ಕೊಹ್ಲಿಗೆ ಪದ್ಮ ಶ್ರೀ ಗೌರವ

ಭಾರತ ಕ್ರಿಕೆಟ್ ತಂಡದ  ನಾಯಕ ವಿರಾಟ್ ಕೊಹ್ಲಿ ಅವರು ಗುರುವಾರ ರಾಷ್ಟ್ರಪತಿ ಭವನದಲ್ಲಿ ಪದ್ಮಶ್ರೀ ಪ್ರಶಸ್ತಿ ಸ್ವೀಕರಿಸಿದರು. ಸರಳ ಸಮಾರಂಭದಲ್ಲಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರಿಂದ ಕೊಹ್ಲಿ ಪದ್ಮ ಶ್ರೀ  ಪ್ರಶಸ್ತಿ ಪಡೆದರು.

ಇದೇ ವೇಳೆಯಲ್ಲಿ ರಿಯೋ ಒಲಿಂಪಿಕ್‌ನಲ್ಲಿ ಪದಕ ಪಡೆದ ಸಾಕ್ಷಿ ಮಲಿಕ್ ಹಾಗೂ ಜಿಮ್ನಾಸ್ಟಿಕ್‌ನಲ್ಲಿ ಶ್ರೇಷ್ಠ ಪ್ರದರ್ಶನ ತೋರಿ ಗಮನ ಸೆಳೆದ ದೀಪಾ ಕರ್ಮಾಕರ್ ಅಲ್ಲದೇ ಭಾರತ ಹಾಕಿ ತಂಡದ ನಾಯಕ ಪಿ.ಜೆ ಶ್ರೀಜೇಶ್, ಕರ್ನಾಟಕದ ವಿಕಾಸ್ ಗೌಡ ಸೇರಿದಂತೆ ಹಲವು ಕ್ರೀಡಾಪಟುಗಳಿಗೆ ಪದ್ಮಶ್ರೀ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಕೊಹ್ಲಿ ಕ್ಷಮೆ ಕೇಳಿದ ಬ್ರಾಡ್ ಹಾಡ್ಜ್

ಐಪಿಎಲ್‌ನಲ್ಲಿ ಆಡುವ ಉದ್ಧೇಶದಿಂದ ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ಅವರು ಆಸ್ಟ್ರೇಲಿಯಾ ವಿರುದ್ಧ ನಡೆದ ನಾಲ್ಕನೇ ಹಾಗೂ ಕೊನೆಯ ಟೆಸ್ಟ್ ಪಂದ್ಯದಿಂದ ದೂರ ಉಳಿದರು ಎಂಬ ವಿವಾದಾತ್ಮಕ ಹೇಳಿಕೆ ನೀಡಿದ್ದ ಆಸ್ಟ್ರೇಲಿಯಾದ ಮಾಜಿ ಆಟಗಾರ ಬ್ರಾಡ್ ಹಾಡ್ಜ್ ಗುರುವಾರ ಕ್ಷಮೆ ಕೇಳಿದ್ದಾರೆ.

ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಏಪ್ರಿಲ್ ೫ ರಿಂದ ಆರಂಭವಾಗಲಿದ್ದು, ಗುಜರಾತ್ ಲಯನ್ಸ್ ತಂಡದ ಕೋಚ್ ಆಗಿರುವ ಅವರು ವಿರಾಟ್ ಕೊಹ್ಲಿ ಕುರಿತು ನೀಡಿದ ಹೇಳಿಕೆ ತೀವ್ರ ವಿವಾದಕ್ಕೆ ಕಾರಣವಾಗಿತ್ತು.

ಮೂರನೇ ಟೆಸ್ಟ್ ಪಂದ್ಯದ ವೇಳೆಯಲ್ಲಿ ವಿರಾಟ್ ಕೊಹ್ಲಿ ಗಾಯಗೊಂಡಿದ್ದರು. ಹೀಗಾಗಿ ಅವರು ನಾಲ್ಕನೇ ಹಾಗೂ ಅಂತಿಮ ಟೆಸ್ಟ್ ಪಂದ್ಯದಿಂದ ಹೊರಗುಳಿದಿದ್ದರು. ಕೊನೆಯ ಟೆಸ್ಟ್ ಪಂದ್ಯದಲ್ಲಿ ಅಜಿಂಕ್ಯೆ ರಹಾನೆ ತಂಡವನ್ನು ಮುನ್ನಡೆಸಿದ್ದಾರೆ.

‘ಬ್ರಾಡ್ ಹಾಡ್ಜ್ ಅವರು ವಿರಾಟ್ ಕೊಹ್ಲಿ ಅವರ ಕ್ಷಮೆ ಕೇಳಿದ್ದಕ್ಕೆ ಭಾರತದ ಪ್ರಮುಖ ಸ್ಪಿನ್ನ ಬೌಲರ್ ಆರ್.ಅಶ್ವಿನ್ ಪ್ರತಿಕ್ರಿಯೆ ವ್ಯಕ್ತಪಡಿಸಿ ‘ಮಾರ್ಚ್ ೩೦ ವಿಶ್ವ ಕ್ಷಮೆ ದಿನ’ ಎಂದು ಹೇಳಿದ್ದಾರೆ.

One thought on “ಕೊಹ್ಲಿಗೆ ಪದ್ಮ ಶ್ರೀ ಗೌರವ

  • October 25, 2017 at 10:07 AM
    Permalink

    I was suggested this blog by my cousin. I’m not sure whether this post is written by him as nobody else know such detailed about my problem. You are wonderful! Thanks!

Comments are closed.

Social Media Auto Publish Powered By : XYZScripts.com