ಸೌದಿ ಅರೇಬಿಯಾದಲ್ಲಿ ಭೀಕರ ಅಪಘಾತ: ಒಂದೇ ಕುಟುಂಬ ಮೂವರು ಬಲಿ

ಸೌದಿ ಅರೇಬಿಯಾ: ಪುತ್ತೂರು ಮೂಲದ ಕುಟುಂಬ ಉದ್ಯೋಗವನ್ನ ಅರಸಿ ಸೌದಿಗೆ ಪಯಣ ಬೆಳೆಸಿತ್ತು. ಅಲ್ಲಿ ವಾಸವಿದ್ದ ಕುಟುಂಬಕ್ಕೆ ಇಂದು ದೊಡ್ಡ ಮಟ್ಟದ ಆಘಾತವಾಗಿದೆ. ಅಲ್ಲಿನ ತಬೂಕ್ ಸಮೀಪದ ಹಕಲ್ ಎಂಬಲ್ಲಿ ರಸ್ತೆ ಅಪಘಾತದಲ್ಲಿ ಒಂದೇ ಕುಟುಂಬದ ಮೂವರು ಸಾವನ್ನಪ್ಪಿದ್ದಾರೆ.

ಇವರು ಮಂಗಳೂರು ಸಮೀಪದ ಪುತ್ತೂರಿನವರಾಗಿದ್ದು, ವಜೀರ್ ಅಹ್ಮದ್, ಕಮರುನ್ನಿಸಾ ಹಾಗೂ ಎಳೆ ಮಗು ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ. ಈ ಅಪಘಾತ ಹೇಗಾಯಿತು ಎಂಬಿತ್ಯಾದಿ ವಿಷಯಗಳು ಇನ್ನಷ್ಟೇ ಹೊರಬೀಳಬೇಕಿದೆ.

Comments are closed.