ಅಯ್ಯಪ್ಪಸ್ವಾಮಿ ಮಾಲೆ ಧರಿಸಿದ ದರ್ಶನ್, ಏಪ್ರಿಲ್ 6ರಂದು ಶಬರಿಮಲೆಗೆ ಯಾತ್ರೆ !

ಅತ್ತ ಚಕ್ರವರ್ತಿ ಚಿತ್ರದ ಟ್ರೇಲರ್ ಬಿಡುಗಡೆಯಾಗಿ ಎಲ್ಲೆಡೆ ಭಾರೀ ಸೌಂಡು ಮಾಡುತ್ತಿರುವಾಗ್ಲೇ ಇತ್ತ ಚಿತ್ರದ ನಾಯಕ ಚಾಲೆಂಜಿಂಗ್ ಸ್ಟಾರ್ ದರ್ಶನ್ ಶಬರಿಮಲೆ ಯಾತ್ರೆಗೆ ಸಜ್ಜಾಗ್ತಿದ್ದಾರೆ.

ಇಂದು ಶ್ರೀರಾಂಪುರದ ಅಯ್ಯಪ್ಪ ಸ್ವಾಮಿ ದೇವಸ್ಥಾನದಲ್ಲಿ ದರ್ಶನ್ ಮಾಲಾಧಾರಣೆ ಮಾಡಿದ್ರು. ದರ್ಶನ್ ಜೊತೆ ಅವರ ಸಹೋದರ ದಿನಕರ್ ತೂಗುದೀಪ, ನಿರ್ದೇಶಕ ಶಿವಮಣಿ, ಎಂ ಡಿ ಶ್ರೀಧರ್, ಲಾಲಿ ವಾಸು ಸೇರಿದಂತೆ ಸುಮಾರು 25 ಜನ ಇಂದು ಅಯ್ಯಪ್ಪ ಸ್ವಾಮಿ ಮಾಲೆ ಧರಿಸಿದ್ರು.

ಸತತವಾಗಿ ಕಳೆದ 5 ವರ್ಷಗಳಿಂದ ಅಯ್ಯಪ್ಪ ಮಾಲೆ ಧರಿಸುತ್ತಿರುವ ದರ್ಶನ್ ಏಪ್ರಿಲ್ 6ರಂದು ಶಬರಿಮಲೆ ಯಾತ್ರೆಗೆ ತೆರಳಿದ್ದಾರೆ. ಅಲ್ಲಿವರೆಗೂ ಕಟ್ಟುನಿಟ್ಟಾಗಿ ವೃತ ಆಚರಿಸುತ್ತಾರೆ. ನಂತರ ತಲೆಮೇಲೆ ಇರುಮುಡಿ ಹೊತ್ತು ಯಾತ್ರೆ ಹೊರಡುತ್ತಾರೆ.

ಪ್ರತೀ ಬಾರಿಯೂ ತಾನು ಬೇಡಿದ್ದನ್ನು ಅಯ್ಯಪ್ಪ ಸ್ವಾಮಿ ಈಡೇರಿಸಿದ್ದಾನೆ. ಹಾಗಾಗಿ ಹರಕೆ ತೀರಿಸುವ ಜೊತೆಗೆ ದೇವರ ಸಾನಿಧ್ಯದಲ್ಲಿ ನೆಮ್ಮದಿ ಪಡೆಯಲು ಕಳೆದ 5 ವರ್ಷಗಳಿಂದ ನಿರಂತರವಾಗಿ ಮಾಲೆ ಧರಿಸಿ ಶಬರಿಮಲೆ ಯಾತ್ರೆಗೆ ತೆರಳುವುದಾಗಿ ದರ್ಶನ್ ಹೇಳಿದ್ರು.

Comments are closed.

Social Media Auto Publish Powered By : XYZScripts.com