By election : ಭದ್ರತೆಯ ದೃಷ್ಠಿಯಿಂದ ಮೈಸೂರಿಗೆ ಬರುತ್ತಿವೆ ಕೇಂದ್ರ ಮೀಸಲು ಪಡೆಯ 6 ತುಕಡಿಗಳು…

ಮೈಸೂರು:   ಚುನಾವಣಾ ಭದ್ರತೆಗಾಗಿ ಕೇಂದ್ರ ಮೀಸಲು ಪಡೆಯ 6 ತುಕಡಿಗಳನ್ನು ಕರೆಸಿಕೊಳ್ಳಲಾಗುತ್ತಿದೆ, ನಾಳೆಯೇ ಕೇಂದ್ರ ಮೀಸಲು ಪಡೆಯ ತುಕಡಿಗಳು ಆಗಮಿಸಲಿವೆ ಎಂದು ಜಿಲ್ಲಾ ಚುನಾವಣಾಧಿಕಾರಿ ಡಿ.ರಂದೀಪ್‌ ಶುಕ್ರವಾರ ತಿಳಿಸಿದ್ದಾರೆ. ಈ ಕುರಿತು ಮಾತನಾಡಿದ ಅವರು,  ಉಪ ಚುನಾವಣೆಯ ಇತಿಹಾಸದಲ್ಲಿ ಇದೇ ಮೊದಲ ಬಾರಿ ಇಷ್ಟೊಂದು ಪ್ರಮಾಣದಲ್ಲಿ ಕೇಂದ್ರ ಮೀಸಲು ಪಡೆಗಳನ್ನು ಕರೆಸಿಕೊಳ್ಳಲಾಗುತ್ತಿದ್ದು, ಉಪ ಚುನಾವಣೆಗಾಗಿ ನಾಲ್ವರು ವಿಶೇಷ ಚುನಾವಣಾ ವೀಕ್ಷಕರನ್ನು ನೇಮಕ ಮಾಡಲಾಗಿದ್ದೂ ಕೂಡ ಇದೇ ಮೊದಲು ಎಂದು ಹೇಳಿದ್ದಾರೆ. ಚುನವಾಣೆಯ ಕಣದಲ್ಲಿ ಜಿದ್ದಾಜಿದ್ದಿಯ ಹೋರಾಟ ಮಾಡುತ್ತಿರುವ ಕಾಂಗ್ರೆಸ್‌ ಹಾಗೂ ಬಿಜೆಪಿಗೆ ಪ್ರತಿಷ್ಠೆಯ ಕಣವಾಗಿರುವ ಹಿನ್ನೆಲೆಯಲ್ಲಿ, ನಂಜನಗೂಡು ವಿಧಾನಸಭಾ ಕ್ಷೇತ್ರ ಹಲವು ಪ್ರಥಮಗಳಿಗೆ ಸಾಕ್ಷಿಯಾಗುತ್ತಿದೆ.
ಈ ಮಧ್ಯೆ, ಕೇಂದ್ರ ಚುನಾವಣಾ ಆಯೋಗದ ನಿರ್ದೇಶನದ ಮೇರೆಗೆ ಮೈಸೂರು ಜಿಲ್ಲಾ ಆಹಾರ ಉಪನಿರ್ದೇಶಕ ಕಾ.ರಾಮೇಶ್ವರಪ್ಪರನ್ನ ನಂಜನಗೂಡು ಉಪ ಚುನಾವಣೆ ಮುಗಿಯುವರೆಗೂ ಬೇರೆಡೆಗೆ ವರ್ಗಾವಣೆ ಮಾಡದಂತೆ ಅಧಿಕೃತ ಅದೇಶ ಬಂದಿದೆ. ಇಲ್ಲಿಯವರೆಗೆ ನಂಜನಗೂಡು ಉಪ ಚುನಾವಣೆಗೆ ಸಂಬಂಧಿಸಿದಂತೆ ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ 29 ಲಕ್ಷ ರೂಪಾಯಿ ಹಣವನ್ನು ವಶ ಪಡಿಸಿಕೊಳ್ಳಲಾಗಿದೆ.

Comments are closed.

Social Media Auto Publish Powered By : XYZScripts.com