Mandya : ಮುಖ್ಯ ಶಿಕ್ಷಕನ ಭೀಕರ ಕೊಲೆ : ಹಾಡುಹಗಲೇ ಕತ್ತುಕುಯ್ದು ಹತ್ಯೆ…

ಮಂಡ್ಯ:  ಕತ್ತುಕುಯ್ದು ಶಿಕ್ಷಕರೊಬ್ಬರನ್ನ ಬರ್ಬರವಾಗಿ ಹತ್ಯೆಗೈದ ಘಟನೆ ಶುಕ್ರವಾರ ಬೆಳ್ಳಂಬೆಳಗ್ಗೆ ಮಂಡ್ಯದ ಮದ್ದೂರು ತಾಲೂಕಿನ ಅರೆಚಾಕನಹಳ್ಳಿಯಲ್ಲಿ ನಡೆದಿದೆ.  ಕೆಲಸದ ನಿಮಿತ್ತ ಶಾಲೆಗೆ ಆಗಮಿಸುತ್ತಿದ್ದ ಮುಖ್ಯೋಪಾಧ್ಯಾಯ ಶಶಿಭೂಷನ್‌ (47)ರ ಬೈಕ್‌ಗೆ ಕಾರ್‌ನಿಂದ ಗುದ್ದಿದ ದುಷ್ಕರ್ಮಿಗಳು, ಕೆಳಗೆಬಿದ್ದ ಅವರನ್ನ ಕತ್ತು ಕುಯ್ದು ಕೊಲೆ ಮಾಡಿದ್ದಾರೆ.
ಬಿದರಹೊಸಹಳ್ಳಿ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಮುಖ್ಯಶಿಕ್ಷಕರಾಗಿ ಕಾರ್ಯ ನಿರ್ವಹಿಸುತ್ತಿದ್ದ ಶಿಶಿಭೂಷಣ್‌ ಅವರ ಕೊಲೆಗೆ ಕಾರಣ ಏನು ಎಂಬುದು ಇನ್ನೂ ತಿಳಿದುಬಂದಿಲ್ಲ. ಹಾಡ ಹಗಲೇ ನಡೆದ ಶಿಕ್ಷಕರ ಕೊಲೆಯಿಂದ ಗ್ರಾಮದಲ್ಲಿ ಆತಂಕ ಮನೆಮಾಡಿದೆ. ಕೆ.ಎಂ.ದೊಡ್ಡಿ ಪೊಲೀಸರು ಸ್ಥಳಕ್ಕೆ ಭೇಟಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ⁠⁠⁠⁠

Comments are closed.

Social Media Auto Publish Powered By : XYZScripts.com