Bengaluru : ತಂಗಿಯನ್ನ ಮದುವೆಯಾಗ್ತೇನೆ ಅಂದಿದ್ದೇ ತಪ್ಪಾಯ್ತು : ರೇಗಿಸಿದವನನ್ನೇ ಎತ್ತಿಬಿಟ್ಟರು ಅಣ್ಣಂದಿರು…

ಬೆಂಗಳೂರು:  ತಂಗಿಯನ್ನ ಮದುವೆಯಾಗುತ್ತೇನೆ ಎಂದು ರೇಗಿಸಿದ್ದ ವ್ಯಕ್ತಿಯನ್ನ ಆಕೆಯ ಅಣ್ಣನೇ  ಬರ್ಬರವಾಗಿ ಕೊಲೆಗೈದ ಘಟನೆ ಮಾರ್ಚ್ 30ರಂದೇ ಬೆಂಗಳೂರಿನ ಕೆಂಗೇರಿ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.
32 ವರ್ಷ ವಯಸ್ಸಿನ ಪುಟ್ಟಸ್ವಾಮಿ ಕೊಲೆಯಾದ ವ್ಯಕ್ತಿಯಾಗಿದ್ದು, ಈತ ಪ್ರತಾಪ್‌ ಎಂಬಾತನ ಬಳಿ, ನಿನ್ನ ತಂಗಿಯನ್ನ ತಾನು ಮದುವೆಯಾಗುತ್ತೇ ಎಂದು ರೇಗಿಸಿದ್ದ ಎನ್ನಲಾಗಿದೆ. ಪುಟ್ಟಸ್ವಾಮಿಯ ಮೇಲೆ ಕೋಪಗೊಂಡ ಪ್ರತಾಪ್‌(20), ಮಹದೇಶ್‌ (25) ಎಂಬಾತನ ಸಹಾಯ ಪಡೆದುಕೊಂಡು ಆತನನ್ನ ಹತ್ಯೆಗೈದು ಶ್ರಿನಿವಾಸಪುರ ರಾಜಕಾಲುವೆಗೆ ಎಸೆದಿದ್ದರು. ಸದ್ಯ ಆರೋಪಿಗಳಿಬ್ಬರೂ ಕೆಂಗೇರಿ ಪೊಲೀಸರ ವಶದಲ್ಲಿದ್ದಾರೆ.

One thought on “Bengaluru : ತಂಗಿಯನ್ನ ಮದುವೆಯಾಗ್ತೇನೆ ಅಂದಿದ್ದೇ ತಪ್ಪಾಯ್ತು : ರೇಗಿಸಿದವನನ್ನೇ ಎತ್ತಿಬಿಟ್ಟರು ಅಣ್ಣಂದಿರು…

Comments are closed.

Social Media Auto Publish Powered By : XYZScripts.com