ಇಂದಿನಿಂದ ಐಟಿ ಕಂಪನಿಗಳ ಕ್ಯಾಬ್ ಸೇವೆ ಸ್ಥಗಿತ : ಬಿಸಿಮುಟ್ಟಿಸಲಿದೆ ಲಾರಿ ಮಾಲಿಕರ ಮುಷ್ಕರ…

ಬೆಂಗಳೂರು : ಬರುವ ಸೋಮವಾರದಿಂದ ಐಟಿ ಕಂಪನಿಗಳ ಕ್ಯಾಬ್ ಸೇವೆ ಸ್ಥಗಿತಗೊಳ್ಳಲಿದ್ದು,  ಇಂಧನ, ಗ್ಯಾಸ್ ಟ್ಯಾಂಕರ್, ವಾಣಿಜ್ಯ ವಾಹನ ಕೂಡ ಸಂಚಾರವನ್ನ ಸ್ಥಗಿತಗೊಳಿಸಲಿದೆ. ಅಲ್ಲದೆ  ಸೋಮವಾರದಿಂದ  ಕರ್ನಾಟಕ ಸೇರಿದಂತೆ ವಿವಿಧ ರಾಜ್ಯಗಳಲ್ಲಿ ಪೆಟ್ರೋಲ್, ಗ್ಯಾಸ್ ಸರಬರಾಜು ಸ್ಥಗಿತಗಳ್ಳಲಿದೆ ಎಂದು ದಕ್ಷಿಣವಲಯ ಲಾರಿ ಮಾಲೀಕರ ಸಂಘದ ಪ್ರಧಾನ ಕಾರ್ಯದರ್ಶಿ  ಷಣ್ಮುಗಪ್ಪ ಹೇಳಿದ್ದಾರೆ.
ಶುಕ್ರವಾರ ಬೆಂಗಳೂರಿನ ಪ್ರೆಸ್‌ಕ್ಲಬ್‌ನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಕರ್ನಾಟಕ, ತಮಿಳುನಾಡು, ಆಂದ್ರಪ್ರದೇಶ, ಕೇರಳ, ಪಾಂಡಿಚೇರಿ, ಮತ್ತು ತೆಲಂಗಾಣದಲ್ಲಿ , ದಕ್ಷಿಣ ವಲಯ ಲಾರಿ ಮಾಲೀಕರ ಕ್ಷೇಮಾಭಿವೃದ್ಧಿ ಸಂಘ ಮುಷ್ಕರ ಕೈಗೊಳ್ಳಲಿದೆ ಎಂದು ತಿಳಿಸಿದ್ದಾರೆ.    19 ರಾಜ್ಯ ಹೆದ್ದಾರಿಗಳಲ್ಲಿ ಟೋಲ್ ಸಂಗ್ರಹಿಸುವುದನ್ನು ಹಿಂಪಡೆಯಬೇಕು,  ಥರ್ಡ್ ಪಾರ್ಟಿ ಪ್ರೀಮಿಯಂ ದರ ಏರಿಕೆ ಹಿಂಪಡೆಯಬೇಕು, ಎಂಬ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ  ಕೈಗೊಂಡಿರುವ ಲಾರಿ ಮಾಲೀಕರ ಮುಷ್ಕರಕ್ಕೆ ಟೂರಿಸ್ಟ್ ಟ್ಯಾಕ್ಸಿ, ಮ್ಯಾಕ್ಸಿಮ್ ಕ್ಯಾಬ್,  ಗ್ಯಾಸ್, ಪೆಟ್ರೋಲ್ ಟ್ಯಾಂಕರ್ ಗಳ ಮಾಲೀಕರೂ ಕೂಡ ಸಾಥ್‌ ನೀಡಿದ್ದಾರೆ ಹೀಗಾಗಿ ಸೋಮವಾರದಿಂದ ಖಾಸಗಿ ಕಂಪನಿಗಳ ಕ್ಯಾಬ್‌ ಸೇವೆ ಕೂಡ ಸ್ಥಗಿತಗೊಳ್ಳಲಿದೆ.

Comments are closed.

Social Media Auto Publish Powered By : XYZScripts.com