾಮಯ್ಯಗೆ ಕೃತಜ್ಞತೆ ಇಲ್ಲ ಎಂದು ಆರೋಪಿಸಿದರು.  ಈಗಾಗಲೇ ಹಿರಿಯ ಮುಖಂಡ ಶ್ರೀನಿವಾಸ್ ಪ್ರಸಾದ್ ಗೇಟ್ ಪಾಸ್ ಕೊಟ್ಟಿದ್ದಾರೆ, ಈಗ ದಲಿತರ‍್ಯಾರೂ ಮುಖ್ಯಮಂತ್ರಿ ಪಟ್ಟಕ್ಕೇರಬಾರದು ಎಂಬ ಕಾರಣಕ್ಕೆ ಪರಮೇಶ್ವರ್ ಗೆ  ಗೇಟ್ ಪಾಸ್ ನೀಡಲಿದ್ದಾರೆ ಎಂಬ ಶಾಕಿಂಗ್‌ ನ್ಯೂಸ್‌ ಹೇಳಿದ್ದಾರೆ.
ಇನ್ನು, ಉಪ ಚುನಾವಣೆ ಕುರಿತು ಮಾತನಾಡಿದ ಆರ್‌.ಅಶೋಕ್‌, ಎರಡು ಕ್ಷೇತ್ರದಲ್ಲಿ ಬಿಜೆಪಿ ಗೆಲವು ಸಾಧಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

Comments are closed.