ಎರಡನೇ ಸಲ, ಮತ್ತೊಂದು ಸಲ ಬರೋಕೆ ರೆಡಿಯಾಗ್ತಿದೆ !

ಒಂದು ಚಿತ್ರ ಒಂದು ಸಲ ಬಿಡುಗಡೆಯಾಗೋದೇ ದೊಡ್ಡ ವಿಚಾರ. ಅಂಥಾದ್ರಲ್ಲಿ ಇಲ್ಲೊಂದು ಚಿತ್ರ ಒಂದು ಸಲ ಸಾಲದು ಅಂತ ಮತ್ತೊಂದು ಸಲ ಬಿಡುಗಡೆಗೆ ಸಜ್ಜಾಗ್ತಿದೆ. ಇದು ವಿವಾದಗಳಿಂದಲೇ ಹೆಸರು ಮಾಡಿದ ಚಿತ್ರ ‘ಎರಡನೇ ಸಲ’.

ಧನಂಜಯ ನಾಯಕತ್ವದ ಈ ಚಿತ್ರ ಸಾಕಷ್ಟು ವಿವಾದದಲ್ಲಿ ಮುಳುಗಿತ್ತು. ಆದ್ರೆ ಕೊನೆಗೆ ಅದೇನೋ ರಾಜಿ ಪಂಚಾಯ್ತಿ ನಡೆದು ಬಿಡುಗಡೆಯ ಭಾಗ್ಯ ಪಡೆದಿತ್ತು. ಬಂದಷ್ಟೇ ವೇಗದಲ್ಲಿ ಚಿತ್ರಮಂದಿರಗಳಿಂದ ಹೊರಹೋಗಿತ್ತು ಕೂಡಾ. ಆದ್ರೆ ಈಗ ಮತ್ತೆ ಈ ಚಿತ್ರವನ್ನು ರಿಲೀಸ್ ಮಾಡಲು ನಿರ್ಮಾಪಕ ಯೋಗೀಶ್ ನಾರಾಯಣ್ ಸಜ್ಜಾಗ್ತಿದ್ದಾರೆ.

ಗುರುಪ್ರಸಾದ್ ನಿರ್ದೇಶನದ, ಧನಂಜಯ ನಾಯಕತ್ವದ ‘ಎರಡನೇ ಸಲ’ ಟ್ರೇಲರ್ ನಿಂದಲೇ ಸಾಕಷ್ಟು ಸದ್ದು ಮಾಡಿತ್ತು. ಬಿಡುಗಡೆಯಾದ ಮೇಲೆ ಕೂಡಾ ಚಿತ್ರದ ಡಬಲ್ ಮೀನಿಂಗ್ ಡೈಲಾಗ್ ಗಳು ಸುದ್ದಿಯಲ್ಲಿದ್ದವು. ಆದ್ರೆ ಅದೇಕೋ ಚಿತ್ರಮಂದಿರಗಳಿಂದ ಬಲುಬೇಗನೇ ಎತ್ತಂಗಡಿ ಮಾಡಿಬಿಡ್ತು.

ತಮ್ಮ ಚಿತ್ರಕ್ಕೆ ನಿಜಕ್ಕೂ ದೊಡ್ಡ ಮಾರುಕಟ್ಟೆ ಗಿಟ್ಟಿಸಿಕೊಳ್ಳುವ ಶಕ್ತಿ ಇದೆ ಎನ್ನುವುದು ನಿರ್ಮಾಪಕರ ನಂಬಿಕೆ. ಹಾಗಾಗಿ ಶತಾಯಗತಾಯ ಈ ಚಿತ್ರವನ್ನು ಗೆಲ್ಲಿಸಲೇಬೇಕು ಎಂದು ಅವರು ನಿರ್ಧರಿಸಿದಂತಿದೆ. ಹಾಗಾಗಿ ಮತ್ತೊಮ್ಮೆ ಪಕ್ಕಾ ಲೆಕ್ಕಾಚಾರದೊಂದಿದೆ ಅತಿಶೀಘ್ರದಲ್ಲಿ ಥಿಯೇಟರ್ ಗೆ ಬರೋಕೆ ಎರಡನೇ ಸಲ ರೆಡಿಯಾಗಿದೆ. ಹಿಂದಿನ ಬಾರಿ ಕೈಹಿಡಿಯದ ಗೆಲುವು ಎರಡನೇ ಸಲವಾದ್ರೂ ಕೈಹಿಡಿಯುತ್ತಾ ಎನ್ನುವುದನ್ನು ಕಾದು ನೊಡಬೇಕಾಗಿದೆ.

11 thoughts on “ಎರಡನೇ ಸಲ, ಮತ್ತೊಂದು ಸಲ ಬರೋಕೆ ರೆಡಿಯಾಗ್ತಿದೆ !

Comments are closed.