By election : ಗುಂಡ್ಲುಪೇಟೆಯಲ್ಲಿ ಸಿ.ಎಂ ರೋಡ್‌ ಶೋ: ಮುಖ್ಯಮಂತ್ರಿಗಳ ವಾಹನದ ತಪಾಸಣೆ…

ಚಾಮರಾಜನಗರ: ಚಾಮರಾಜನಗರದ ಗುಂಡ್ಲುಪೇಟೆ ವಿಧಾನಸಭೆ ಕ್ಷೇತ್ರದಲ್ಲಿ ಸಿ.ಎಂ ಸಿದ್ದರಾಮಯ್ಯನವರ ಎರಡನೇ ದಿನದ ಪ್ರಚಾರ ಕಾರ್ಯ ಆರಂಭವಾಗಿದ್ದು,  ಶನಿವಾರ  ರೋಡ್‌ ಶೋ ಮೂಲಕ ಮತಯಾಚನೆ ಮಾಡುತ್ತಿದ್ದಾರೆ.  ಗುಂಡ್ಲುಪೇಟೆ ಪಟ್ಟಣದಲ್ಲಿರುವ ಕಾಂಗ್ರೆಸ್ ಕಚೇರಿಗೆ ಸಿಎಂ ಭೇಟಿ ನೀಡಿ,  ಮುಖಂಡರು, ಕಾರ್ಯಕರ್ತರೊಂದಿಗೆ ಮಾತುಕತೆ ನಡೆಸಿ ರೋಡ್‌ ಶೋ ಆರಂಭಿಸಿದ್ದಾರೆ.
ಗುಂಡ್ಲುಪೇಟೆ ವಿಧಾನಸಭೆ ಪ್ರವೇಶಿಸುತ್ತಿದ್ದಂತೆ ಚುನಾವಣಾಧಿಕಾರಿಗಳು ಮುಖ್ಯಮಂತ್ರಿಗಳ ವಾಹನ ತಪಾಸಣೆ ಮಾಡಿದರೂ, ತಪಾಸಣೆಗೆ ಸಂಪೂರ್ಣ ಸಹಕರಿಸಿದ ಸಿದ್ದರಾಮಯ್ಯ, ನಂತರ ರೋಡ್‌ ಶೋ ಮುಂದುವರಿಸಿದರು. ಇದೇ ಸಂದರ್ಭದಲ್ಲಿ ಹೋಂ ಮೀನಿಸ್ಟರ್ ಪರಮೇಸ್ವರ ಮತ್ತು ದಿನೇಶ್ ಗುಂಡುರಾವ್ ಪ್ರಯಾಣಿಸುತ್ತಿದ್ದ ವಾಹನದ ತಪಾಸಣೆ ಮಾಡಿದರೂ…
ಗರಗನಹಳ್ಲಿ ಗೇಟ್ ನಿಂದ ಆರಂಭವಾದ ರೋಡ್  ಶೋ , ಶೆಟಹಳ್ಲಿ, ಬೆರಂಬಾಡಿ, ಆರೆಪುರ, ಆಲತ್ತೊರು, ಮಂಚಳ್ಳಿ,  ಹಿರಿಕಾಟಿ,  ಮಲ್ಲಯ್ಯನಪುರದ ತನಕವೂ ನಡೆಯಲಿದೆ.  ಮುಖ್ಯಮಂತ್ರಿಗಳೊಂದಿಗೆ ಯು ಟಿ ಖಾದರ್. ಡಿಕೆ ಶಿವಕುಮಾರ್ ಭಾಗಿಯಾಗಿದ್ದು,  ವಿವಿಧ ಗ್ರಾಮಗಳಲ್ಲಿ ಕಾಂಗ್ರೆಸ್ ಪರ ಮತಯಾಚನೆ ಮಾಡಲಿದ್ದಾರೆ.

Comments are closed.