By election : ಚುನಾವಣಾ ವೈಷಮ್ಯ : ಕಾರ್ಯಕರ್ತರ ನಡುವೆ ಕಲ್ಲು ತೂರಾಟ :ಇಬ್ಬರು ಗಾಯ…

ಮೈಸೂರು:  ನಂಜನಗೂಡು ವಿಧಾನಸಭಾ ಕ್ಷೇತ್ರದಲ್ಲಿ ಚುನಾವಣಾ ವೈಷಮ್ಯ ಭುಗುಲೆದ್ದಿದ್ದು, ಗುರುವಾರ ರಾತ್ರಿ ನಂಜನಗೂಡು ತಾಲೂಕಿನ ರಾಜೂರು ಗ್ರಾಮದಲ್ಲಿ  ಕಾಂಗ್ರೆಸ್, ಬಿಜೆಪಿ ಕಾರ್ಯಕರ್ತರ ನಡುವೆ ಪರಸ್ಪರ ಕಲ್ಲುತೂರಾಟ ನಡೆದಿದೆ.  ರಾಜೂರು ಗ್ರಾಮಕ್ಕೆ, ಗುರುವಾರ ರಾತ್ರಿ ನಟ ಜಗ್ಗೇಶ್ ಬಿಜೆಪಿ ಪರವಾಗಿ ಚುನಾವಣಾ ಪ್ರಚಾರಕ್ಕೆ ಆಗಮಿಸುವುದಕ್ಕೂ ಮುನ್ನ ಈ ಘಟನೆ ನಡೆದಿದೆ.
ಕಲ್ಲು ತೂರಾಟದ ವೇಳೆ ಇಬ್ಬರು ಅಮಾಯಕರಿಗೆ ಗಾಯವಾಗಿದ್ದು, ರಾಜೂರು ಗ್ರಾಮದ ಬಸವರಾಜು, ಚಿನ್ನಮ್ಮ ಗಾಯಗೊಂಡ ದುರ್ದೈವಿಗಳು.  ಗಾಯಾಳುಗಳಿಬ್ಬರನ್ನೂ ನಂಜನಗೂಡು ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ರಾಜೂರು ಗ್ರಾಮ ಹುಲ್ಲಹಳ್ಳೀ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ಬರುವುದರಿಂದ, ಹುಲ್ಲಹಳ್ಳಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು, ರಾಜೂರು ಗ್ರಾಮದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಂಡಿದ್ದಾರೆ.

Comments are closed.