Honey trap :ರಿಯಲ್ ಎಸ್ಟೇಟ್ ಉದ್ಯಮಿ ಬಲೆಗೆ, ಹಣ ದರೋಡೆ ಮಾಡಿದ್ದ 6 ಮಂದಿ ಅರೆಸ್ಟ್…

ಬೆಂಗಳೂರು : ಬೆಂಗಳೂರಿನಲ್ಲಿ ಮತ್ತೊಂದು ಹನಿ ಟ್ರ್ಯಾಪ್ ಪ್ರಕರಣ ಬೆಳಕಿಗೆ ಬಂದಿದ್ದು, ರಿಯಲ್ ಎಸ್ಟೇಟ್ ಉದ್ಯಮಿಯನ್ನ  ಬಲೆಗೆ ಬೀಳಿಸಿ ಹಣ ದರೋಡೆ ಮಾಡಿದ್ದ 6 ಮಂದಿ ದರೋಡೆಕೋರರನ್ನ ಬ್ಯಾಟರಾಯನಪುರ ಠಾಣಾ ಪೊಲೀಸರು ಬಂಧಿಸಿದ್ದಾರೆ.

ಮಂಜುನಾಥ್ ಅಲಿಯಾಸ್ ಕತ್ತುಕೋಳಿ, ಜ್ಯೋತಿ, ಮಹದೇವ್, ಸ್ವಾಮಿ, ಮಹೇಶ್ ಬರ್ನು ಅಲಿಯಾಸ್ ಆಶಾ ಬಂಧಿತ ಆರೋಪಿಗಳು. ರಿಯಲ್ ಎಸ್ಟೇಟ್ ಉದ್ಯಮಿ ಗಂಗಾಧರ್ ಎಂಬುವವರ ಬಳಿ ಆರೋಪಿ ಜ್ಯೋತಿ  ತಾನು ಖಾಸಗಿ ಬ್ಯಾಂಕ್ ಮ್ಯಾನೇಜರ್ ಎಂದು ಪರಿಚಯ ಮಾಡಿಕೊಂಡಿದ್ದಳು.

ಬಳಿಕ ಬ್ಯಾಂಕ್ ನಲ್ಲಿ ಖಾತೆ ತೆರಯುವ ವಿಚಾರ ಕುರಿತು ಉದ್ಯಮಿ ಗಂಗಾಧರ್ ಹಾಗೂ ಜ್ಯೋತಿ ನಡುವೆ ಮಾತುಕತೆ ನಡೆದಿತ್ತು. ನಂತರ ಗಂಗಾಧರ್ ಅವರನ್ನ ಬಾರ್ ವೊಂದರ ಬಳಿ ಕರೆಸಿ ಅಲ್ಲಿಂದ ಅವರ ಕಣ್ಣಿಗೆ ಬಟ್ಟೆ ಕಟ್ಟಿ ಬಿಡದಿ ಬಳಿಗೆ ಆರೋಪಿಗಳು ಕರೆದೊಯ್ದಿದ್ದರು. ಆ ನಂತರ ಇವರ ಬಳಿ ಬಂಧಿತ ಆರೋಪಿಗಳು 10 ಲಕ್ಷಕ್ಕೆ ಬೇಡಿಕೆ ಇಟ್ಟಿದ್ದರು.

ಗಂಗಾಧರ್ ಸ್ನೇಹಿತನ ಮೂಲಕ ಹಣವನ್ನ ತರಿಸಿ ಬಂಧಿತ ಆರೋಪಿಗಳಿಗೆ ಕೊಟ್ಟಿದ್ದರು ಎನ್ನಲಾಗಿದೆ. ಈ ಕುರಿತು ಬ್ಯಾಟರಾಯನಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಇದೀಗ 6 ಮಂದಿ ಆರೋಪಿಗಳನ್ನ ಎಡೆಮುರಿ ಕಟ್ಟುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

2 thoughts on “Honey trap :ರಿಯಲ್ ಎಸ್ಟೇಟ್ ಉದ್ಯಮಿ ಬಲೆಗೆ, ಹಣ ದರೋಡೆ ಮಾಡಿದ್ದ 6 ಮಂದಿ ಅರೆಸ್ಟ್…

  • October 18, 2017 at 11:56 AM
    Permalink

    I together with my buddies happened to be reviewing the good tactics from the website and then developed a terrible suspicion I never expressed respect to you for those secrets. Those people were definitely certainly happy to see all of them and have in effect seriously been loving these things. We appreciate you really being really thoughtful and also for picking out these kinds of magnificent tips most people are really desirous to learn about. My very own sincere regret for not expressing appreciation to earlier.

Comments are closed.

Social Media Auto Publish Powered By : XYZScripts.com