Kaveri : ಬರದ ಹಿನ್ನೆಲೆ ;ನೀರು ಬಿಡಲು ಕಷ್ಟ, ತಮಿಳುನಾಡಿಗೆ ಮನವರಿಕೆ ಮಾಡಿದ್ದೇವೆ ಸಿಎಸ್ ಕುಂಟಿಯಾ…

ರಾಜ್ಯದಲ್ಲಿ ಬರ ಆವರಿಸಿದ್ದು, ಈ ಹಿನ್ನೆಲೆ ನೀರು ಬಿಡಲು ಸಾಧ್ಯವಿಲ್ಲ ಎಂದು ತಮಿಳುನಾಡು ಅಧಿಕಾರಿಗಳಿಗೆ ಮನವರಿಕೆ ಮಾಡಿದ್ದೇವೆ ಎಂದು ರಾಜ್ಯದ ಮುಖ್ಯಕಾರ್ಯದರ್ಶಿ ಸುಭಾಷ್ ಚಂದ್ರ ಕುಂಟಿಯಾ ಹೇಳಿದ್ದಾರೆ.

ಕಾವೇರಿ ನೀರು ಹಂಚಿಕೆ ವಿವಾದ ಕುರಿತ ಸೌಹಾರ್ಧಯುತ ಮಾತುಕತೆಗೆ ಆಗಮಿಸಿದ್ದ ತಮಿಳುನಾಡಿನ ಅಧಿಕಾರಿಗಳ ನಿಯೋಗದ ಜತೆ  ರಾಜ್ಯ ಮುಖ್ಯಕಾರ್ಯದರ್ಶಿ ಸುಭಾಷ್ ಚಂದ್ರ ಕುಂಟಿಯಾ ಸಭೆ ನಡೆಸಿ ಚರ್ಚಿಸಿದರು.

ಸಭೆ ಬಳಿಕ ಮಾತನಾಡಿದ  ಸುಭಾಷ್ ಚಂದ್ರ ಕುಂಟಿಯಾ, ತಮಿಳುನಾಡು ಅಧಿಕಾರಿಗಳು ರಾಜ್ಯದಲ್ಲಿ ಕುಡಿಯುವ ನೀರಿನ ಕೊರತೆ ಇದೆ.ಹೀಗಾಗಿ 3 ಟಿಎಂಸಿ ನೀರು ಬಿಡುಗಡೆ  ಮಾಡಿ ಎಂದಯ ಮನವಿ  ಮಾಡಿದರು.ಆದರೆ ಸುಪ್ರೀಂ ತೀರ್ಪಿನಂತೆ ನೀರುಬಿಡಿ ಎಂದು ಒತ್ತಾಯಿಸಲಿಲ್ಲ ಎಂದರು.

ಈ ಸಂಬಂಧ ನಮ್ಮ ರಾಜ್ಯದಲ್ಲೂ ಬರಗಾಲದ ಹಿನ್ನೆಲೆ ಕುಡಿಯುವ ನೀರಿಗೆ ತೊಂದರೆ ಇದ್ದು,  ಹೀಗಾಗಿ ನೀರು ಬಿಡಲು ಸಾಧ್ಯವಿಲ್ಲ ಎಂದು ತಮಿಳುನಾಡು ಅಧಿಕಾರಿಗಳಿಗೆ ತಿಳಿಸಿದ್ದೇವೆ ಎಂದು ಸುಭಾಷ್ ಚಂದ್ರ ಕುಂಟಿಯಾ ಸ್ಪಷ್ಟನೆ ನೀಡಿದರು.

Social Media Auto Publish Powered By : XYZScripts.com